ಕೊಡಗು: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿದ್ದ ಧಾರಾಕಾರ ಮಳೆ ತಡರಾತ್ರಿಯಿಂದ ಕೊಂಚ ಕಡಿಮೆಯಾಗಿದೆ. ಈ ಮೂಲಕ ಜನರಲ್ಲಿ ನೆರೆ, ಅನಾಹುತ ಭೀತಿ ಕಡಿಮೆಯಾಗಿದೆ.
ಸದ್ಯ ಜಿಲ್ಲಾದ್ಯಂತ ತುಂತುರು ಮಳೆಯಾಗುತ್ತಿದೆ. ತಲಕಾವೇರಿ ಭಾಗಮಂಡಲದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗಿದೆ.
ಲಕ್ಷ್ಮಣ ತೀರ್ಥ, ಕಾವೇರಿ ಮತ್ತು ಉಪನದಿಗಳ ನೀರಿನ ಮಟ್ಟವೂ ಕಡಿಮೆಯಾಗಿದೆ. ಹೀಗಾಗಿ ನದಿಪಾತ್ರದ ಗ್ರಾಮದ ಜನರು ನಿಟ್ಟುಸಿರು ಬಿಡುವಂತಾಗಿದೆ. ಮುಂಗಾರು ಆರಂಭವಾಗಿದ್ರೂ ಕೂಡ ಮಳೆ ಹೆಚ್ಚಾಗಿದ್ದ ಕಾರಣ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿತ್ತು. ಈಗ ಮಳೆರಾಯನ ಆರ್ಭಟ ತಗ್ಗಿದ್ದು ಜನರು ಕೃಷಿ ಚಟುವಟಿಕೆಯಲ್ಲಿ ತೊಡಗುವುದಕ್ಕೆ ಭೂಮಿ ಹದ ಮಾಡಿಕೊಳ್ಳುತ್ತಿದ್ದಾರೆ.
ಮಡಿಕೇರಿಯಲ್ಲೂ ಮಳೆ ಕಡಿಮೆಯಾಗಿದ್ದು, ಮುಂಜಾನೆಯಿಂದ ಮಂಜು ಮುಸುಕಿನ ವಾತಾವರಣ ಇದೆ. ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಮಂಜಿನ ನಗರಿ ಮಡಿಕೇರಿ ಬಿಕೋ ಎನ್ನುತ್ತಿದೆ.
ಇದನ್ನೂ ಓದಿ: ಅಪಾಯ ಮಟ್ಟ ಮೀರಿ ಹರಿಯುತ್ತಿವೆ ಚಿಕ್ಕೋಡಿ ಉಪವಿಭಾಗದ ನದಿಗಳು