ಕೊಡಗು: ಜಿಲ್ಲೆಯಲ್ಲಿ ಹೊಸದಾಗಿ 9 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 714 ಕ್ಕೆ ಏರಿಕೆಯಾಗಿದೆ.
ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಗೊಂದಿ ಬಸವನಹಳ್ಳಿಯ 46 ವರ್ಷದ ಪುರುಷ, ಬಲಮುರಿ ರಸ್ತೆಯ ಮಾರುತಿ ಶಾಲೆ ಬಳಿಯ 28 ವರ್ಷದ ಪುರುಷ, ಹಾಗೆಯೇ ರ‍್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಯ ಮೂಲಕ ಶನಿವಾರಸಂತೆಯ 60 ಮತ್ತು 36 ವರ್ಷದ ಮಹಿಳೆ, 10 ವರ್ಷದ ಬಾಲಕಿ, 2 ವರ್ಷದ ಬಾಲಕನಿಗೆ ಸೊಂಕು ದೃಢಪಟ್ಟಿದ್ದರೆ.
ಇನ್ನು ಮಡಿಕೇರಿ ಚೈನ್‌ಗೇಟ್ ಬಳಿಯ ವಸತಿ ಗೃಹದ 40 ವರ್ಷದ ಪುರುಷ, ಕೆ.ನಿಡುಗಣೆಯ 32 ವರ್ಷದ ಮಹಿಳೆ, ಮೈತ್ರಿ ಹಾಲ್ ಬಳಿಯ ಪೊಲೀಸ್ ವಸತಿ ಗೃಹದ 52 ವರ್ಷದ ಪುರುಷನಲ್ಲಿ ಸೋಂಕು ಕಂಡು ಬಂದಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು ಸೋಂಕಿತರಲ್ಲಿ 436 ಮಂದಿ ಗುಣಮುಖರಾಗಿದ್ದು, 267 ಸಕ್ರಿಯ ಪ್ರಕರಣಗಳಿವೆ. ಜೊತೆಗೆ 11 ಮಂದಿ ಮೃತಪಟ್ಟಿದ್ದು, 202 ಕಂಟೇನ್ಮೆಂಟ್ ವಲಯಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.