ETV Bharat / state

ಆದಿವಾಸಿಗಳ ಕುಲ ಕಸುಬಿಗೆ ಅರಣ್ಯ ಇಲಾಖೆ ಅಡ್ಡಿ? - ಆದಿವಾಸಿ ಕುಟುಂಬಗಳು

18ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ಹಲವು ವರ್ಷಗಳಿಂದ ಪೊರಕೆ ತಯಾರಿಸಿ, ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದವು. ಆದರೆ ಇದೀಗ ಮೀಸಲು ಅರಣ್ಯ ಪ್ರದೇಶವಾದ ಹಿನ್ನೆಲೆ ಕಾಡಿನಿಂದ ಗಿಡಗಳನ್ನು ಕತ್ತರಿಸಿ ತರಲು ಅರಣ್ಯ ಇಲಾಖೆಯವರು ಅಡ್ಡಿಪಡಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.‌

ಕುಲ ಕಸುಬನ್ನು ಮುಂದುವರೆಸಿಕೊಂಡು ಹೋಗುತ್ತಿರುವ  ಆದಿವಾಸಿ ಕುಟುಂಬಗಳು

author img

By

Published : Dec 7, 2020, 5:42 PM IST

ನಾಪೋಕ್ಲು (ಕೊಡಗು): ನಾಪೋಕ್ಲು ಸಮೀಪದ ಕಣ್ವಬಲಮುರಿ ಗ್ರಾಮದ 18ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ಹಲವು ವರ್ಷಗಳಿಂದ ಪೊರಕೆ ತಯಾರಿಸಿ, ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಹಿರಿಯರಿಂದ ಬಂದಿರುವ‌ ಕುಲ ಕಸುಬನ್ನು ಕೊರೊನಾ ಸಂಕಷ್ಟದ ನಡುವೆಯೂ ಮುಂದುವರೆಸುತ್ತಿದ್ದಾರೆ.

ಆದಿವಾಸಿಗಳ ಕುಲ ಕಸುಬಿಗೆ ಅರಣ್ಯ ಇಲಾಖೆ ಅಡ್ಡಿ ಆರೋಪ

ನೆರೆಯ ಕೇರಳ ರಾಜ್ಯದ ಇರಿಟ್ಟಿಯ ಬೆಟ್ಟಗಳಿಂದ ಮಕ್ಕಿ, ಕುರುಂದೋಟಿ, ತಾಳಿಕಡ್ಡಿಗಳನ್ನು ತಂದು ಕಣ್ವ ಬಲಮುರಿಯಲ್ಲಿ ಪೊರಕೆಗಳನ್ನು ಸಿದ್ಧಪಡಿಸುತ್ತಾರೆ. ಮನೆ ಪೊರಕೆ, ತಾಳಿ ಪೊರಕೆ ಹಾಗೂ ಕಡ್ಡಿ ಪೊರಕೆಗಳನ್ನು ತಯಾರಿ ಮೊದಲು ಮನೆಮನೆಗೆ ತೆರಳಿ ಮಾರಾಟ ಮಾಡುತ್ತಿದ್ದರು. ಜೊತೆಗೆ ರೈತರಿಗೆ ಪೊರಕೆ ಕೊಟ್ಟು ಅವರಿಂದ ಭತ್ತ ಪಡೆಯುವ ಸಂಪ್ರದಾಯ ಸಹ ಜಾರಿಯಲ್ಲಿತ್ತು. ಆದರೆ ಇದೀಗ ಹಣಕ್ಕೆ ಪೊರಕೆ ಮಾರಾಟ ಮಾಡುತ್ತಿದ್ದು, ಪೊರಕೆವೊಂದಕ್ಕೆ 50 ರೂಪಾಯಿ ನಿಗದಿಪಡಿಸಿದ್ದಾರೆ.‌

ಹಿಂದೆ ತಾಳಿಗಿಡಗಳು ಎಲ್ಲೆಂದರಲ್ಲಿ ಸಿಗುತ್ತಿದ್ದವು. ಆದರೆ ಇತ್ತೀಚೆಗೆ ದೂರ ತೆರಳಬೇಕಾಗಿದೆ. ಹೆಚ್ಚಾಗಿ ಈ ಗಿಡಗಳು ಮೀಸಲು ಅರಣ್ಯ ಪ್ರದೇಶದಲ್ಲಿ ಕಂಡುಬರುವುದರಿಂದ ಕಾಡಿನಿಂದ ಗಿಡಗಳನ್ನು ಕತ್ತರಿಸಿ ತರಲು ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುತ್ತಾರೆ ಎಂಬ ಆರೋಪಗಳು ಕೇಳಿಬಂದಿವೆ.

ಒಂದೆಡೆ ಪೂರ್ವಜರಿಂದ ಬಂದ ಕಸುಬನ್ನು ಬಿಡುವಂತಿಲ್ಲ, ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಪೊರಕೆಗಳು ಲಭಿಸುತ್ತಿದ್ದು, ನಾವು ಹೊತ್ತುಕೊಂಡು ಹೋಗಿ ಮಾರುವುದು ಕಷ್ಟಕರ. ಪ್ರತಿವರ್ಷ ಕಡ್ಡಿಗಳನ್ನು ಒಣಗಿಸಿಕೊಂಡು ತರುತ್ತಿದ್ದೆವು. ಆದರೆ ಪ್ರಸ್ತುತ ಲಾಕ್‌ಡೌನ್ ಹಿನ್ನೆಲೆ ಸಮರ್ಪಕ ಸಾರಿಗೆ ವ್ಯವಸ್ಥೆಯಿಲ್ಲದೆ ಕಷ್ಟಪಡುತ್ತಿದ್ದೇವೆ ಎಂದು 'ಈಟಿವಿ ಭಾರತ'ದೊಂದಿಗೆ ತಮ್ಮ ಆದಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.