ವಿರಾಜಪೇಟೆ(ಕೊಡಗು): ಲಾಕ್‌ಡೌನ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ಕ್ವಾರಂಟೈನ್‌ನಲ್ಲಿ ಇರಿಸಿರುವ ಘಟನೆ ತಾಲೂಕಿನ ಕುಟ್ಟ ಹಳೆ ಚೆಕ್‌ಪೋಸ್ಟ್ ಬಳಿ ನಡೆದಿದೆ.
ನಿಯಮ ಉಲ್ಲಂಘಿಸಿ ಜಿಲ್ಲೆಯಿಂದ-ಕೇರಳ ರಾಜ್ಯಕ್ಕೆ ಕಾರ್ಮಿಕರನ್ನು ಕಳುಹಿಸಲು ಯತ್ನಿಸುತ್ತಿದ್ದ ಕೆ.ಬಾಡಗ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಸಿ.ಡಿ.ಬೋಪಣ್ಣ, ಕೇರಳ ಮೂಲದ ಮಟ್ಟನೈಲ್ ಅನೂಪ್ ಹಾಗೂ ಸತ್ಯ ಮೂವರನ್ನು ವಶಕ್ಕೆ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಈ ಸಂಬಂಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.