ಕೋಲಾರ: ಇಷ್ಟ ಪಟ್ಟು ಸಾಕಿದ್ದ ಕೋಳಿಗಳು ಸತ್ತ ಪರಿಣಾಮ ಅವುಗಳಿಗೂ ಮನುಷ್ಯರಂತೆ ಅಂತ್ಯ ಸಂಸ್ಕಾರ ಮಾಡಿ ಆತ್ಮಕ್ಕೆ ಶಾಂತಿ ಕೋರಿದ ಅಪರೂಪ ಘಟನೆ ಜಿಲ್ಲೆಯಲ್ಲಿ ಜರುಗಿದೆ.
ತಾಲೂಕಿನ ತೊಟ್ಲಿ ಗ್ರಾಮದ ಟಿ.ವಿ.ಗೋಪಾಲ ಎಂಬುವರ ಮಗ ಮೌನೀಶ್ ಸೀಟಿ ಕೋಳಿ ಸಾಕಿದ್ದ. ಅವುಗಳನ್ನು ಮನೆಯ ಸದಸ್ಯರಂತೆ ನೋಡಿಕೊಳ್ಳುವ ಜೊತೆಗೆ ಗೆಳೆಯರಂತೆ ಅವುಗಳ ಜೊತೆ ಆಟವಾಡುತ್ತಿದ್ದ. ಕೋಳಿಗಳು ಕೂಡ ಅಷ್ಟೇ ಪ್ರೀಯಿಯಿಂದ ಸಾಕಿದ ಗೆಳೆಯನ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದವು.
ಆದ್ರೆ, ನಿನ್ನೆ ರಾತ್ರಿ ಕೋಳಿಗಳು ಸಾವಿಗೀಡಾಗಿದ್ದವು. ಪ್ರೀತಿಯಿಂದ ಸಾಕಿದ್ದ ಕೋಳಿಗಳನ್ನು ತನ್ನ ಗೆಳೆಯರ ಜೊತೆ ಸೇರಿಕೊಂಡು ತೋಟದ ಮನೆಯಲ್ಲಿ ಅಂತ್ಯ ಸಂಸ್ಕಾರ ಮಾಡುವ ಮೂಲಕ ಬಾಂಧವ್ಯ ಎಂಬುವುದು ಮನುಷ್ಯರ ಜೊತೆ ಅಷ್ಟೆ ಅಲ್ಲ ಪ್ರಾಣಿಗಳು ಕೂಡ ಬಂಧುಗಳಂತೆ ಮನುಷ್ಯನ ಜೀವನದ ಒಂದು ಭಾಗವಾಗಿವೆ ಎಂಬುವುದನ್ನು ತೋರಿಸಿಕೊಟ್ಟಿದ್ದಾನೆ ಈ ಬಾಲಕ. ಜೊತೆಗೆ ಮೂರನೇ ದಿನ ಹಾಲನ್ನು ಹಾಕಿ, ಕೋಳಿಗೆ ಇಷ್ಟವಾದ ಪದಾರ್ಥಗಳನ್ನಿಟ್ಟು ಆತ್ಮಕ್ಕೆ ಶಾಂತಿ ಕೋರಿದ್ದಾರೆ.