ETV Bharat / state

ಕೊಡಗು ಜಿಲ್ಲೆಯ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣ: ಆರೋಪಿಯ ಬಂಧನ

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕದನೂರು ಸಮೀಪದ ಭಗವತಿ ದೇವಸ್ಥಾನದಲ್ಲಿ ಮಾರ್ಚ್​ 19ರಂದು ಹುಂಡಿ ಕಳ್ಳತನವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಬಂಧನ
Police arrested thief
author img

By

Published : Mar 24, 2021, 3:03 PM IST

ಕೊಡಗು: ಜಿಲ್ಲೆಯಲ್ಲಿನ ದೇವಸ್ಥಾನದ ಹುಂಡಿಗಳನ್ನು ಟಾರ್ಗೆಟ್​​ ಮಾಡಿ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ವಿರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.

ದೇವಸ್ಥಾನದ ಹುಂಡಿ ಕಳ್ಳತನ ಮಾಡಿದ್ದ ಆರೋಪಿ ಸೆರೆ

ಕಾರ್ತಿಕ್ ಬಂಧಿತ ಆರೋಪಿ. ಈತ ಮಾರ್ಚ್​ 19ರಂದು ವಿರಾಜಪೇಟೆ ತಾಲೂಕಿನ ಕದನೂರು ಸಮೀಪದ ಭಗವತಿ ದೇವಸ್ಥಾನದಲ್ಲಿ ಹುಂಡಿ ಕಳ್ಳತನ ಮಾಡಿದ್ದ. ಈ ಸಂಬಂಧ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ತನಿಖೆ ಕೈಗೊಂಡ ಪೊಲಿಸರು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಓದಿ: ಇಲ್ಲಿ ಯಾರೂ ಸತ್ಯಹರಿಶ್ಚಂದ್ರರಲ್ಲ : ಸುಧಾಕರ್​ ಹೇಳಿಕೆಗೆ ಹೆಚ್​ಡಿಕೆ ಪ್ರತಿಕ್ರಿಯೆ

ಬಂಧಿತನಿಂದ ಸುಮಾರು 5,600 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ಅಮ್ಮತ್ತಿಯ ಪುರೋಹಿತರೊಬ್ಬರ ಮನೆಗೆ ನುಗ್ಗಿ ಕಳ್ಳತನ ಮಾಡಿದ ಆರೋಪದಡಿ ಕಾರ್ತಿಕ್ ಬಂಧಿಯಾಗಿದ್ದ. ಇದೀಗ ಮತ್ತೆ ದೇವಾಲಯದ ಹುಂಡಿಗೆ ಕೈ ಹಾಕುವ ಮೂಲಕ ಪೊಲೀಸರ ಅತಿಥಿಯಾಗಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.