ಕೋಲಾರ: ನಾನು ಯಾರೊಂದಿಗೂ ಮಲಗುವುದಿಲ್ಲ. ಸಂಸದ ಕೆ.ಹೆಚ್. ಮುನಿಯಪ್ಪ ಅವರಿಗೆ ನನ್ನೊಂದಿಗೆ ಮಲಗಲು ಇಷ್ಟವಿರಬಹುದು. ಆದರೆ, ಅವರೊಂದಿಗೆ ಮಲಗುವುದಕ್ಕೆ ನನಗೆ ಇಷ್ಟವಿಲ್ಲ ಎಂದು ಸಂಸದರ ಹೇಳಿಕೆಗೆ ಸ್ಪೀಕರ್ ರಮೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸಂಸದ ಕೆ.ಹೆಚ್. ಮುನಿಯಪ್ಪ, ಸ್ಪೀಕರ್ ಹಾಗೂ ನಾನು ಗಂಡ ಹೆಂಡತಿ ಇದ್ದ ಹಾಗೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ರಮೇಶ್ ಕುಮಾರ್, ನಾನು ಗಂಡಸರೊಂದಿಗೆ ಮಲಗುವುದಿಲ್ಲ. ನನ್ನ ಮನೆಯಲ್ಲಿಯೇ ಮಲಗುತ್ತೇನೆ. ಸಪ್ತಪದಿ ತುಳಿದ ನನ್ನ ಹೆಂಡತಿಯೊಂದಿಗೆ ಮಾತ್ರ ವೈವಾಹಿಕ ಜೀವನ ಹೊಂದಿದ್ದು ಬೇರೆ ಯಾವುದೇ ಅನೈತಿಕ ಸಂಬಂಧ ಹೊಂದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಇನ್ನು ಕೆ.ಎಚ್.ಮುನಿಯಪ್ಪ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ರಮೇಶ್ ಕುಮಾರ್, ನಾನು ಜಡ್ಜ್ ಇದ್ದ ಹಾಗೆ. ಯಾವ ಪಕ್ಷಕ್ಕೂ ಸಹಮತ ನೀಡುವುದಿಲ್ಲ. ಹಾಗೆಯೇ, ಭಿನ್ನಮತವೂ ಇಲ್ಲ. ಎರಡೂ ಕಡೆಯವರು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ. ಹೀಗಾಗಿ ಪಕ್ಷದಲ್ಲಿರುವವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಜೊತೆಗೆ ನನ್ನ ಮನಸ್ಸಿನಲ್ಲಿರುವುದನ್ನುಹೇಳುವುದಕ್ಕೂ ಆಗುವುದಿಲ್ಲ ಎಂದರು.