ETV Bharat / state

ಆಮೆಗತಿಯಲ್ಲಿ ಸಾಗ್ತಿದೆ ಭಾಗಮಂಡಲ ಮೇಲ್ಸೇತುವೆ ಕೆಲಸ; ಗುತ್ತಿಗೆದಾರನ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ

ಕೊಡಗಿನ ಭಾಗಮಂಡಲ ಹಾಗೂ ತಲಕಾವೇರಿ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿ ಮೇಲ್ಸೇತುವೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿತ್ತು. 8 ತಿಂಗಳ ಹಿಂದೆಯೇ ಶುರುವಾದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು ಗುತ್ತಿಗೆದಾರರು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುತ್ತಿಗೆದಾರನ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ
author img

By

Published : Jun 28, 2019, 5:06 AM IST

Updated : Jun 28, 2019, 2:12 PM IST

ಕೊಡಗು: ಕಳೆದ ವರ್ಷದ ಮಹಾಮಳೆಗೆ ಮಂಜಿನ ನಗರಿ ಮಡಿಕೇರಿ ಅಕ್ಷರಶಃ ದ್ವೀಪದಂತಾಗಿತ್ತು. ಹಾಗೆಯೇ ಭಾಗಮಂಡಲ ಹಾಗೂ ತಲಕಾವೇರಿ ಸಂಪರ್ಕಿಸುವ ರಸ್ತೆ ಮಾರ್ಗದಲ್ಲಿ ನೀರು ಉಕ್ಕಿ ಹರಿಯುತ್ತಿದ್ದರಿಂದ ರಸ್ತೆ ಸಂಪರ್ಕವನ್ನೂ ಕಳೆದುಕೊಂಡಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ಮೇಲ್ಸೇತುವೆ ನಿರ್ಮಿಸಲು ಮುಂದಾಗಿತ್ತಾದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.

8 ತಿಂಗಳ ಹಿಂದೆ ಗುತ್ತಿಗೆದಾರರು ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದರೂ, ನಾಲ್ಕು ಪಿಲ್ಲರ್​ಗಳ ನಿರ್ಮಾಣವಷ್ಟೇ ಆಗಿದೆ. ಉಳಿದಂತೆ ಕಾಮಗಾರಿಗಾಗಿ ಸುರಿದಿರುವ ಜೆಲ್ಲಿರಾಶಿ, ಕಬ್ಬಿಣದ ವಸ್ತುಗಳು ಮಾತ್ರ ಕಾಮಗಾರಿಯ ಸ್ಥಳದಲ್ಲಿ ಕಂಡು ಬರುತ್ತಿದೆ. ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯನ್ನು ಕಂಡು ಅದು ಪೂರ್ಣಗೊಳ್ಳಬೇಕಾದರೆ ಇನ್ನೂ ಮೂರು ವರ್ಷಗಳು ಬೇಕಾಗಬಹುದು. ನಾವು ಮಳೆಗಾಲದಲ್ಲಿ ದೋಣಿಯನ್ನೇ ಅವಲಂಬಿಸಬೇಕಾಗುತ್ತೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಗುತ್ತಿಗೆದಾರನ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ

ಕಳೆದ ಬಾರಿ ಸುರಿದ ಮಳೆಯಿಂದ ದೈನಂದಿನ ವಸ್ತುಗಳನ್ನು ಕೊಳ್ಳುವುದೇ ಕಷ್ಟವಾಗಿತ್ತು. ಹದಿನೈದು ದಿನಗಳ ಕಾಲ ಮನೆಯಲ್ಲೇ ಕಾಲ ಕಳೆದಿದ್ದೆವು. ಅನಾರೋಗ್ಯ ಬಿದ್ದರೆ ಆಸ್ಪತ್ರೆಗೆ ಹೋಗಲು ವಾಹನಗಳ ವ್ಯವಸ್ಥೆಯೇ ಇರಲಿಲ್ಲ. 8 ತಿಂಗಳ ಹಿಂದೆಯೇ ಕಾಮಗಾರಿ ಶುರುವಾಗಿದೆ. ಗುತ್ತಿಗೆದಾರರು ಮೇಲ್ಸೇತುವೆ ನಿರ್ಮಾಣದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದು, ಸದ್ಯಕ್ಕೆ ನಾಲ್ಕೈದು ಪಿಲ್ಲರ್​ಗಳನ್ನಷ್ಟೆ ಮಾಡಿದ್ದಾರೆ. ಆದಷ್ಟು ಬೇಗ ಮೇಲ್ಸೇತುವೆ ಪೂರ್ಣಗೊಂಡರೆ ಎಲ್ಲರಿಗೂ ಅನುಕೂಲ ಅಲ್ಲವೇ ಅಂತಾರೆ ಸ್ಥಳೀಯ ನಿವಾಸಿ ಗೋದಾವರಮ್ಮ.

ಗುತ್ತಿಗೆದಾರರು ಕೆಲಸವನ್ನು ಆಮೆಗತಿಯಲ್ಲಿ ಮಾಡುತ್ತಿದ್ದಾರೆ. ಹೀಗಾಗಿ ಹೊರಗಿನಿಂದ ತಲಕಾವೇರಿ, ಭಗಂಡೇಶ್ವರ ದೇವಾಲಯಕ್ಕೆ ಬಂದವರು ಹಲವು ಬಾರಿ ನಿರಾಸೆಯಿಂದ ಸಂಪರ್ಕವಿಲ್ಲದೆ ವಾಪಸ್ಸಾಗುತ್ತಾರೆ.ಕೂಡಲೇ ಜಿಲ್ಲಾಡಳಿತ ಮೇಲ್ಸೇತುವೆ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Intro:Body:

ಆಮೆ ಗತಿಯಲ್ಲಿ ಸಾಗುತ್ತಿದೆ ಭಾಗಮಂಡಲ ಮೇಲ್ಸೇತುವೆ ಕೆಲಸ; ಗುತ್ತಿಗೆದಾರನ ವಿರುದ್ಧ ಸ್ಥಳೀಯರ ಅಸಮಾಧಾನ 

ಕೊಡಗು: ಕಳೆದ ವರ್ಷ ಸುರಿದ ಮಹಾ ಮಳೆಗೆ ಮಂಜಿನ ನಗರಿ ಮಡಿಕೇರಿ ಅಕ್ಷರಶಃ ದ್ವೀಪವಾಗಿತ್ತು. ಹಾಗೆಯೇ ಭಾಗಮಂಡಲ ಹಾಗೂ ತಲಕಾವೇರಿ ಸಂಪರ್ಕಿಸುವ ರಸ್ತೆ ಮಾರ್ಗದಲ್ಲಿ ನೀರು ಹುಕ್ಕಿ ಹರಿಯುತ್ತಿದ್ದರಿಂದ ರಸ್ತೆ ಸಂಪರ್ಕವನ್ನೇ ಕಳೆದುಕೊಂಡಿತ್ತು.ಈ ಹಿನ್ನಲೆಯಲ್ಲಿ‌ ಸಮಸ್ಯೆಗೆ ಶಾಶ್ವತ ದಾರಿ ಕಂಡುಕೊಳ್ಳಲು ಸರ್ಕಾರ ಮೇಲ್ಸೇತುವೆ ನಿರ್ಮಿಸಿಸಲು ಮುಂದಾಗಿತ್ತು.‌ಆದರೆ ಅದು ಸದ್ಯಕ್ಕೆ ಪೂರ್ಣಗೊಳ್ಳುವ ಮುನ್ಸೂಚನೆಗಳು ಮಾತ್ರ ಗೋಚರಿಸುತ್ತಿಲ್ಲ. 

ಒಂದೆಡೆ ಕಾಮಗಾರಿಗೆ ಸುರಿದಿರುವ ಜೆಲ್ಲಿರಾಶಿ, ಕಬ್ಬಿಣದ ವಸ್ತುಗಳು ಹಾಗೂ ನಾಲ್ಕೈದು ಪಿಲ್ಲರ್ ಗಳನ್ನು ಹಾಕಿ ಬಿಟ್ಟಿರುವ ಗುತ್ತಿಗೆದಾರರು. ಈ ಮೇಲ್ಸೇತುವೆ  ಪೂರ್ಣಗೊಳ್ಳಲು ಕನಿಷ್ಠ ಇನ್ನೂ ಮೂರು ವರ್ಷಗಳಾದರೂ ಬೇಕೂ ಅನ್ನುತ್ತರೊತಿರುವ ಸ್ಥಳೀಯರು.ಇವೆಲ್ಲಕ್ಕೂ ಸಾಕ್ಷಿಯಾಗಿರುವುದು ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಕನ್ನಿಕೆ, ಕಾವೇರಿ ಹಾಗೂ ಸುಜ್ಯೋತಿ ನದಿಗಳ ಸಂಗಮ ಭಾಗಮಂಡಲ. 

ಜಿಲ್ಲೆಯಲ್ಲಿ ಈ ಬಾರಿ ಸರಾಸರಿ ಮಳೆ 6.18 ಮಿ.ಮೀ ಕಡಿಮೆ ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 44.66 ಮಿ.ಮೀ ಮಳೆ ದಾಖಲಾಗಿತ್ತು. ಪ್ರಸ್ತುತ ಜನವರಿಯಿಂದ ಇಲ್ಲಿವರೆಗೂ 363.68 ಮಿ.ಮೀ ಮಳೆಯಾಗಿದ್ದರೆ ಕಳೆದ ಬಾರಿ ಇದೇ ವೇಳೆ 1243.23 ಮಿ.ಮೀ ಮಳೆಯಾಗಿತ್ತು.‌ ಮಡಿಕೇರಿ ತಾಲ್ಲೂಕಿನಲ್ಲಿ 5.95 ಮಿ.ಮೀ ಸರಾಸರಿ ಮಳೆಯಾಗಿದ್ದರೆ ಕಳೆದ ವರ್ಷ ಇದೇ ದಿನ 79.75 ಮಿ.ಮೀ ಮಳೆ ಅಬ್ಬರಿಸಿತ್ತು. 2019 ರ ಜನವರಿಯಿಂದ ಇಲ್ಲಿವರೆಗೆ 435.69 ಮಿ.ಮೀ ಮಳೆ ಸುರಿದಿದ್ದರೆ ಕಳೆದ ವರ್ಷ ಇದೇ ವೇಳೆಗೆ 1167 ಮಿ.ಮೀ ವರ್ಷಾಧಾರೆ ದಾಖಲಾಗಿದೆ. 

ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಮಳೆ ಕೊರತೆ ಉಂಟಾಗಿದೆ.‌ಜುಲೈನಿಂದ ಮುಂಗಾರು ಚುರುಕುಗೊಳ್ಳಲಿದೆ ಎಂದು ರಾಜ್ಯ ನೈಸರ್ಗಿಕ  ವಿಕೋಪ ಉಸ್ತುವಾರಿ ಕೇಂದ್ರವು ಮುನ್ಸೂಚನೆ ನೀಡಿದೆ.‌ಇನ್ನೂ ಮೇಲ್ಸೇತುವೆ ಪೂರ್ಣಗೊಳಿಸುವ ಗುತ್ತಿಗೆದಾರರು ಅದೇಕೊ ಆಮೆಗತಿಯಲ್ಲಿ ಕೆಲಸ ಮಾಡುತ್ತಿದ್ದು, ಏನಿಲ್ಲವೆಂದರೂ ಮೂರು ವರ್ಷಗಳೂ ನಾವು ಮಳೆಗಾಲದಲ್ಲಿ ದೋಣಿಯನ್ನೇ ಅವಲಂಬಿಸಬೇಕಾಗುತ್ತೆ ಎಂದು ಸ್ಥಳೀಯರ ಅಳಲು.‌

ಕಳೆದ ಬಾರಿ ಸುರಿದ ಮಳೆಯಿಂದ ದೈನಂದಿನ ವಸ್ತುಗಳನ್ನು ಕೊಳ್ಳುವುದೇ ಕಷ್ಟವಾಗಿತ್ತು.ಹದಿನೈದು ದಿನಗಳು ಮನೆಯಲ್ಲೇ ಕಾಲ ಕಳೆದಿದ್ದೆವು.ಅನಾರೋಗ್ಯ ಬಿದ್ದರೆ ಆಸ್ಪತ್ರೆಗೆ ಹೋಗಲು ವಾಹನಗಳ ವ್ಯವಸ್ಥೆಯೇ ಇರಲಿಲ್ಲ. 8 ತಿಂಗಳಿಂದ ನಾಲ್ಕೈದು ಪಿಲ್ಲರ್ ಗಳನ್ನಷ್ಟೆ ಮಾಡಿದ್ದಾರೆ.ಆದಷ್ಟು ಬೇಗ ಮೇಲ್ಸೇತುವೆ ಪೂರ್ಣಗೊಂಡರೆ ಎಲ್ಲರಿಗೂ ಅನುಕೂಲ ಅಲ್ಲವೇ ಅಂತಾರೆ ಸ್ಥಳೀಯ ನಿವಾಸಿ ಗೋದಾವರಮ್ಮ. 

ಇಲ್ಲಿಗೆ ಮೇಲ್ಸೇತುವೆಯ ತೀರಾ ಅಗತ್ಯವಿತ್ತು.ಆದರೆ ಗುತ್ತಿಗೆದಾರರು ಕೆಲಸವನ್ನು ಆಮೆಗತಿಯಲ್ಲಿ ಮಾಡುತ್ತಿದ್ದಾರೆ.  ಕಳೆದ ವರ್ಷ ಸುರಿದ ಮಳೆಗೆ ಹೋಲಿಸಿದರೆ ಭಾಗಮಂಡಲದಲ್ಲಿ ಶೇ.70 ಕಡಿಮೆ ಇದೆ. ಹೊರಗಿನಿಂದ 

ತಲಕಾವೇರಿ, ಭಗಂಡೇಶ್ವರ ದೇವಾಲಯಕ್ಕೆ ಬಂದವರು ಹಲವು ಬಾರಿ ನಿರಾಸೆಯಿಂದ ಸಂಪರ್ಕವಿಲ್ಲದೆ ವಾಪಸ್ಸಾಗುತ್ತಾರೆ. ಶಾಲಾ,ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಒಳಗೊಂಡಂತೆ ವ್ಯಾಪ್ತಿಯಲ್ಲಿ ಸುಮಾರು 15 ಸಾವಿರ ಜನರಿಗೂ ಇದು ಸಮಸ್ಯೆ.ಕೂಡಲೇ ಜಿಲ್ಲಾಡಳಿತ ಮೇಲ್ಸೇತುವೆ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಅಂತಾರೆ ಸ್ಥಳೀಯರಾದ ಪದ್ಮಯ್ಯ.

Conclusion:
Last Updated : Jun 28, 2019, 2:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.