ETV Bharat / state

ಮಡಿಕೇರಿ ಮಹಿಳಾ ದಸರಾ.. ಬಲೂನ್ ಶೂಟ್, ಮದರಂಗಿ ಸ್ಪರ್ಧೆ, ಅತ್ತೆ-ಸೊಸೆ ಜುಗಲ್​ ಬಂದಿ - ದಸರಾ ಮಹೋತ್ಸವ

ಬಲೂನ್ ಶೂಟ್, ಮದರಂಗಿ ಸ್ಪರ್ಧೆ, ಫ್ಯಾನ್ಸಿ ಡ್ರೆಸ್, ಮಹಿಳೆಯರು ತಯಾರಿಸಿದ ಗೃಹ ಬಳಕೆ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟ, ಮಹಿಳಾ ಸಂತೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ.. ಇದು ಮಡಿಕೇರಿ ಮಹಿಳಾ ದಸರಾದಲ್ಲಿ ಕಂಡು ಬಂದ ದೃಶ್ಯಗಳು.

Women Dasara Celebration At  Madikeri
ಮಡಿಕೇರಿ ಮಹಿಳಾ ದಸರಾದಲ್ಲಿ ಸಂಭ್ರಮಿಸಿದ ಮಹಿಳೆಯರು
author img

By

Published : Oct 1, 2022, 9:36 AM IST

ಕೊಡಗು: ಮಂಜಿನ ನಗರಿ ಮಡಿಕೇರಿಯಲ್ಲಿ ಬೆಳಕಿನ ಹಬ್ಬ ದಸರಾ ಮಹೋತ್ಸವ 4ನೇ ದಿನಕ್ಕೆ ಕಾಲಿಟ್ಟಿದೆ. ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಮಡಿಕೇರಿ ದಸರಾ ಜನೋತ್ಸವ ಕಾರ್ಯಕ್ರಮದ ಪ್ರಯುಕ್ತ ಮಹಿಳಾ ದಸರಾ ನಡೆಯಿತು. ಮಹಿಳೆಯರಿಗಾಗಿ‌ಯೇ ನಡೆದ ದಸರಾದಲ್ಲಿ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಗಾಂಧಿ ಮೈದಾನದಲ್ಲಿ ನಡೆದ ಬಲೂನ್ ಶೂಟ್, ಮದರಂಗಿ ಸ್ಪರ್ಧೆ, ಫ್ಯಾನ್ಸಿ ಡ್ರೆಸ್, ಫ್ಯಾಶನ್ ಶೋ, ಮಹಿಳೆಯರು ತಯಾರಿಸಿದ ಗೃಹ ಬಳಕೆ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟ, ಮಹಿಳಾ ಸಂತೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ ಹೀಗೆ ಹಲವು ಕಾರ್ಯಕ್ರಮದಲ್ಲಿ ಮಹಿಳೆಯರು ವಯಸ್ಸಿನ ಭೇದವಿಲ್ಲದೆ ಭಾಗವಹಿಸಿದ್ದರು.

Women Dasara Celebration At Madikeri
ಗೃಹ ಬಳಕೆ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಪ್ರದರ್ಶನ

ಕೊಡಗಿನಲ್ಲಿ ಬಂದೂಕು ಹೊಂದಲು ಪರವಾನಿಗೆ ಇರುವ ಕಾರಣ ಬಂದೂಕು ಸ್ಪರ್ಧೆ ನಡೆಸಲಾಯಿತು. ಮಹಿಳೆಯರು ಕಟ್ಟಿದ್ದ ಬಲೂನಿಗೆ ಗನ್​ನಿಂದ ಶೂಟ್ ಮಾಡಿದರು. ಅಲ್ಲದೇ ಮಹಿಳೆಯರು ಮದರಂಗಿ ಹಾಕುವ ಸ್ಪರ್ಧೆಯಲ್ಲಿ ತಮ್ಮ ಕೈಚಳಕ ತೋರಿಸಿದರು. ಜತೆಗೆ ನೃತ್ಯ ಪಟುಗಳು ತಮ್ಮ ಕಲೆಯನ್ನು ಪ್ರದರ್ಶಿಸಿದರು. ತುಳುನಾಡಿನ ಜಾನಪದ ಕಲೆಯನ್ನು ಬಿಂಬಿಸುವ ತುಳು ಹಾಡಿಗೆ ಮಹಿಳೆಯರು ಹೆಜ್ಜೆ ಹಾಕಿದರು.

ಇನ್ನು ಮಹಿಳಾ ದಸರಾದಲ್ಲಿ ಮಹಿಳೆಯರು ತಯಾರಿಸಿದ ಆಭರಣಗಳ ಪ್ರದರ್ಶನದ ಮತ್ತು ಮಾರಟಕ್ಕೆ ಅವಕಾಶ ಮಾಡಲಾಗಿತ್ತು. ವಿವಿಧ ಮಹಿಳಾ ಸಂಘಟನೆಯವರು ತಯಾರು ಮಾಡಿದ ಗೃಹೋಪಯೋಗಿ ವಸ್ತುಗಳನ್ನು ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಐತಿಹಾಸಿಕ ಮಂಜಿನ ನಗರಿ ಮಡಿಕೇರಿ ದಸರಾ ಉತ್ಸವಕ್ಕೆ ಅದ್ಧೂರಿ ಚಾಲನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.