ಕೊಡಗು: ನಾಳೆ ಕಂಕಣ ಸೂರ್ಯಗ್ರಹಣ ಕೊಡಗು-ಕೇರಳ ಗಡಿ ಭಾಗವಾಗದ ಕುಟ್ಟ ಸಮೀಪದ ಕಾಯಿಮಾನಿಯಲ್ಲಿ ಶೇ. ನೂರರಷ್ಟು ಸಂಭವಿಸಲಿದ್ದು, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಗ್ರಹಣ ವೀಕ್ಷಣೆಗೆ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಾಯಿಮಾನಿಯ ಗ್ರಾಮದ ಗದ್ದೆಯೊಂದರಲ್ಲಿ ಸೂರ್ಯ ಗ್ರಹಣ ವೀಕ್ಷಣೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಟೆಲಿಸ್ಕೋಪ್‍ಗಳನ್ನು ಬಳಸಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ವೀಕ್ಷಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮತ್ತೊಂದೆಡೆ ಗ್ರಹಣ ಹಿನ್ನಲೆಯಲ್ಲಿ ಜಿಲ್ಲೆಯ ಪ್ರಮುಖ ದೇವಾಲಯಗಳು ಕೂಡಾ ನಾಳೆ ಬಂದ್ ಆಗಲಿವೆ.
ನಾಳೆ ಖಗೋಳದಲ್ಲಿ ನಡೆಯುವ ಬೆಳಕು-ನೆರಳಿನ ಆಟದ ಅದ್ಭುತ ಕ್ಷಣಗಳಿಗೆ ವಿವಿಧೆಡೆ ಸಿದ್ಧತೆ ನಡೆಯುತ್ತಿದ್ದು, ಖಗೋಳ ಶಾಸ್ತ್ರಜ್ಞರಿಗೆ ವಿಶೇಷ ದಿನವಾಗಿದೆ. 2019ನೇ ಸಾಲಿನಲ್ಲಿ ಘಟಿಸುವ ಕೊನೆಯ ಸೂರ್ಯಗ್ರಹಣ ಇದಾಗಿದ್ದು, ಮತ್ತೆ ಇಂತಹದ್ದೊಂದು ಸೂರ್ಯಗ್ರಹಣ ಸಂಭವಿಸಲು 2064ರವರೆಗೆ ಕಾಯಬೇಕಿದೆ.