ETV Bharat / state

ಮಡಿಕೇರಿ: ಹಿಂದೂ ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಮಹಿಳೆ - ಮಡಿಕೇರಿ ಮುನೇಶ್ವರ ದೇವಾಲಯ ವಾರ್ಷಿಕೋತ್ಸವ

ಹಾವೇರಿ ಮೂಲದ ರಜಿಯಾ ಮಡಿಕೇರಿ ನಗರದ ಮುನೇಶ್ವರ ದೇವಾಲಯದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ದೇವಾಲಯಕ್ಕೆ ಅಗಮಿಸಿ ಹಿಂದೂ-ಮುಸ್ಲಿಂ ಸಮುದಾಯದವರು ಸಹೋದರರಂತೆ ಬದುಕು ನಡೆಸಬೇಕು ಎಂಬ ನಿಟ್ಟಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Special pooja in Hindu temple by Muslim Women
ಹಿಂದೂ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಮಾಡಿ ಭಾವೈಕ್ಯತೆ ಮೆರೆದ ಮುಸ್ಲಿಂ ಮಹಿಳೆ
author img

By

Published : Apr 5, 2022, 1:19 PM IST

ಮಡಿಕೇರಿ: ರಾಜ್ಯದಲ್ಲಿ ಧರ್ಮಗಳ ಮಧ್ಯೆ ಹಲವು ದಿನಗಳಿಂದ ನಡೆಯುತ್ತಿರುವ ಸಂಘರ್ಷಗಳ ನಡುವೆ ಹಿಂದೂ, ಮುಸ್ಲಿಮರು ಭಾವೈಕ್ಯತೆಯಿಂದ ಒಟ್ಟಾಗಿ ಬಾಳುವಂತೆ ಮಾಡಿ ಎಂದು ಹಿಂದೂ ದೇವಾಲಯದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ವಿಶೇಷ ಪ್ರಾರ್ಥನೆ ಮಾಡಿದ ಅಪರೂಪದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ರಾಜ್ಯದಲ್ಲಿ ಹಿಜಾಬ್ ವಿವಾದದ ಬಳಿಕ ಹಿಂದೂ ದೇವಾಲಯಗಳ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಇದನ್ನು ಗಮನಿಸಿದ ಬಳಿಕ ಹಾವೇರಿ ಮೂಲದ ರಜಿಯಾ, ಮಡಿಕೇರಿ ನಗರದ ಮುನೇಶ್ವರ ದೇವಾಲಯದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕುಟುಂಬಸಮೇತರಾಗಿ ಆಗಮಿಸಿ ಹಿಂದೂ-ಮುಸ್ಲಿಂ ಸಮುದಾಯದವರು ಸಹೋದರರಂತೆ ಬದುಕು ನಡೆಸಬೇಕು ಎಂಬ ನಿಟ್ಟಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಜಿಯಾ, ಎಲ್ಲರ ಮೈಯಲ್ಲಿ ಹರಿಯುವುದು ಕೆಂಪು ರಕ್ತವೇ ಹೊರತು ಬೇರೆ ಅಲ್ಲ. ದೇಶದಲ್ಲಿ ಅನೇಕ ಧರ್ಮ, ಸಂಪ್ರದಾಯ, ಸಮುದಾಯ, ಭಾಷೆಗಳು ಇವೆ. ವಿವಿಧತೆಯಲ್ಲಿ ಏಕತೆ ಇರುವುದು ನಮ್ಮ ದೇಶದ ವಿಶೇಷ. ಕೆಲ ಭಿನ್ನತೆಗಳಿದ್ದರೂ ಎಲ್ಲರೂ ಕೂಡಿಕೊಂಡು ಒಟ್ಟಾಗಿ ಹೋಗುವುದು ಇಂದಿನ ದಿನಗಳಲ್ಲಿ ಅವಶ್ಯಕವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಬಾಗಲಕೋಟೆ : ಅದ್ಧೂರಿಯಾಗಿ ಜರುಗಿದ ಕಣವಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ..

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.