ಕೊಡಗು/ಮಡಿಕೇರಿ: ಮಾರಕ ಕೊರೊನಾ ಎಲ್ಲೆಡೆ ಭೀತಿ ಮೂಡಿಸುತ್ತಿದ್ದು, ಮಡಿಕೇರಿ ನಗರದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕ್ಷೀಣಿಸುತ್ತಿದೆ. ವಿವಿಧ ಭಾಗಗಳಿಗೆ ತೆರಳುವ ಕೆಲವು ಬಸ್‌ಗಳನ್ನು ನಿಲ್ಲಿಸಲಾಗಿದೆ.
ಬೆಂಗಳೂರು - ಮೈಸೂರಿಗೆ ತೆರಳುವ ಐರಾವತ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ತುಂಬಾ ವಿರಳವಾಗಿದೆ. ಐರಾವತ ಬಸ್‌ನಲ್ಲಿ ಹೆಚ್ಚಾಗಿ ದೇಶ - ವಿದೇಶಗಳ ಪ್ರಯಾಣಿಕರು ಪ್ರಯಾಣ ಮಾಡ್ತಿದ್ರು. ಕೊರೊನಾ ವೈರಸ್ ಭೀತಿ ಹಿನ್ನೆಲೆ ಇದೀಗ ಶೇ. 30ರಷ್ಟು ಪ್ರಯಾಣಿಕರು ಮಾತ್ರ ಪ್ರಯಾಣಿಸುತ್ತಿದ್ದಾರೆ.
ಇನ್ನು ಯಾರಾದರೂ ಬಸ್‌ನಲ್ಲಿ ಕೆಮ್ಮಿದರೆ ಚಾಲಕರಿಗೆ, ನಿರ್ವಾಹಕರಿಗೆ ಭಯವಾಗುತ್ತಿದೆಯಂತೆ. ಅಲ್ಲದೇ ಹಿಂದೆ ಮುಂದೆ ಕೂರುವ ಪ್ರಯಾಣಿಕರು ಯಾರಾದರೂ ಕೆಮ್ಮಿದರೆ ಮುಂದಿನ ಸೀಟಿಗೆ ಬಂದು ಕುಳಿತುಕೊಳ್ಳುತ್ತಾರೆ. ಈ ವೈರಸ್‌ನ ಭೀತಿಯಿಂದ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಇದೀಗ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಇನ್ನು ಸಾರಿಗೆ ಇಲಾಖೆ ಐರಾವತ, ರಾಜಹಂಸ ಬಸ್‌ಗಳ ಚಾಲಕರಿಗೆ ಮಾತ್ರ ಮಾಸ್ಕ್ ನೀಡಿದ್ದು, ಸಾಮಾನ್ಯ ಸಿಬ್ಬಂದಿಗೆ ನೀಡಿಲ್ಲ ಎಂದು ಸಿಬ್ಬಂದಿ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.