ETV Bharat / state

ಜಿಲ್ಲಾ ನ್ಯಾಯಲಯ ಉದ್ಘಾಟಿಸಿದ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಎ. ಎಸ್ ಬೋಪಣ್ಣ

ಇತ್ತೀಚಿಗೆ ನ್ಯಾಯಾಲಯಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿಕೊಟ್ಟಿದೆ. ನ್ಯಾಯಾಂಗದ ಬಗ್ಗೆ ಹೆಚ್ಚು ಆಸಕ್ತಿಯನ್ನು ಸರ್ಕಾರ ತೋರುತ್ತಿದೆ. ನಾವು ಜಿಲ್ಲಾ ನ್ಯಾಯಾಧೀಶರಾಗಿ ಈ ಹಿಂದೆ ಅನುಭವಿಸಿದ್ದಕ್ಕಿಂತ ಈಗ ಸೌಲಭ್ಯ ಹೆಚ್ಚಿದೆ.

The district court was inaugurated by Supreme Court Justice A. S Bopanna
ಜಿಲ್ಲಾ ನ್ಯಾಯಲಯ ಉದ್ಘಾಟಿಸಿದ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಎ. ಎಸ್ ಬೋಪಣ್ಣ
author img

By

Published : Nov 12, 2022, 7:53 PM IST

ಕೊಡಗು: ‌ಮಡಿಕೇರಿಯ ವಿದ್ಯಾನಗರದಲ್ಲಿ ನೂತನವಾಗಿ ನಿರ್ಮಿಸಿರುವ ಕೊಡಗು ಜಿಲ್ಲಾ ನ್ಯಾಯಾಲಯ ಮತ್ತು ನ್ಯಾಯಾಧೀಶರ ಕೊಠಡಿ ಮತ್ತಿತರ ಕೊಠಡಿಗಳ ಉದ್ಘಾಟನೆಯನ್ನು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಎ. ಎಸ್ ಬೋಪಣ್ಣ ಹಾಗೂ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಲೆ ನೂತನ ನ್ಯಾಯಾಲಯ ಸಂಕೀರ್ಣದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು. 36 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ನ್ಯಾಯಾಲಯದಲ್ಲಿ ನವೆಂಬರ್ 14 ರಿಂದ ಕಾರ್ಯಕಲಾಪ ಆರಂಭವಾಗಲಿದೆ.

ಜಿಲ್ಲಾ ನ್ಯಾಯಲಯ ಉದ್ಘಾಟಿಸಿದ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಎ. ಎಸ್ ಬೋಪಣ್ಣ

ಇತ್ತೀಚಿಗೆ ನ್ಯಾಯಾಲಯಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿಕೊಟ್ಟಿದೆ. ನ್ಯಾಯಾಂಗದ ಬಗ್ಗೆ ಹೆಚ್ಚು ಆಸಕ್ತಿಯನ್ನು ಸರ್ಕಾರ ತೋರುತ್ತಿದೆ. ನಾವು ಜಿಲ್ಲಾ ನ್ಯಾಯಾಧೀಶರಾಗಿ ಈ ಹಿಂದೆ ಅನುಭವಿಸಿದ್ದಕ್ಕಿಂತ ಈಗ ಸೌಲಭ್ಯ ಹೆಚ್ಚಿದೆ. ನಾನು ರಾಜ್ಯ ಹೈಕೋರ್ಟಿನಲ್ಲಿ ಮೂಲ ಸೌಕರ್ಯದ ಮುಖ್ಯಸ್ಥನಾಗಿ ಇದ್ದಾಗ ಸರ್ಕಾರಕ್ಕೆ , ನ್ಯಾಯಾಲಯಗಳಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಕಡತಗಳನ್ನು ಕಳುಹಿಸಿ ಕೊಟ್ಟಿದ್ದೆ.

ಸರ್ಕಾರ ಕೂಡಲೆ ಹಣ ಬಿಡುಗಡೆ ಮಾಡಿ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಸೌಕರ್ಯವನ್ನು ಕಲ್ಪಿಸಿ ಕೊಟ್ಟಿದೆ ಎಂದು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಎ. ಎಸ್.ಬೋಪಣ್ಣ ಹೇಳಿದ್ದಾರೆ. ಅವರು ಮಡಿಕೇರಿಯಲ್ಲಿ ನೂತನ ನ್ಯಾಯಾಲಯ ಸಂಕೀರ್ಣವನ್ನು ಉದ್ಘಾಟಿಸಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ, ನ್ಯಾಯಾಧೀಶರಾದ ಇಎಸ್ಇಂದ್ರೇಶ್ ಎಂ.ಜಿ ಶುಕುರೆ, ಸಿ.ಎಂ ಪೂಣಚ್ಚ, ಶಾಸಕರಾದ ಕೆ ಜಿ ಬೋಪಯ್ಯ, ಅಪ್ಪಚ್ಚು ರಂಜನ್, ರಿಜಿಸ್ಟರ್ ಜನರಲ್ ಬಿ. ಮುರಳಿಧರ್ ಪೈ, ಪ್ರಧಾನ ಜಿಲ್ಲಾ ಮತ್ತು ಶಶಿನ್ ನ್ಯಾಯಾಧೀಶರಾದ ಎಂ ಬೃಂಗೇಶ್, ವಕೀಲರ ಸಂಘದ ಅಧ್ಯಕ್ಷರಾದ ದಯಾನಂದ, ಕಾರ್ಯದರ್ಶಿ ಅರುಣ್ ಕುಮಾರ್ ಮತಿತರು ಉಪಸ್ಥಿತರಿದ್ದರು.

ಇದನ್ನೂ ಓದಿ: ಮೈಸೂರಿಗೆ ತಲುಪಿದ ವಂದೇ ಭಾರತ್​ ಎಕ್ಸ್​ಪ್ರೆಸ್​: ಜರ್ನಿ ಚೆನ್ನಾಗಿತ್ತು ಎಂದ ಪ್ರಯಾಣಿಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.