ETV Bharat / state

ದೀಪಾವಳಿ ವಿಶೇಷ: ಕೊಡಗಿನ ಮಾರುಕಟ್ಟೆಗೆ ಲಗ್ಗೆ ಇಟ್ಟ ತರಹೇವಾರಿ ಮೇಣದಬತ್ತಿಗಳು

ದೀಪಾವಳಿ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಲು ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಕೈಕೇರಿ ಗ್ರಾಮದಲ್ಲಿ ವಿಭಿನ್ನ ಮಾದರಿಯ ಮೇಣದಬತ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

Variety of different candles are selling in Kodagu market
ಕೊಡಗಿನ ಮಾರುಕಟ್ಟೆಗೆ ಲಗ್ಗೆ ಇಟ್ಟ ವಿಭಿನ್ನ ಮೇಣದಬತ್ತಿಗಳು
author img

By

Published : Nov 4, 2021, 6:21 PM IST

ಮಡಿಕೇರಿ(ಕೊಡಗು): ನಾಡಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಮನೆಗಳ ಮುಂದೆ ದೀಪಗಳು ರಾರಾಜಿಸುತ್ತಿವೆ. ಇದರ ನಡುವೆ ಇದೀಗ ಮಾರುಕಟ್ಟೆಗೆ ವಿಭಿನ್ನ ಹಾಗೂ ವಿನೂತನವಾದ ಮೇಣದಬತ್ತಿಗಳು ಲಗ್ಗೆ ಇಟ್ಟಿದ್ದು, ಜನರನ್ನು ಆಕರ್ಷಿಸುತ್ತಿವೆ.

ಕೊಡಗಿನ ಮಾರುಕಟ್ಟೆಗೆ ಲಗ್ಗೆ ಇಟ್ಟ ವಿಭಿನ್ನ ಮೇಣದಬತ್ತಿಗಳ ಕುರಿತು ಮಾಹಿತಿ

ಜಿಲ್ಲೆಯಲ್ಲಿ ದೀಪಾವಳಿಯಂದು ಪಟಾಕಿ ಸಿಡಿಸದೆ ಕ್ಯಾಂಡಲ್​ಗಳನ್ನು ಹಚ್ಚಿ ಹಬ್ಬವನ್ನು ಆಚರಿಸುತ್ತಾರೆ. ಹೀಗಾಗಿ ಎಲ್ಲೆಡೆ ಮೇಣದಬತ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಜಿಲ್ಲೆಯ ವೀರಾಜಪೇಟೆ ತಾಲೂಕಿನ ಕೈಕೇರಿ ಗ್ರಾಮದಲ್ಲಿನ ಅಂಗಡಿಯಲ್ಲಿ ತಯಾರಾಗಿರುವ ಮೇಣದಬತ್ತಿಗಳು ವಿಭಿನ್ನ ಹಾಗೂ ವಿಶೇಷವಾಗಿದ್ದು, ಒಂದಕ್ಕಿಂತ ಒಂದು ಜನರನ್ನು ಸೆಳೆಯುತ್ತಿವೆ.

Variety of different candles are selling in Kodagu market
ಕೊಡಗಿನ ಮಾರುಕಟ್ಟೆಗೆ ಲಗ್ಗೆ ಇಟ್ಟ ವಿಭಿನ್ನ ಮೇಣದಬತ್ತಿಗಳು

ಕೈಕೇರಿ ಗ್ರಾಮದ ಶ್ರೀನಿವಾಸ್ ಪ್ರಸಾದ್ ಎಂಬುವವರ ಅಂಗಡಿಯಲ್ಲಿ 5 ರೂಪಾಯಿಯಿಂದ 2 ಸಾವಿರಕ್ಕೂ ಅಧಿಕ ಮೊತ್ತದ ಬಣ್ಣ ಬಣ್ಣದ ಮೇಣದಬತ್ತಿಗಳು ಕಾಣಸಿಗುತ್ತವೆ. ಇಲ್ಲಿ ದೀಪಾವಳಿ ಹಬ್ಬಕ್ಕಾಗಿಯೇ ವಿಶೇಷವಾಗಿ ಅನೇಕ ಬಗೆಯ ಕ್ಯಾಂಡಲ್​ಗಳನ್ನು ತಯಾರಿಸಲಾಗಿದೆ. ಕಾಫಿ ಫ್ಲೇವರ್, ಸ್ಟ್ರಾಬೆರಿ ಹೀಗೆ ಪರಿಮಳ ಸೂಸುವ ಮೇಣದಬತ್ತಿಗಳು ಲಭ್ಯವಿವೆ.

ಗ್ಲಾಸ್​​​​ನಲ್ಲಿ ತುಂಬಲಾಗಿರುವ ಲಿಕ್ವಿಡ್ ಮೇಣದಬತ್ತಿಗಳು, ಹೂವು, ಹಣ್ಣಿನ, ಗೊಂಬೆ, ಹೃದಯ ಆಕಾರ ಸೇರಿದಂತೆ ಜನರಿಗೆ ಬೇಕಾದ ಆಕಾರದಲ್ಲಿ ಬೇಕಾದ ಸುವಾಸನೆಯಲ್ಲಿ, ಬೇಕಾದ ಬಣ್ಣದಲ್ಲಿ ಮೇಣದ ಬತ್ತಿಗಳು ರಾರಾಜಿಸುತ್ತಿವೆ. ಜನತೆಯನ್ನು ಆಕರ್ಷಿಸಲು ಹಾಗೂ ವಿನೂತನ ಕ್ಯಾಂಡಲ್ ತಯಾರಿಸಿ ಪರಿಚಯಿಸುವ ಉದ್ದೇಶದಿಂದ ಅಪರೂಪದ ಮೇಣದಬತ್ತಿಗಳನ್ನು ಇಲ್ಲಿ ತಯಾರಿಸಲಾಗುತ್ತಿದೆ.

ಇದನ್ನೂ ಓದಿ: ಮತದಾರರ ತೀರ್ಪಿಗೆ ಹೆದರಿ ಸರ್ಕಾರ 'ತೈಲ ದರ' ಇಳಿಕೆ ಮಾಡಿದೆ: ಡಿ.ಕೆ.ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.