ETV Bharat / state

ಎಂ.ಕೆ.ಗಣಪತಿ ಕುಟುಂಬಕ್ಕೆ ಕಾನೂನಾತ್ಮಕ ಸಹಕಾರ ನೀಡಲು ಸಿದ್ಧ: ಶಾಸಕ ಕೆ.ಜಿ.ಬೋಪಯ್ಯ

author img

By

Published : Oct 31, 2019, 3:58 PM IST

ಡಿವೈಎಸ್‌ಪಿ ಎಂ.ಕೆ.ಗಣಪತಿ ಸಾವು ಅನುಮಾನಾಸ್ಪದವಾಗಿದ್ದು ಈಗಾಗಲೇ ಸಿಬಿಐ ಕೋರ್ಟ್‌ಗೆ ವರದಿ ನೀಡಿದೆ. ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಲು ನಾನು ಸಹಕಾರ ನೀಡುತ್ತೇನೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದ್ದಾರೆ.

ಶಾಸಕ ಕೆ.ಜಿ.ಬೋಪಯ್ಯ

ಕೊಡಗು: ಡಿವೈಎಸ್‌ಪಿ ಎಂ.ಕೆ.ಗಣಪತಿ ಅನುಮಾನಾಸ್ಪದ ಸಾವು ಪ್ರಕರಣ ಸಂಬಂಧ ಈಗಾಗಲೇ ಸಿಬಿಐ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಮೃತ ಅಧಿಕಾರಿಯ ಕುಟುಂಬಕ್ಕೆ ಕಾನೂನಾತ್ಮಕವಾಗಿ ಸಹಕಾರ ನೀಡಲು ಸಿದ್ದರಿರುವುದಾಗಿ ಮಾಜಿ ಸ್ಪೀಕರ್ ಹಾಗೂ ಶಾಸಕ ಕೆ‌.ಜಿ‌.ಬೋಪಯ್ಯ ಹೇಳಿದ್ದಾರೆ.

3 ವರ್ಷಗಳ ನಂತರ ಪೊಲೀಸ್ ಅಧಿಕಾರಿ ಎಂ.ಕೆ.ಗಣಪತಿ ಸಾವಿಗೆ ಸಂಬಂಧ ಮಡಿಕೇರಿ ನ್ಯಾಯಾಲಯಕ್ಕೆ ಸಿಬಿಐ ಬಿ ರಿಪೋರ್ಟ್‌ ಸಲ್ಲಿಸಿದೆ.

ಶಾಸಕ ಕೆ.ಜಿ.ಬೋಪಯ್ಯ

ಕೇಂದ್ರ ತನಿಖಾ ಸಂಸ್ಥೆಯ ವರದಿ ಬಹಿರಂಗಗೊಂಡ ಬಳಿಕವಷ್ಟೇ ಪೂರ್ಣ ಮಾಹಿತಿ ಸಿಗಲಿದೆ. ಬಿ ರಿಪೋರ್ಟ್ ಆಗಿದ್ದರೆ ಮತ್ತೆ ಅದನ್ನು ಪ್ರಶ್ನಿಸುವ ಹಕ್ಕು ದೂರುದಾರರಿಗೆ ಇದೆ. ಪ್ರಾಮಾಣಿಕ, ದಕ್ಷ ಅಧಿಕಾರಿ ಶಂಕಾಸ್ಪದ ಸಾವಿಗೆ ಕಾರಣ ತಿಳಿಯಬೇಕು. ಈ ಬಗ್ಗೆ ಅವರ ಸಹೋದರನನ್ನು ಸಂಪರ್ಕಿಸಿ ಮಾಹಿತಿ ಪಡೆಯುತ್ತೇನೆ ಎಂದರು.

Intro:ಮೃತ ಡಿವೈ‌ಎಸ್ಪಿ ಕುಟುಂಬಕ್ಕೆ ಸಹಕಾರ ಕೊಡುತ್ತೇವೆ: ಶಾಸಕ ಕೆ.ಜಿ.ಬೋಪಯ್ಯ ಹೇಳಿಕೆ

ಕೊಡಗು: ಡಿವೈಎಸ್‌ಪಿ ಎಂ.ಕೆ.ಗಣಪತಿ ಅನುಮಾನಾಸ್ಮದ ಸಾವು ಪ್ರಕರಣಕ್ಕೆ ಸಿಬಿಐ ವರದಿ ನೀಡಿರುವ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಲು ನಾವು ಸಹಕಾರ ಕೊಡುತ್ತೇವೆ ಎಂದು ಮಾಜಿ ಸ್ಪೀಕರ್ ಹಾಗೂ ಶಾಸಕ ಕೆ‌.ಜಿ‌.ಬೋಪಯ್ಯ ಪ್ರತಿಕ್ರಿಯೆ ನೀಡಿದ್ದಾರೆ.‌
3 ವರ್ಷಗಳ ನಂತರ ಡಿವೈಎಸ್‌ಪಿ ಎಂ.ಕೆ.ಗಣಪತಿ ಸಾವಿಗೆ ಸಂಬಂಧಿಸಿದಂತೆ ಮಡಿಕೇರಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಸಿಬಿಐ ಕುರಿತು ಪ್ರತಿಕ್ರಿಯಿಸಿರುವ ಅವರು, ಸಿಬಿಐ ವರದಿ ಸಲ್ಲಿಕೆ ಬಗ್ಗೆ ಮಾಧ್ಯಮಗಳನ್ನು ನೋಡಿ ತಿಳಿದಿರುವೆ. ಮೂಲಗಳ ಪ್ರಕಾರ ಸಿಬಿಐ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ. ಈ ಬಗ್ಗೆ ವರದಿ ಬಹಿರಂಗ ಬಳಿಕ ಪೂರ್ಣ ಮಾಹಿತಿ ಸಿಗುವ ವಿಶ್ವಾಸವಿದೆ.ಬಿ ರಿಪೋರ್ಟ್ ಆಗಿದ್ದರೆ ಮತ್ತೆ ಅದನ್ನು ಪ್ರಶ್ನಿಸುವ ಹಕ್ಕು ದೂರುದಾರರಿಗೆ ಇದೆ.ಪ್ರಾಮಾಣಿಕ, ದಕ್ಷ ಅಧಿಕಾರಿ ಅನುಮಾನಾಸ್ಪದ ಸಾವಿಗೆ ಕಾರಣ ತಿಳಿಯಬೇಕು. ಈ ಬಗ್ಗೆ ಅವರ ಸಹೋದರನನ್ನು ಸಂಪರ್ಕಿಸಿ ಮಾಹಿತಿ ಪಡೆಯುತ್ತೇನೆ ಎಂದಿದ್ದಾರೆ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು. Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.