ಕೊಡಗು: ಯುವಕನೊಬ್ಬ ತನ್ನ ಕಾಲು ಸ್ವಾಧೀನ ಕಳೆದುಕೊಂಡಂತೆ ನಾಟಕವಾಡಿ ಭಿಕ್ಷೆ ಬೇಡುತ್ತಿದ್ದಾಗ ಸ್ಥಳೀಯರ ಕೈಗೆ ಸಿಕ್ಕಿ ಗೂಸಾ ತಿಂದಿರುವ ಘಟನೆ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆಯಲ್ಲಿ ನಡೆದಿದೆ.
ಅಂಕೋಲ ಮೂಲದ ವಿನಯ್ ದಿವ್ಯಾಂಗನ ಸೋಗಿನಲ್ಲಿ ನಟಿಸುತ್ತಿದ್ದ ವ್ಯಕ್ತಿ. ಅನುಮಾನ ಬಂದು ಸ್ಥಳೀಯರು ಆತನನ್ನು ವಿಚಾರಿಸಿದಾಗ ನಾಟಕ ಆಡುತ್ತಿರುವುದು ಗೊತ್ತಾಗಿದೆ. ನಂತರ ಸಾರ್ವಜನಿಕರು ಯುವಕನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.