ಮಡಿಕೇರಿ: ಹಿಂದೂಗಳು ಜಾಸ್ತಿ ಸೇರುವ ಜಾಗದಲ್ಲಿ ಪೆಟ್ರೋಲ್ ಬಾಂಬ್ ಹಾಕಬೇಕು. ಮಡಿಕೇರಿಯಲ್ಲಿ 50 ಕಡೆ ಪೆಟ್ರೋಲ್ ಬಾಂಬ್ ಹಾಕಿ ಭೀತಿ ಸೃಷ್ಟಿಸಬೇಕು. ಬಿಜೆಪಿ ಅಧಿಕಾರಕ್ಕೆ ಬರಬಾರದೆಂದು ಎಂದು ಮಲಯಾಳಂ ಭಾಷೆಯಲ್ಲಿ ಮಾತನಾಡಿರುವ ಆರೋಪದ ಮೇರೆಗೆ ಇಬ್ಬರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಮಡಿಕೇರಿ ನಗರಸಭಾ ಜೆಡಿಎಸ್ ಸದಸ್ಯ ಮುಸ್ತಾಫ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಅಬ್ದುಲ್ ಬಂಧಿತ ಆರೋಪಿಗಳು.
ಇಲ್ಲಿನ ಪೆನ್ಷನ್‌ಲೈನ್ ನಿವಾಸಿ ಶೇಷಪ್ಪ ರೈ ಎಂಬುವವರು ಯಾವುದೋ ಕೆಲಸದ ಸಲುವಾಗಿ ಆರೋಪಿ ಅಬ್ದುಲ್ ಎಂಬುವರಿಗೆ ಏಪ್ರಿಲ್ 23ರಂದು ಕರೆ ಮಾಡಿದ್ದರು. ಆಗ ಅಬ್ದುಲ್ ಅವರು ಫೋನ್ ಕಾಲ್ ಬಂದಾಗ ಕಟ್ ಮಾಡುವ ಬದಲು ರಿಸೀವ್ ಮಾಡಿದ್ದಾರೆ. ಇದರ ಪರಿವೆಯೇ ಇಲ್ಲದೆ ಆರೋಪಿಗಳು 3 ನಿಮಿಷಗಳ ಕಾಲ ಮಾತನಾಡಿದ್ದಾರೆ.
'ಈ ವೇಳೆ ಹಿಂದೂಗಳು ಜಾಸ್ತಿ ಸೇರುವ ಜಾಗದಲ್ಲಿ ಪೆಟ್ರೋಲ್ ಬಾಂಬ್ ಹಾಕಬೇಕು. ಹಿಂದೂಗಳನ್ನು ನಾವು ಸುಮ್ಮನೆ ಬಿಡಬಾರದು, ಪೆಟ್ರೋಲ್ ಬಾಂಬ್ ಹಾಕಿ ಹಿಂದೂಗಳನ್ನು ಕೊಲ್ಲಬೇಕು. ಆ ಮೂಲಕ ಇಡೀ ಮಡಿಕೇರಿ ನಗರ ಹೊತ್ತಿ ಉರಿಯುವಂತೆ ಮಾಡಬೇಕು. ನಾವು ಸತ್ತರೂ ಪರವಾಗಿಲ್ಲ. ಹಿಂದೂಗಳನ್ನ ಬಿಡಬಾರದು. ಎಷ್ಟೇ ಹಣ ಖರ್ಚಾದರೂ ತೊಂದರೆ ಇಲ್ಲ. ಇದಕ್ಕೆ ದುಡ್ಡಿರುವವರು ₹50 ಸಾವಿರದಿಂದ ₹1 ಲಕ್ಷ ಹಾಕಬೇಕು ಎಂದು ಮಲಯಾಳಂನಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.
ಆರೋಪಿಗಳ ಬಂಧನ: ಈ ಎಲ್ಲಾ ವಿಷಯ ಶೇಷಪ್ಪ ರೈ ಅವರ ಫೋನ್ನಲ್ಲಿ ರೆಕಾರ್ಡ್ ಆಗಿದೆ. ಇತ್ತೀಚೆಗೆ ಕಾಲ್ ರೆಕಾರ್ಡ್‍ಗಳನ್ನು ಪರಿಶೀಲನೆ ನಡೆಸುವಾಗ ಇದು ಬೆಳಕಿಗೆ ಬಂದಿದ್ದು, ಶೇಷಪ್ಪ ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಮಡಿಕೇರಿ ನಗರಸಭೆ ಸದಸ್ಯ ಹಾಗೂ ಆತನ ಸ್ನೇಹಿತ ಉದ್ಯಮಿ ಮಧ್ಯದ ಸಂಭಾಷಣೆಯ ಆಡಿಯೋ ಇದೀಗ ಜಿಲ್ಲೆಯ ಜನತೆಯಲ್ಲಿ ಭಯ ಹುಟ್ಟಿಸುವಂತೆ ಮಾಡಿದೆ. ಕೆಲ ದಿನಗಳಿಂದಷ್ಟೇ ಕೇಂದ್ರ ಸರ್ಕಾರ ದೇಶದ್ರೋಹ ಪ್ರಕರಣ ನಡೆಸಲು ಹೊಂಚು ಹಾಕಿದ್ದಾರೆ ಎಂದು ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಿತ್ತು.
ಇತ್ತ ಜಿಲ್ಲೆಯಲ್ಲಿ ಈ ಮೊದಲು 8 ವರ್ಷಗಳ ಹಿಂದೆ ಸೋಮವಾರ ಪೇಟೆ ತಾಲೂಕಿನ ಕಾಫಿ ತೋಟದಲ್ಲಿ ಅಬ್ದುಲ್ ಮದನಿ ಎಂಬ ಉಗ್ರನನ್ನು ಬಂಧಿಸಲಾಗಿತ್ತು. ಆಗ ಕೂಡ ಜಿಲ್ಲೆಯ ಜನರಲ್ಲಿ ಆತಂಕ ಉಂಟಾಗಿತ್ತು. ಈಗ ಪೆಟ್ರೋಲ್ ಬಾಂಬ್ ಹಾಕುವ ಸಂಭಾಷಣೆ ಲೀಕ್ ಆಗಿದ್ದು, ಜನರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ.
ಆತಂಕ ವ್ಯಕ್ತಪಡಿಸಿದ ಶಾಸಕ ಕೆ.ಜಿ.ಬೋಪಯ್ಯ
ಪೆಟ್ರೋಲ್ ಬಾಂಬ್ ಹಾಕುವ ಕುರಿತ ಆಡಿಯೋ ವೈರಲ್ ಪ್ರಕರಣದ ಬಗ್ಗೆ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರ ಬಂದ ಮೇಲೆ ಕೆಲವರು ದುಷ್ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದಾರೆ. ಆ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿಯೂ ಪ್ರತ್ಯೇಕತಾ ನಡಿಗೆಗಾಗಿ ಜಿಲ್ಲಾ ಮಟ್ಟದಲ್ಲಿ ಟಾಸ್ಕ್ ಪೋರ್ಸ್ ಸಮಿತಿ ರಚಿಸಿದ್ದ ಪಿಎಫ್ಐ