ETV Bharat / state

ಶಾಶ್ವತ ಸೂರಿಗಾಗಿ ನಿರಾಶ್ರಿತರ ಅಲೆದಾಟ: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ..! - Kodagu is accused of not cutting down trees

ನಿಯಮದ ಪ್ರಕಾರ ಮರಗಳನ್ನು ತೆರವುಗೊಳಿಸಬೇಕಾದದ್ದು ಅರಣ್ಯ ಇಲಾಖೆಯ ಕರ್ತವ್ಯ. ಆದರೆ ಇಷ್ಟು ದಿನಗಳಾದರೂ ಮರಗಳನ್ನು ಕಡಿತಲೆ ಮಾಡುತ್ತಿಲ್ಲ ಎಂದು ಜನತೆ ಆರೋಪಿಸಿದ್ದಾರೆ.

Kodagu
ನಿರಾಶ್ರಿತರಿಂದ ಅರಣ್ಯ ಇಲಾಖೆಯ ವಿರುದ್ಧ ಘೋಷಣೆ
author img

By

Published : Oct 12, 2020, 11:18 PM IST

ಕೊಡಗು‌ (ಸಿದ್ಧಾಪುರ): ಕಳೆದ ಮೂರು ವರ್ಷಗಳಿಂದ ಶಾಶ್ವತ ಸೂರಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ ಇಲ್ಲಿನ ಕಾವೇರಿ ತೀರದ ನಿರಾಶ್ರಿತರ ಸಮಸ್ಯೆಗಳು ಮಾತ್ರ ತೀರಿಲ್ಲ. ಮನೆಗಳನ್ನು ನಿರ್ಮಿಸಲು ಜಿಲ್ಲಾಡಳಿತ ಒಂದೆಡೆ ಜಾಗ ಗುರುತಿಸಿದ್ದರೂ ಅರಣ್ಯ ಇಲಾಖೆ ಅಲ್ಲಿ ಮರಗಳನ್ನು ಕಡಿತಲೆಗೆ ಕಾನೂನು ತೊಡಕಿನ ಕಾರಣ ಹೇಳುತ್ತಿದೆ ಎಂದು ಅರಣ್ಯ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿ ನಿರಾಶ್ರಿತರು ಬೇಸರ ವ್ಯಕ್ತಪಡಿಸಿದ್ದಾರೆ.

ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿಯ ನಿರಾಶ್ರಿತರು ನಡೆಸಿದ ಹೋರಾಟಕ್ಕೆ ಮಣಿದ ಜಿಲ್ಲಾಡಳಿತ, ಸ್ಥಳೀಯ ಜನಪ್ರತಿನಿಧಿಗಳು ಒತ್ತುವರಿದಾರರಿಂದ ಸಮೀಪದ ಅಭ್ಯತ್‌ಮಂಗಲ ಬಳಿ ಪೈಸಾರಿ ಜಾಗವನ್ನು ತೆರವುಗೊಳಿಸಿ ಹಲವು ದಿನಗಳಾಗಿವೆ. ಈಗಾಗಲೇ ಸುಮಾರು 160 ನಿರಾಶ್ರಿತರಿಗೆ 8.50 ಎಕರೆಯನ್ನು ಪುನರ್ವಸತಿಗೆ ಗುರುತಿಸಲಾಗಿದೆ. ಈಗಾಗಲೇ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ, ಉಪವಿಭಾಧಿಕಾರಿ ಹಾಗೂ ತಹಶೀಲ್ದಾರ್ ಕೂಡ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ. ನಿಯಮದ ಪ್ರಕಾರ ಮರಗಳನ್ನು ತೆರವುಗೊಳಿಸಬೇಕಾದದ್ದು ಅರಣ್ಯ ಇಲಾಖೆಯ ಕರ್ತವ್ಯ. ಆದರೆ ಇಷ್ಟು ದಿನಗಳಾದರೂ ಮರಗಳನ್ನು ಕಡಿತಲೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸಲು ಜಿಲ್ಲಾಡಳಿತ ಒಂದೆಡೆ ಜಾಗ ಗುರುತಿಸಿದ್ದರೂ ಅರಣ್ಯ ಇಲಾಖೆ ಅಲ್ಲಿ ಮರಗಳನ್ನು ಕಡಿದಿಲ್ಲ ಎಂದು ಆಕ್ರೋಶ.

ಜಿಲ್ಲೆ ಬಹುತೇಕ ಕಾಡಿನಿಂದ ಕೂಡಿರುವುದರಿಂದ ಕಾನೂನುಗಳನ್ನು ಸರಳಗೊಳಿಸಬೇಕಾಗುತ್ತದೆ. ವ್ಯವಹಾರಿಕವಾಗಿ ಲಾಭವಾಗಿದ್ದಿದ್ದರೆ ಅವರು ಇಷ್ಟೊತ್ತಿಗಾಗಲೇ ಮರಗಳನ್ನು ಕಡಿಯುತ್ತಿದ್ದರು.‌ ಪ್ರತಿವರ್ಷ ಕಾವೇರಿ ಪ್ರವಾಹದಲ್ಲಿ ತೇಲುತ್ತಿರುವ ನಮ್ಮನ್ನು ಕಂಡರೆ ಏಕಿಷ್ಟು ತಾತ್ಸಾರ. ಅಧಿಕಾರಿಗಳಿಗೆ ಇಚ್ಛಾಶಕ್ತಿಯ ಕೊರತೆಯೇ‌ ಇದಕ್ಕೆಲ್ಲ‌ ಕಾರಣವೆಂದು ನಿರಾಶ್ರಿತರು ಆರೋಪಿಸಿದ್ದಾರೆ.‌

ನಿರಾಶ್ರಿತರಿಗೆ ಗುರುತಿಸಿರುವ ಜಾಗದಲ್ಲಿ ಮರಗಳನ್ನು ಕಡಿಯಬಾರದು ಎನ್ನುವ ಉದ್ದೇಶವಿಲ್ಲ. ಆದರೆ ಜೂನ್‌ನಿಂದ ಸೆಪ್ಟೆಂಬರ್ ತಿಂಗಳವರೆಗೆ ಮಳೆಗಾಲ ಆದ್ದರಿಂದ ಇಲಾಖೆಗೆ ಮರಗಳನ್ನು ಕಡಿಯಲು ಅವಕಾಶವಿಲ್ಲ. ಯಾವುದೇ ರೀತಿಯ ಸಾರ್ವಜನಿಕ ಉಪಯೋಗಕ್ಕೆ ಸಂಬಂಧಿಸಿದಂತೆ ಮರಗಳನ್ನು ತೆರವುಗೊಳಿಸುವ ಅಧಿಕಾರ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಇರುವುದಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಇದೇ ತಿಂಗಳು 20 ರಂದು ಸಾರ್ವಜನಿಕ ಸಭೆ ಕರೆಯಲಾಗುವುದು. ಒಂದು ವೇಳೆ ಸಭೆಯಲ್ಲಿ ಸ್ಥಳೀಯರಿಂದ ಯಾವುದೇ ತಕರಾರುಗಳು ಬರದಿದ್ದರೆ. ತಿಂಗಳಲ್ಲಿ ಸಂಪೂರ್ಣವಾಗಿ ಮರಗಳನ್ನು ತೆರವುಗೊಳಿಸುತ್ತೇವೆ ಎನ್ನುತ್ತಾರೆ ಅಧಿಕಾರಿಗಳು.

ಪ್ರತಿವರ್ಷವೂ ಕಾವೇರಿ ಪ್ರವಾಹಕ್ಕೆ ಸಿಲುಕಿ ನಿರಾಶ್ರಿತರ ಕೇಂದ್ರಗಳಲ್ಲೇ ತಿಂಗಳುಗಟ್ಟಲೆ ಬದುಕು ನಡೆಸುತ್ತಿರುವ ಹಲವು ಕುಟುಂಬಗಳು ಶಾಶ್ವತ ಸೂರಿಗೆ ಅಂಗಲಾಚುತ್ತಿದ್ದಾರೆ. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯೊ ಅಥವಾ ಅಧಿಕಾರಿಗಳ ಕಾನೂನು ಸಂಕೋಲೆಯೊ ಒಟ್ಟಿನಲ್ಲಿ ಜಿಲ್ಲಾಡಳಿತ ಜಾಗ ಕೊಟ್ಟಿದ್ದರೂ ಅದನ್ನು ಅಲ್ಲಿ ಮರಗಳನ್ನು ಕಡಿತಲೆ ಮಾಡಲು ಅರಣ್ಯ ಇಲಾಖೆ ಮೀನಾಮೇಷ ಏಣಿಸುತ್ತಿರುವುದು ವಿಪರ್ಯಾಸವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.