ಕೊಡಗು: ಹೊಸ ವರ್ಷವನ್ನು ಹರ್ಷದಿಂದ ಬರಮಾಡಿಕೊಳ್ಳಲು ಮಂಜಿನ ನಗರಿಯಲ್ಲೂ ಭರ್ಜರಿ ತಯಾರಿ ನಡೆದಿದೆ. ಇಯರ್ ಎಂಡ್ ಮತ್ತು ನ್ಯೂ ಇಯರ್ ಸೆಲೆಬ್ರೆಷನ್ ಗೆ ಪ್ರವಾಸಿಗರ ಸ್ವರ್ಗ, ಮಂಜಿನ ನಗರಿ ಮಡಿಕೇರಿಗೆ ಪ್ರವಾಸಿಗರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ.
ನಗರದ ಪ್ರವಾಸಿ ತಾಣಗಳೆಲ್ಲವೂ ಪ್ರವಾಸಿಗರಿಂದ ಗಿಜಿಗುಡುತ್ತಿವೆ. ಹೋಮ್ಸ್ ಸ್ಟೇ ಹಾಗೂ ಹೋಟೆಲ್‌ಗಳು ಭರ್ತಿಯಾಗಿವೆ. ಕೊಡಗಿನ ಹೋಟೆಲ್, ಹೋಮ್ಸ್ ಸ್ಟೇ, ರೆಸಾರ್ಟ್‌ಗಳಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಭರ್ಜರಿ ಸಿದ್ಧತೆ ನಡೆದಿದೆ. ನಗರದ ಕೋಟೆ ಅರಮನೆ, ರಾಜಾ ಸೀಟ್ , ಅಬ್ಬೆ ಜಲಪಾತ, ಭಾಗಮಂಡಲ, ತಲಕಾವೇರಿ, ಇರ್ಫು ಜಲಪಾತ ಹೀಗೆ ಪ್ರಮಖ ಪ್ರವಾಸಿ ತಾಣಗಳೆಲ್ಲವೂ ಪ್ರವಾಸಿಗರ ದಟ್ಟಣೆಯಿಂದ ಭರ್ತಿಯಾಗಿವೆ.
ಬಣ್ಣ, ಬಣ್ಣದ ವಿದ್ಯುತ್ ದೀಪಗಳಿಂದ ಹೋಟೆಲ್, ಹೋಮ್ ಸ್ಟೇ, ರೆಸಾರ್ಟ್ಗಳು ಮಧುವಣಗಿತ್ತಿಯಂತೆ ಅಲಂಕಾರಗೊಂಡಿವೆ. ಸುಂದರ ಪ್ರಕೃತಿಯ ಮಡಿಲಲ್ಲಿ 2019 ಕ್ಕೆ ಸಮಾರೋಪ ಮಾಡಿ 2020 ರ ಸ್ವಾಗತಕ್ಕೆ ಜಿಲ್ಲೆಯ ಜನತೆ ಹಾಗೂ ಪ್ರವಾಸಿಗರು ಕಾತರದಿಂದ ಕಾಯುತ್ತಿದ್ದಾರೆ.