ಕೊಡಗು: ತಾಲೂಕಿನ ಭೇತ್ರಿಯಲ್ಲಿ ಗೂಡ್ಸ್ ವಾಹನ ಹಾಗೂ ಓಮಿನಿ ಕಾರಿನ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಮೂರ್ನಾಡು ಗ್ರಾಮದವರಾಗಿದ್ದು ಹರೀಶ್ ಹಾಗೂ ಸುಬ್ರಮಣಿ ಎಂದು ಗುರುತಿಸಲಾಗಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: CCTV Video: ಸೇಲಂನಲ್ಲಿ ಎರಡು ಬಸ್ಗಳ ಮಧ್ಯೆ ಭೀಕರ ಅಪಘಾತ
ಎರಡು ಕಾರುಗಳ ನಡುವೆ ಮುಖ ಮುಖಿಯಾಗಿ ಡಿಕ್ಕಿಯಾಗಿ ಸ್ಥಳದಲ್ಲೇ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಕೊಡಗರಳ್ಳಿ ಸಮೀಪ ನಡೆದಿದೆ.

ಶುಂಠಿಕೊಪ್ಪ ನಿವಾಸಿ ಮುಸ್ತಫಾ ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಮುಸ್ತಫಾ ತಮ್ಮ ಮಗನನ್ನು ಪಿಯುಸಿ ಎಕ್ಸಾಂ ಹಿನ್ನೆಲೆಯಲ್ಲಿ ಕುಶಾಲನಗರ ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಮಾದಪಟ್ಟಣಕ್ಕೆ ತೆರಳಿದ್ದಾರೆ. ಅಲ್ಲಿ ಮೀನು ಖರೀದಿಸಿ ಸ್ವಗ್ರಾಮಕ್ಕೆ ತೆರಳುವ ಮಾರ್ಗದ ಕೊಡಗರಳ್ಳಿ ಸಮೀಪ ಕಾರಿನ ಆ್ಯಕ್ಸಲ್ ರಾಡ್ ತುಂಡಾಗಿದ್ದು, ಎದುರಿಗೆ ಮಡಿಕೇರಿಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.