ಕೊಡಗು: ದಕ್ಷಿಣ ಕೊಡಗಿನಲ್ಲಿ ಸರಣಿ ಹುಲಿ ದಾಳಿ ಪ್ರಕರಣಗಳು ಮುಂದುವರೆದಿದ್ದು, ಹುಲಿ ದಾಳಿಗೆ ಮತ್ತೊಂದು ಹಸು ಗಂಭೀರವಾಗಿ ಗಾಯಗೊಂಡಿದೆ. ವೀರಾಜಪೇಟೆ ತಾಲೂಕಿನ ಹರಿಹರ ಗ್ರಾಮದಲ್ಲಿ ಘಟನೆ ನಡೆದಿದೆ.
ಹರಿಹರ ಗ್ರಾಮದ ಮುಕ್ಕಾಟ್ಟಿರ ಪೆಮ್ಮಯ್ಯ ಎಂಬವರಿಗೆ ಸೇರಿದ ಹಸು ಹುಲಿದಾಳಿಯಿಂದ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿದೆ. ನಿನ್ನೆ ಪಕ್ಕದ ಗ್ರಾಮದಲ್ಲಿ ಹಸುವನ್ನು ಕೊಂದು ಹಾಕಿದ್ದ ಹೆಬ್ಬುಲಿ ಇಂದು ಮತ್ತೊಂದು ಹಸುವಿನ ಕುತ್ತಿಗೆಗೆ ಗಂಭೀರ ಗಾಯ ಮಾಡಿದೆ.
ಹುಲಿ ಹಿಡಿಯುವಲ್ಲಿ ಮೌನಕ್ಕೆ ಶರಣಾಗಿರುವ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.