ಕೊಡಗು: ಪಡಿತರ ಅಂಗಡಿಯಿಂದ ವಿತರಿಸಿರುವ ಗೋಧಿಯಲ್ಲಿ ಹುಳುಗಳು ಪತ್ತೆಯಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ಇಂಜಲಗೆರೆ ಗ್ರಾಮದಲ್ಲಿ ನಡೆದಿದೆ.
ಬಡವರಿಗೆ ವಿತರಿಸಿರುವ ಆಹಾರ ಧಾನ್ಯದಲ್ಲಿ ಸಂಪೂರ್ಣ ಹುಳು ಹಿಡಿದಿದ್ದು, ಇಂತಹ ಕಳಪೆ ಆಹಾರ ಧಾನ್ಯ ವಿತರಿಸಿದ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾ ಇರುವುದರಿಂದ ಸ್ವಚ್ಛತೆ ಕಾಪಾಡಿ ಕೊಳ್ಳುವಂತೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಇಂತಹ ಧಾನ್ಯ ವಿತರಿಸಿದ್ರೆ ಹೇಗೆ ತಿನ್ನುವುದು. ಗ್ರಾಮದ 30 ಕ್ಕೂ ಹೆಚ್ಚು ಜನರಿಗೆ ಇಂತಹದ್ದೆ ಧಾನ್ಯ ವಿತರಿಸಿದ್ದಾರೆ. ಇಂತಹ ಆಹಾರ ತಿಂದು ನಾವು ಸಾಯಬೇಕಾ?. ಇಲ್ಲಾ ಕೊರೊನಾ ಸಮಸ್ಯೆಯಿಂದ ಹೆದರಿ ಹಸಿವಿನಿಂದ ಸಾಯಬೇಕಾ ಎಂದು ಅಧಿಕಾರಿಗಳಿಗೆ ಇಂಜಲಗೆರೆ ನಿವಾಸಿ ಅರ್ಪಣಾ ಪ್ರಶ್ನಿಸಿದ್ದಾರೆ.