ETV Bharat / state

ಹಾರಂಗಿ ಡ್ಯಾಂ ಒಳ ಹರಿವು ಹೆಚ್ಚಳ: ಪ್ರವಾಹದ ಭೀತಿಯಿಂದ ಮನೆ ಖಾಲಿ ಮಾಡುತ್ತಿರುವ ಜನ - People are evacuating their houses due to flood in Kodagu

ಹಾರಂಗಿ ಡ್ಯಾಂಗೆ ಒಳಹರಿವು ಹೆಚ್ಚುತ್ತಿದ್ದು, ನೀರನ್ನು ನದಿಗೆ ಹರಿಸಲಾಗುತ್ತಿದೆ. ಕುಶಾಲನಗರದ ಕುವೆಂಪು ಹಾಗೂ ಸಾಯಿ‌ಶಂಕರ ಬಡಾವಣೆಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಸ್ಥಳೀಯರು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.

Kodagu
ಪ್ರವಾಹದ ಭೀತಿಯಿಂದ ಮನೆ ಖಾಲಿ ಮಾಡುತ್ತಿರುವ ಜನ
author img

By

Published : Jul 13, 2022, 10:11 AM IST

ಕೊಡಗು: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಅವಾಂತರ ಸೃಷ್ಟಿಸಿದೆ. ವರುಣನ ಆರ್ಭಟಕ್ಕೆ ಶಾಲೆ, ಮನೆಗಳ ಗೋಡೆಗಳು ಸೇರಿದಂತೆ ಬೆಟ್ಟ ಗುಡ್ಡ ಕುಸಿಯುತ್ತಿದ್ದು ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಇನ್ನೊಂದೆಡೆ, ಹಾರಂಗಿ ಡ್ಯಾಂಗೆ ಒಳ ಹರಿವು 15 ಸಾವಿರ ಕ್ಯೂಸೆಕ್ ಹೆಚ್ಚಾಗಿದೆ.

ಜಿಲ್ಲೆಯ ನದಿ, ತೊರೆ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ. ಹಾರಂಗಿ ಜಲಾಶಯದಿಂದ ಹೆಚ್ಚಿ‌ನ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ನದಿ ಪಾತ್ರದ ಜನತೆ ಪ್ರವಾಹದ ಭೀತಿಯಿಂದ ಊರು ಖಾಲಿ ಮಾಡುತ್ತಿದ್ದಾರೆ. ಕುಶಾಲನಗರದ ಕುವೆಂಪು ಹಾಗೂ ಸಾಯಿ‌ಶಂಕರ ಬಡಾವಣೆಗಳಿಗೆ ನೀರು ನುಗ್ಗುವ ಚಿಂತೆಯಿಂದ ಕೆಲವರು ಸುರಕ್ಷಿತ ಪ್ರದೇಶಗಳತ್ತ ತೆರಳುತ್ತಿದ್ದಾರೆ.

ಪ್ರತಿ ವರ್ಷ ನಮ್ಮ ಬಡಾವಣೆಗಳಿಗೆ ಜಿಲ್ಲಾಡಳಿತ ನೋಟಿಸ್ ನೀಡಿ, ಮನೆ ಖಾಲಿ‌ ಮಾಡುವಂತೆ ಹೇಳುತ್ತಾರೆ. ನಾವು ಎಲ್ಲಿಗೆ ಹೋಗಬೇಕೆಂದು ಸೂಚನೆ ನೀಡುವುದಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಇದೇ ಪರಿಸ್ಥಿತಿಯಿದೆ. ಯಾವುದೇ ಶಾಶ್ವತ ಪರಿಹಾರ ಮಾತ್ರ ಇಲ್ಲಿಯವರೆಗೆ ದೊರೆತಿಲ್ಲ.‌ ಸರ್ಕಾರ ಕೂಡಲೇ ಗಮನ ಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಗುಜರಾತ್‌ನಲ್ಲಿ ಭಾರಿ ಮಳೆ, ಕೆಲ ಪ್ರದೇಶಗಳು ಜಲಾವೃತ; ಒಡಿಶಾದಲ್ಲಿ ವಿದ್ಯಾರ್ಥಿಗಳ ಸಂಕಷ್ಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.