ಕೋಲಾರ: ಕೋಲಾರದಲ್ಲಿ ಮೆದುಳು ಜ್ವರ ಪ್ರಕರಣ ಪತ್ತೆಯಾಗಿದ್ದು, ಆರೋಗ್ಯ ಇಲಾಖೆಯಿಂದ ಅಲರ್ಟ್ ಘೋಷಿಸಲಾಗಿದೆ. ಕೋಲಾರ ತಾಲ್ಲೂಕು ತೊಟ್ಲಿ ಗ್ರಾಮದಲ್ಲಿ ಮೆದುಳು ಜ್ವರ ಪ್ರಕರಣವೊಂದು ಪತ್ತೆಯಾಗಿರುವ ಹಿನ್ನೆಲೆ ಅಲರ್ಟ್ ಘೋಷಿಸಲಾಗಿದೆ.
ಕೋಲಾರ ತಾಲೂಕಿನ ಸುಗಟೂರು ಗ್ರಾಮದಲ್ಲಿಯೂ ಓರ್ವನಿಗೆ ಮೆದುಳು ಜ್ವರ ಪತ್ತೆಯಾಗಿದೆ. ಮೆದುಳು ಜ್ವರ ಸಾಂಕ್ರಾಮಿಕ ರೋಗವಾಗಿರುವ ಹಿನ್ನೆಲೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಗ್ರಾಮದ ಸುತ್ತಮುತ್ತ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಂದಿ ಸಾಕಾಣಿಕೆಯನ್ನು ನಿಷೇಧ ಮಾಡಲಾಗಿದೆ. ಜೊತೆಗೆ ನೀರು ಇರುವಂಥ ತೊಟ್ಟಿಗಳಲ್ಲಿ ಲಾರ್ವಾಹಾರಿ ಮೀನುಗಳನ್ನು ಬಿಡಲಾಗಿದ್ದು, ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಭೇಟಿ ಕೊಟ್ಟಿದ್ದಾರೆ.
ಅಲ್ಲದೆ ಗ್ರಾಮದಲ್ಲಿ ಜಲಸಮೀಕ್ಷೆ ಮಾಡುತ್ತಿದ್ದು, ಪಂಚಾಯ್ತಿ ವತಿಯಿಂದ ಗ್ರಾಮದಲ್ಲಿ ಸ್ವಚ್ಛತೆ ಮಾಡಲಾಗುತ್ತಿದೆ. ಇನ್ನು, ಒಂದರಿಂದ ೧೫ ವರ್ಷದ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಆರೋಗ್ಯ ಇಲಾಖೆ ವತಿಯಿಂದ ತಿಳುವಳಿಕೆ ನೀಡಲಾಗುತ್ತಿದೆ. ಅಲರ್ಟ್ ಘೋಷಣೆ ಮಾಡುತ್ತಿದ್ದಂತೆ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ಇದನ್ನೂ ಓದಿ: ಹನೂರಲ್ಲಿ ಮೆದುಳು ಜ್ವರ ಆತಂಕ: ಗಡಿಜಿಲ್ಲೆಯಲ್ಲಿ ಮೊದಲ ಶಂಕಿತ ಪ್ರಕರಣ ಪತ್ತೆ