ETV Bharat / state

ರಾತ್ರಿ ಆಹಾರ ಸೇವನೆ ಬಳಿಕ ಒಂದೇ ಕುಟುಂಬದ ಐವರು ಅಸ್ವಸ್ಥ: ಓರ್ವ ಸಾವು - ರಾತ್ರಿಯ ಆಹಾರ ಸೇವನೆ ಬಳಿಕ ಕುಟುಂಬದ ಐದು ಮಂದಿ ಅಸ್ವಸ್ಥ

ಕೊಡಗು ಜಿಲ್ಲೆಯ ಕಂಡಕರೆ ಎಂಬಲ್ಲಿ ರಾತ್ರಿಯ ಆಹಾರ ಸೇವನೆ ಬಳಿಕ ಕುಟುಂಬದ ಐದು ಮಂದಿ ಅಸ್ವಸ್ಥರಾಗಿ, ಓರ್ವ ಮೃತಪಟ್ಟಿರುವ ಘಟನೆ ನಡೆದಿದೆ.

one died
ಒಂದೇ ಕುಟುಂಬದ 5 ಮಂದಿ ಅಸ್ವಸ್ಥ
author img

By

Published : Feb 5, 2020, 6:14 PM IST

Updated : Feb 5, 2020, 7:26 PM IST

ಮಡಿಕೇರಿ: ರಾತ್ರಿ ಆಹಾರ ಸೇವನೆ ಬಳಿಕ ಕುಟುಂಬದ ಐದು ಮಂದಿ ಅಸ್ವಸ್ಥರಾಗಿ, ಓರ್ವ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಕಂಡಕರೆ ಎಂಬಲ್ಲಿ ನಡೆದಿದೆ.

ಆಹಾರ ಸೇವನೆ ಬಳಿಕ ಒಂದೇ ಕುಟುಂಬದ 5 ಮಂದಿ ಅಸ್ವಸ್ಥ, ಓರ್ವ ಸಾವು

ಸಂತೋಷ್ (30) ಮೃತ ಯುವಕ. ಸಾವಿತ್ರಿ ಎಂಬುವರ ಮನೆಯಲ್ಲಿ ಭಾನುವಾರ ರಾತ್ರಿ ಕಡಬು ಹಾಗೂ ಕೋಳಿ ಸಾರು ಊಟವನ್ನು ಎಲ್ಲರೂ ಸೇವಿಸಿದ್ದರು. ಊಟದ ಬಳಿಕ ಸಾವಿತ್ರಿ, ಮಕ್ಕಳಾದ ಸಂತೋಷ್, ವಿನೋದ್, ಸಹೋದರ ಶಶಿಧರ್, ಮಣಿ ಎಂಬುವರಿಗೆ ಆರೋಗ್ಯದಲ್ಲಿ ಏರುಪೇರಾಗಿತ್ತು. ತಕ್ಷಣ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ರೂ, ಸುಧಾರಣೆ ಕಾಣದ ಹಿನ್ನೆಲೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ.

ಈ ನಡುವೆ ಸಂತೋಷ್ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾನೆ. ಉಳಿದವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದು ವಿಚಾರ ಅಂದ್ರೆ ಇಲ್ಲಿ ಸಾವಿತ್ರಿ ಅವರನ್ನ ಹೊರತುಪಡಿಸಿ ಎಲ್ಲರೂ ಬುದ್ಧಿಮಾಂದ್ಯರಾಗಿದ್ದಾರೆ. ಫುಡ್ ಪಾಯ್ಸನ್‍ನಿಂದಲೇ ಈ ರೀತಿ ಆಗಿರಬಹುದೆಂದು ಶಂಕಿಸಲಾಗಿದ್ದು, ಅಸ್ವಸ್ಥರಾದವರ ರಕ್ತ, ಮೂತ್ರದ ಮಾದರಿಯನ್ನು ಲ್ಯಾಬ್‍ಗೆ ಕಳುಹಿಸಲಾಗಿದೆ.

Last Updated : Feb 5, 2020, 7:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.