ETV Bharat / state

ಕೋಲಾರ: ಎಸ್. ಅಗ್ರಹಾರ ಕೆರೆಯಲ್ಲಿ ಈಜಲು ಹೋದ ಯುವಕರು ನೀರುಪಾಲು

ಎಸ್. ಅಗ್ರಹಾರ ಕೆರೆಯಲ್ಲಿ ಈಜಲು ಹೋದ ರೆಹಮತ್ ನಗರದ ನಿವಾಸಿಗಳಾದ ಇಮ್ರಾನ್ (22) ಹಾಗೂ ನಜೀರ್ (23) ಎಂಬುವವರು ನೀರುಪಾಲಾಗಿದ್ದಾರೆ.

2 died those who went for a swim in S Agrahara Lake
ಎಸ್ ಅಗ್ರಹಾರ ಕೆರೆಯಲ್ಲಿ ಈಜಲು ಹೋದವರು ನೀರುಪಾಲು
author img

By

Published : Oct 3, 2020, 8:07 AM IST

ಕೋಲಾರ‌: ತಾಲೂಕಿನ ಎಸ್. ಅಗ್ರಹಾರ ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಕಳೆದ ರಾತ್ರಿ ಜರುಗಿದೆ.

ಕೋಲಾರ‌ದ ರೆಹಮತ್ ನಗರದ ನಿವಾಸಿಗಳಾದ ಇಮ್ರಾನ್ (22) ಹಾಗೂ ನಜೀರ್ (23) ಮೃತ ಯುವಕರು. ಅಲ್ಲದೆ ಕಳೆದ ರಾತ್ರಿ ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳನ್ನು ಪತ್ತೆ ಹಚ್ಚಿದ್ದಾರೆ.

S Agrahara Lake
ಎಸ್. ಅಗ್ರಹಾರ ಕೆರೆ

ಇನ್ನು ಕೆ.ಸಿ. ವ್ಯಾಲಿ ನೀರಿನಿಂದಾಗಿ ಕೋಲಾರ ತಾಲೂಕಿನ ಅಗ್ರಹಾರ ಕೆರೆ ತುಂಬಿರುವ ಪರಿಣಾಮ ಕೆರೆಯ ಬಳಿ ಫಾಲ್ಸ್ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರು. ಅಲ್ಲದೆ ಫಾಲ್ಸ್ ನಿರ್ಮಾಣವಾಗಿದ್ದ ಸ್ಥಳದಲ್ಲಿ ಅಪಾಯಕಾರಿ ಎಂದು ಸೂಚನಾ ಫಲಕಗಳು ಹಾಕಿದ್ದರೂ ಕೂಡ ಎಚ್ಚರಿಕೆ ವಹಿಸದ ಪ್ರವಾಸಿಗರು ಕೆರೆ ಕಟ್ಟೆ ಮೇಲೆ ಕಾಲ ಕಳೆಯುತ್ತಾರೆ.

ನಿನ್ನೆ ಸಂಜೆ ಈಜಲು ತೆರಳಿದ್ದ ಇಬ್ಬರು ಯುವಕರು ಆಯ ತಪ್ಪಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟ‌ನೆ ಜರುಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.