ಕೊಡಗು: ಪ್ರತ್ಯೇಕ ಅಪಘಾತಗಳಲ್ಲಿ ಮಾಜಿ ಹಾಗೂ ಹಾಲಿ ಸೈನಿಕರಿಬ್ಬರು ಮೃತಪಟ್ಟಿರುವ ಘಟನೆ ವಿರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಸಮೀಪದ ಕೊಳ್ತೊಡು ಗ್ರಾಮದ ಮಾಜಿ ಸೈನಿಕ ಮುರುವಂಡ ಸಿ.ಪೊನ್ನಪ್ಪ (56) ಮತ್ತು ಗಣೇಶ ನಿಮ್ಮಜ್ಜನಕ್ಕೆ ತೆರಳುತ್ತಿದ್ದ ವೇಳೆ ಡಸ್ಟರ್ ಕಾರು ಹಾಗೂ ಪಲ್ಸರ್ ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಮೈತಾಡಿ ಗ್ರಾಮದ ಕವನ್ (20) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿರಾಜಪೇಟೆ ನಗರದಲ್ಲಿ ತಡರಾತ್ರಿ ಘಟನೆ ನಡೆದಿದ್ದು, ಸಂಬಂಧಿಕರ ಮದುವೆಗೆ ಬಂದಿದ್ದ ಪೊನ್ನಪ್ಪ ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಮೈತಾಡಿಯಿಂದ ಸ್ನೇಹಿತನ ಜೊತೆಗೆ ಅಮ್ಮತ್ತಿಗೆ ಬೈಕ್‌ನಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಬರುತ್ತಿದ್ದಾಗ ಅಪಘಾತವಾಗಿ ಕವನ್ ಮೃತಪಟ್ಟಿದ್ದು, ಹಿಂಬದಿ ಕುಳಿತಿದ್ದ ಸ್ನೇಹಿತ ಮಂಜು ಎಂಬಾತನಿಗೂ ಗಂಭೀರ ಗಾಯಗಳಾಗಿವೆ.
ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.