ETV Bharat / state

ಅನಾಥಾಶ್ರಮಕ್ಕೂ ಕಾಲಿಟ್ಟ ಕೊರೊನಾ.. 27 ಮಕ್ಕಳಲ್ಲಿ ಸೋಂಕು ದೃಢ!

ವಿದ್ಯಾರ್ಥಿನಿಯೋರ್ವಳಿಗೆ ಜ್ವರ ಹಾಗೂ ನೆಗಡಿ ಕಾಣಿಸಿಕೊಂಡ ಹಿನ್ನೆಲೆ‌ ಆಕೆಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಬಳಿಕ ಇಡೀ ಅನಾಥಾಶ್ರಮದಲ್ಲಿರುವ 65 ಮಕ್ಕಳನ್ನು ತಪಾಸಣೆಗೆ ಒಳಪಡಿಸಿದಾಗ, ಇವರಲ್ಲಿ 27 ಮಕ್ಕಳಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

author img

By

Published : Apr 5, 2021, 7:42 PM IST

Updated : Apr 5, 2021, 7:55 PM IST

27-students-from-kolar-orphanage-tests-positive-for-corona

ಕೋಲಾರ: ಕಳೆದೊಂದು ವರ್ಷದಿಂದ‌ ಜನರ ಬದುಕಿನಲ್ಲಿ ಆಟವಾಡಿದ್ದ ಮಹಾಮಾರಿ ಕೊರೊನಾ ಈಗ ಮತ್ತೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ. ಎರಡನೇ ಅಲೆಯಿಂದಾಗಿ ಸಾಕಷ್ಟು ಆತಂಕವನ್ನುಂಟು ಮಾಡಿದೆ. ಇದೀಗ ಕೊರೊನಾ ಅನಾಥಾಶ್ರಮಕ್ಕೂ ಎಂಟ್ರಿ ಕೊಟ್ಟಿದ್ದು, ಅನಾಥ ಮಕ್ಕಳಿಗೂ ವಕ್ಕರಿಸಿದೆ. ಈ ಮೂಲಕ ಸಾಕಷ್ಟು ಆತಂಕ ಸೃಷ್ಟಿಸಿದೆ.

ಅನಾಥಾಶ್ರಮದ ಮಕ್ಕಳಿಗೆ ಕೊರೊನಾ ಸೋಂಕು ದೃಢ

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಅತ್ತಿಗಿರಿಕಪ್ಪ ಗ್ರಾಮದಲ್ಲಿರುವ ಬಸೇರಾ ಅನಾಥಾಶ್ರಮದ ಸುಮಾರು 27 ಮಕ್ಕಳಲ್ಲಿ ಕೊರೊನಾ ಪತ್ತೆಯಾಗಿದೆ. ಮೊದಲಿಗೆ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಜ್ವರ ಹಾಗೂ ನೆಗಡಿ ಕಾಣಿಸಿಕೊಂಡ ಹಿನ್ನೆಲೆ‌ ಆಕೆಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಆ ವಿದ್ಯಾರ್ಥಿನಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು‌. ಇದ್ರಿಂದ ಎಚ್ಚೆತ್ತ ಅಧಿಕಾರಿಗಳು ಇಡೀ ಅನಾಥಾಶ್ರಮದಲ್ಲಿರುವ 65 ಮಕ್ಕಳನ್ನು ತಪಾಸಣೆಗೆ ಒಳಪಡಿಸಿದಾಗ, ಇವರಲ್ಲಿ 27 ಮಕ್ಕಳಲ್ಲಿ ಕೊರೊನಾ ಸೋಂಕು ಇರುವುದು ಖಚಿತವಾಗಿದೆ.

ಕೊರೊನಾ ಸೋಂಕು ಇರುವಂತಹ ಮಕ್ಕಳನ್ನು ಇದೇ ಅನಾಥಾಶ್ರಮದಲ್ಲಿ ಬೇರ್ಪಡಿಸಿ ಅವರನ್ನ ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇಡೀ ಬಸೇರಾ ಸಂಸ್ಥೆಯ ಕಟ್ಟಡವನ್ನು ಕಂಟೈನ್​ಮೆಂಟ್ ಝೋನ್ ಎಂದು‌ ಘೋಷಣೆ ಮಾಡಲಾಗಿದೆ. ಅನಾಥಾಶ್ರಮದಲ್ಲಿರುವ ಮಕ್ಕಳಲ್ಲಿ ಕೋಲಾರ, ಬಂಗಾರಪೇಟೆಯ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳೇ ಹೆಚ್ಚಾಗಿದ್ದಾರೆ. ಪ್ರತಿದಿನ ತರಗತಿಗಳಿಗೆ ಹೋಗಿ ಬರುವ ವಿದ್ಯಾರ್ಥಿಗಳು ಇವರಾಗಿದ್ದು, ಇವರ ಸಂಪರ್ಕಿತರ ಪರೀಕ್ಷೆ ಮಾಡುವ ಅನಿವಾರ್ಯತೆ ಈಗ ಎದುರಾಗಿದೆ.

ಕೊರೊನಾ ಕಾಟವು ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಯಲ್ಲಿ ಎನ್ನುವಂತಾಗಿದೆ. ರಾಜ್ಯದ ಗಡಿ ಜಿಲ್ಲೆ ಕೋಲಾರದಲ್ಲಿ ಕೊರೊನಾ ಎರಡನೇ ಅಲೆ ಆತಂಕ ದಿನೇ ದಿನೇ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಮತ್ತು ಆಡಳಿತ ವರ್ಗದವರು ಎಚ್ಚೆತ್ತುಕೊಂಡು ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್ ಮತ್ತು ಮಾಸ್ಕ್ ಧರಿಸುವ ಕುರಿತು ಗಮನಹರಿಸಬೇಕಿದೆ.

Last Updated : Apr 5, 2021, 7:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.