ಕೊಡಗು : ಜಿಲ್ಲೆಯಲ್ಲಿ ಕಾಡುಪ್ರಾಣಿ ಮತ್ತು ಮಾನವ ಸಂಘರ್ಷ ಹೆಚ್ಚಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಜಿಲ್ಲೆಯಲ್ಲಿ ಹುಲಿ ಪ್ರತ್ಯಕ್ಷವಾಗಿರೋದ್ರಿಂದ ಜನರಲ್ಲಿ ಮತ್ತಷ್ಟು ಆತಂಕ ಮನೆ ಮನೆಮಾಡಿದೆ. ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದ ಚೆಕ್ಪೋಸ್ಟ್ ಬಳಿ ತಡರಾತ್ರಿ ವಾಹನ ಸವಾರರಿಗೆ ಹುಲಿ ಕಾಣಿಸಿಕೊಂಡಿದ್ದು, ಇದರಿಂದ ಅಲ್ಲಿನ ಜನ ಭಯಭೀತರಾಗಿದ್ದಾರೆ.
ರಸ್ತೆ ಬದಿಯ ನಡುವೆ ಹುಲಿ ರಾಜಾರೋಷವಾಗಿ ಓಡಾಡುತ್ತಿದ್ದ ದೃಶ್ಯವನ್ನು ಮಾಲ್ದರೆ ಗ್ರಾಮದ ಕೆಲ ಯುವಕರು ಸೆರೆ ಹಿಡಿದಿದ್ದಾರೆ. ಶನಿವಾರ ರಾತ್ರಿ ಮಾಲ್ದಾರೆ ಗ್ರಾಮದ ಕೆಲ ಯುವಕರು ಮೈಸೂರಿನಿಂದ ಮಾಲ್ದಾರೆ ಗ್ರಾಮಕ್ಕೆ ವಾಪಸ್ ಆಗುತ್ತಿದ್ದರು. ಈ ವೇಳೆ ಗ್ರಾಮದ ಚೆಕ್ಪೋಸ್ಟ್ ಬಳಿ ರಾತ್ರಿ ಸುಮಾರು 11:50ಕ್ಕೆ ಹುಲಿ ರಸ್ತೆ ಬದಿಯಲ್ಲಿ ಹೋಗುತ್ತಿರುವುದನ್ನು ಯುವಕರು ಗಮನಿಸಿದ್ದಾರೆ.
ಈ ಹಿನ್ನೆಲೆ ಅವರು ಹುಲಿಯ ವಿಡಿಯೋವನ್ನು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಮಾಲ್ದಾರೆ ಗ್ರಾಮದಲ್ಲಿ ಆಗೊಮ್ಮೆ ಈಗೊಮ್ಮೆ ಹುಲಿ ಕಾಣಿಸಿಕೊಳ್ಳುತ್ತಿರುವುದರಿಂದ ಗ್ರಾಮಸ್ಥರಲ್ಲಿ ಮತ್ತೆ ಆತಂಕ ಮನೆ ಮಾಡಿದೆ. ಪರಿಣಾಮ ಕಾಫಿ ತೋಟದ ಕೂಲಿ ಕಾರ್ಮಿಕರು ತೋಟಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಓದಿ: ವಿಧಾನ ಪರಿಷತ್ ಚುನಾವಣೆ.. ಎರಡು ಸ್ಥಾನಕ್ಕೆ ಕಾಂಗ್ರೆಸ್ನಲ್ಲಿ ನೂರಕ್ಕೂ ಹೆಚ್ಚು ಆಕಾಂಕ್ಷಿಗಳು