ಕೊಡಗು: ಕೊರೊನಾ ವೈರಸ್ ಆತಂಕದಿಂದ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಮಡಿಕೇರಿ ನಗರದಲ್ಲಿ ಭಿಕ್ಷುಕರಿಗೆ ಪೊಲೀಸರು ಊಟ ನೀಡಿ ಮಾನವೀಯತೆ ಮೆರೆದಿದ್ದಾರೆ.
ಒಂದು ವಾರದಿಂದ ಲಾಕ್ ಡೌನ್ ಆಗಿರುವ ಕೊಡಗಿನ ಮಡಿಕೇರಿ ನಗರದಲ್ಲಿರುವ ಭಿಕ್ಷುಕರನ್ನು ಪೊಲೀಸರು ಹುಡುಕಿ ಊಟ ಕೊಡುತ್ತಿದ್ದಾರೆ. ಮಡಿಕೇರಿ ನಗರದ ಸಿಪಿಐ ಅನೂಪ್ ಮಾದಪ್ಪ ಮತ್ತು ಸಿಬ್ಬಂದಿ ಕಳೆದ ನಾಲ್ಕು ದಿನಗಳಿಂದ ಊಟ ಕೊಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನೂ ಪೊಲೀಸರ ಮಾನವೀಯತೆ ಜನತೆ ಮೆಚ್ವುಗೆ ವ್ಯಕ್ತಪಡಿಸಿದ್ದಾರೆ.