ETV Bharat / state

ಕ್ರೀಡೆ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಹಕಾರಿ: ಜೋಶ್ನಾ ಚಿನ್ನಪ್ಪ

ಪಾಲಕರು ತಮ್ಮ ಮಕ್ಕಳ ಆದ್ಯತೆಗೆ ತಕ್ಕಂತೆ ವಿದ್ಯೆಯ ಜತೆಗೆ ಕ್ರೀಡೆಗೂ ಮಹತ್ವ ನೀಡುವಂತಾಗಬೇಕು. ಉತ್ತಮ ರೀತಿಯಲ್ಲಿ ಜೀವಿಸಲು ಕ್ರೀಡೆ ಸಹಕಾರಿಯಾಗುತ್ತದೆ- ಅಂತಾರಾಷ್ಟ್ರೀಯ ಸ್ಕ್ವ್ಯಾಷ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ.

Squash Player Joshna Chinappa
ಅಂತರಾಷ್ಟ್ರೀಯ ಸ್ಕ್ವ್ಯಾಷ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ
author img

By

Published : Nov 18, 2022, 8:53 AM IST

ಮಡಿಕೇರಿ: ಮನುಷ್ಯನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಕ್ರೀಡೆ ಸ್ಫೂರ್ತಿದಾಯಕ ಎಂದು ಅಂತಾರಾಷ್ಟ್ರೀಯ ಸ್ಕ್ವ್ಯಾಷ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಹೇಳಿದರು. ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

Squash Player Joshna Chinappa
ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿದ ಜೋಶ್ನಾ ಚಿನ್ನಪ್ಪ

ಪಾಲಕರು ತಮ್ಮ ಮಕ್ಕಳ ಆದ್ಯತೆಗೆ ತಕ್ಕಂತೆ ವಿದ್ಯೆಯ ಜತೆಗೆ ಕ್ರೀಡೆಗೂ ಮಹತ್ವ ನೀಡುವಂತಾಗಬೇಕು. ಕ್ರೀಡೆಯಲ್ಲಿ ಮಕ್ಕಳಿಗೆ ಹೆಚ್ಚಿನ ಒಲವಿದ್ದರೆ ಅದನ್ನು ವಿದ್ಯೆ ಜತೆಗೆ ಪೋಷಿಸಿ ಪ್ರೋತ್ಸಾಹ ನೀಡಬೇಕು. ಟೀಮ್ ವರ್ಕ್, ಸಮರ್ಪಣಾ ಭಾವ, ಕಠಿಣ ಪರಿಶ್ರಮ ಮತ್ತು ಬದ್ಧತೆಯನ್ನು ಕ್ರೀಡೆ ಬೆಳೆಸುತ್ತದೆ. ಹಾಗಾಗಿ ಕ್ರೀಡೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ.ಅಯ್ಯಪ್ಪ, ಏರ್ ಮಾರ್ಷಲ್(ನಿವೃತ್ತ) ನಂದ ಕಾರ್ಯಪ್ಪ, ಡಿವೈಎಸ್​ಪಿ ಗಜೇಂದ್ರ ಪ್ರಸಾದ್, ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಲೆಫ್ಟಿನೆಂಟ್ ಬಿ.ಜಿ. ಕುಮಾರ್, ಜೋಶ್ನಾ ಚಿಣ್ಣಪ್ಪ ಅವರ ತಂದೆ ಅಂಜನ್ ಚಿನ್ನಪ್ಪ ನಿವೃತ್ತ ಸೇನಾಧಿಕಾರಿಗಳು ಹಾಗೂ ನಿವೃತ್ತ ಪೊಲೀಸರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಕಾಮನ್​ವೆಲ್ತ್​ ಗೇಮ್ಸ್​: ಹೈಜಂಪ್, ಸ್ಕ್ವ್ಯಾಷ್​ನಲ್ಲಿ ಐತಿಹಾಸಿಕ ಕಂಚು, ಜುಡೋದಲ್ಲಿ ಮೂರನೇ ಪದಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.