ಕೋಲಾರ: ವ್ಯಕ್ತಿಯೋರ್ವ ವೈದ್ಯರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಆಸ್ಪತ್ರೆ ಎದುರು ವೈದ್ಯರು ಮತ್ತು ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆ ಜಿಲ್ಲೆಯ ಮುಳಬಾಗಿಲು ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು. ವಿನೋದ್ ಎಂಬಾತ ವೈದ್ಯ ಶ್ರೀನಿವಾಸ್ ಎಂಬುವರ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ವಿನೋದ್ ನಕಲಿ ದೃಢೀಕರಣ ಪತ್ರ ನೀಡುವಂತೆ ವೈದ್ಯ ಶ್ರೀನಿವಾಸ್ ಎಂಬುವರಿಗೆ ಧಮ್ಕಿ ಹಾಕಿದ್ದಾನೆ. ವೈದ್ಯರು ಒಪ್ಪದೇ ಇದ್ದಾಗ ಹಲ್ಲೆ ನಡೆಸಿದ್ದಾನೆ. ಘಟನೆಯನ್ನು ಖಂಡಿಸಿ ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ಬೀಗ ಹಾಕಿ, ಹಲ್ಲೆ ಮಾಡಿದ ವ್ಯಕ್ತಿಯನ್ನು ಬಂಧಿಸುವಂತೆ ಸಿಬ್ಬಂದಿ ಒತ್ತಾಯಿಸಿದರು. ಆರೋಪಿಯನ್ನು ಮುಳಬಾಗಿಲು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ತರಕಾರಿ ಖರೀದಿಸಿ ಮರಳುವಾಗ ಮರೆತೋಯ್ತು ಮನೆ ಹಾದಿ! ವೃದ್ಧೆಯ ಮನೆ ತಲುಪಿಸಿದ ಪೊಲೀಸರು