ETV Bharat / state

ಕೊಡಗುದಲ್ಲಿ ಭೂಕಂಪನ ಅನುಭವದ ಬೆನ್ನಲ್ಲೇ ಮನೆ ಮೇಲೆ ಉರುಳಿದ ಬಂಡೆ! - rocks fell into house at kodagu

ಭಾರಿ ಗಾತ್ರದ ಬಂಡೆಕಲ್ಲು ಮನೆಯ ಮೇಲೆ ಉರುಳಿಬಿದ್ದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

the-rocks-that-have-been-rolling-over-the-house-at-kodagu
ಕೊಡಗು : ಕರಿಕೆಯಲ್ಲಿ ಮನೆ ಮೇಲೆ ಉರುಳಿದ ಬಂಡೆಗಳು
author img

By

Published : Jun 28, 2022, 5:29 PM IST

ಕೊಡಗು : ಲಘು ಭೂಕಂಪನದ ಅನುಭವದಿಂದ ಕಂಗಾಲಾಗಿರುವ ಜಿಲ್ಲೆಯ ಜನತೆಗೆ ಈಗ ಮತ್ತೊಂದು ಆಘಾತ ಉಂಟಾಗಿದೆ. ಭಾರಿ ಗಾತ್ರದ ಬಂಡೆ ಕಲ್ಲು ಮನೆಯ ಮೇಲೆ ಉರುಳಿಬಿದ್ದ ಪರಿಣಾಮ ಮನೆಗೆ ಭಾಗಶಃ ಹಾನಿಯಾಗಿರುವ ಘಟನೆ ಜಿಲ್ಲೆಯ ಕರಿಕೆಯ ಕುಂಡತ್ತಿಕಾನ ಗ್ರಾಮದಲ್ಲಿ ಘಟನೆ ನಡೆದಿದೆ. ಅದೃಷ್ಟವಶಾತ್ ಮನೆ ಮಾಲೀಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೊಡಗಿನ ಗಡಿಭಾಗ ಕರಿಕೆಯಲ್ಲಿ ಮನೆ ಮೇಲೆ ಉರುಳಿದ ಬಂಡೆ

ಇಲ್ಲಿನ ಕರಿಕೆ ನಿವಾಸಿ ಜಾನಕಿ ಎಂಬುವರ ಮನೆ ಮೇಲೆ ರಾತ್ರಿ ವೇಳೆ ಬಂಡೆಕಲ್ಲು ಉರುಳಿ ಬಿದ್ದಿದೆ. ರಾತ್ರಿ‌ ಮನೆ ವೇಲೆ ಬಂಡೆ ಬಿದ್ದಿದ್ದು, ಮನೆಯ ಮಾಲೀಕರು ಇನ್ನೊಂದು ಕೊಠಡಿಯಲ್ಲಿ ಮಲಗಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಜೂನ್ 26 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.‌ ಕರಿಕೆ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಭೂಮಿ ಕಂಪನವಾಗುತ್ತಿದ್ದು, ಬಂಡೆ ಸಡಿಲಗೊಂಡು ರಾತ್ರಿ ಸಮಯದಲ್ಲಿ ಉರುಳಿ ಬಿದ್ದಿರಬಹುದೆಂದು ಸ್ಥಳೀಯರು ಹೇಳಿದ್ದಾರೆ.

ಜೂ 25 ರಂದು ಬೆಳಗ್ಗೆ 9 ಗಂಟೆ 10 ನಿಮಿಷಕ್ಕೆ ಭೂಕಂಪವಾಗಿತ್ತು. ಕರಿಕೆಯಿಂದ ನಾಲ್ಕು ಕಿಲೋ ಮೀಟರ್ ವಾಯುವ್ಯ ಭಾಗದಲ್ಲಿ ಭೂಕಂಪವಾಗಿತ್ತು. ಭೂಕಂಪನವಾದ ಮರು ದಿನವೇ ಬಂಡೆ ಉರುಳಿ ಬಿದ್ದಿದೆ. ಮತ್ತೆರಡು ಬಂಡೆಗಳು ಮನೆ ಮೇಲೆ ಉರುಳುವ ಆತಂಕ ಎದುರಾಗಿದ್ದು, ಮತ್ತಷ್ಟು ಆತಂಕ ಮನೆ ಮಾಡಿದೆ. ಹೀಗಾಗಿ ಕರಿಕೆ ಭಾಗದ ಸುತ್ತಮುತ್ತಲಿನ ಭಾಗದ ಜನರು ಆತಂಕದಲ್ಲಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಓದಿ : ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆ ಶಾಕ್: ಜು.1ರಿಂದ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ಬರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.