ETV Bharat / state

ಕೋಲಾರ: ಕಾಂಗ್ರೆಸ್​ ಪಾದಯಾತ್ರೆಗೆ ತೆರಳಿದ್ದ ಕಾರ್ಯಕರ್ತ ಶವವಾಗಿ ಪತ್ತೆ - Activist come to Congress padayatra was dead

ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕಾಂಗ್ರೆಸ್​​ ಆಯೋಜಿಸಿದ್ದ ಪಾದಯಾತ್ರೆಗೆ ಹೋಗಿದ್ದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ.

Activist who had gone to Congress padayatra was found dead
ಕಾಂಗ್ರೆಸ್​ ಪಾದಯಾತ್ರೆಗೆ ತೆರಳಿದ್ದ ಕಾರ್ಯಕರ್ತ ಶವವಾಗಿ ಪತ್ತೆ
author img

By

Published : Aug 26, 2022, 4:07 PM IST

ಕೋಲಾರ: ಕಾಂಗ್ರೆಸ್​​ ಪಾದಯಾತ್ರೆಗೆ ತೆರಳಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದು ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ಅನಾಥ ಶವವೆಂದು ತಿಳಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪೊಲೀಸರು ಅಂತ್ಯಕ್ರಿಯೆ ಮಾಡಿದ್ದಾರೆ.

ಕೋಲಾರ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಗೋವಿಂದಪ್ಪ (47) ಮೃತಪಟ್ಟಿರುವ ವ್ಯಕ್ತಿ. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕಾಂಗ್ರೆಸ್​​ ಪಾದಯಾತ್ರೆ ಆಯೋಜಿಸಿತ್ತು. ಇದಕ್ಕೆ ಗೋವಿಂದಪ್ಪ ತೆರಳಿದ್ದರು. ಈತನನ್ನು ಪಾದಯಾತ್ರೆಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಕರೆದುಕೊಂಡು ಹೋಗಿದ್ದರು.

ಇದನ್ನೂ ಓದಿ: ಕಾಂಗ್ರೆಸ್​ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತ ನಾಪತ್ತೆ, ದೂರು ದಾಖಲು

ಪಾದಯಾತ್ರೆಯಲ್ಲಿ ಭಾಗಿಯಾಗಿ ಮನೆಗೆ ವಾಪಸ್ ಆಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಗೋವಿಂದಪ್ಪನ ಬರುವಿಕೆಗಾಗಿ ಕಾಯುತ್ತಿದ್ದರು. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಹೊಸಕೋಟೆ ಪೊಲೀಸರು ಅಂತ್ಯಕ್ರಿಯೆ ಮಾಡಿರುವ ಮಾಹಿತಿ ತಿಳಿದು, ಕುಟುಂಬಸ್ಥರು ಅಲ್ಲಿಗೆ ಭೇಟಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.