ETV Bharat / state

ಮಡಿಕೇರಿ ಕೋರ್ಟ್ ಆವರಣದಲ್ಲೇ ಪಶ್ಚಿಮ ಘಟ್ಟದ ಪರ ನಕ್ಸಲ್ ನಾಯಕನ ಘೋಷಣೆ

ನಕ್ಸಲ್​ ಚಟುವಟಿಕೆಗಳ ಆರೋಪದಡಿ ಬಂಧಿತರಾಗಿರುವ ರೂಪೇಶ್ ಇಂದು ಮಡಿಕೇರಿ ನ್ಯಾಯಾಲಯಕ್ಕೆ ಕರೆ ತಂದಾಗ ಪರಿಸರದ ಮೇಲೆ ಮನುಷ್ಯನ ಅಟ್ಟಹಾಸವೇ ಪ್ರಾಕೃತಿಕ ವಿಕೋಪಕ್ಕೆ ಕಾರಣವೆಂದು ಆರೋಪಿಸಿದರು. ಅಲ್ಲದೆ, ಪಶ್ವಿಮ ಘಟ್ಟ ಉಳಿಸುವಂತೆ ಘೋಷಣೆ ಕೂಗಿದ್ರು.

ನಕ್ಸಲ್​ ಆರೋಪಿ ರೂಪೇಶ್​ ಘೋಷಣೆ ಕೂಗುತ್ತಿರುವುದು
author img

By

Published : Aug 20, 2019, 7:44 PM IST

ಮಡಿಕೇರಿ: ಕೊಡಗಿನಲ್ಲಿ ನಕ್ಸಲ್ ಚಟುವಟಿಕೆ ಆರೋಪದಡಿ ಬಂಧನಕ್ಕೊಳಗಾಗಿರುವ ನಕ್ಸಲ್ ನಾಯಕ ರೂಪೇಶ್ ಅವರನ್ನು ಮಡಿಕೇರಿ ನ್ಯಾಯಾಲಯಕ್ಕೆ ಮಂಗಳವಾರ ಹಾಜರುಪಡಿಸಲು ಕರೆತರಲಾಗಿತ್ತು. ಆ ವೇಳೆ ಅವರು ಕೋರ್ಟ್ ಆವರಣದಲ್ಲೇ ಜಿಲ್ಲೆಯ ಪಶ್ಚಿಮ ಘಟ್ಟದ ಪರ ಘೋಷಣೆ ಕೂಗುವ ಮೂಲಕ ಪರಿಸರ ಕಾಳಜಿ ಮೆರೆದಿದ್ದಾರೆ.

ನಕ್ಸಲ್​ ಆರೋಪಿ ರೂಪೇಶ್​ ಘೋಷಣೆ ಕೂಗುತ್ತಿರುವುದು

ನಕ್ಸಲ್‌ವಾದಿ ಜಿಂದಾಬಾದ್, 'Natural calamities are man made'( ಪ್ರಾಕೃತಿಕ ವಿಕೋಪಗಳು ಮಾನವ ನಿರ್ಮಿತ) ಹಾಗೂ Fight for Western Ghats to protect(ಪಶ್ಚಿಮ ಉಳಿಸಲು ಹೋರಾಡಿ) ಎಂದು ಆಂಗ್ಲಭಾಷೆಯಲ್ಲಿ ಕರೆ ನೀಡಿದರು. ಅಲ್ಲದೆ, ನಕ್ಸಲರು ದೇಶ ಭಕ್ತರು ಅಂತಾ ಘೋಷಣೆಯನ್ನು ಮೊಳಗಿಸಿದರು.

ನಕ್ಸಲ್ ಚಟುವಟಿಕೆ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 31ಕ್ಕೆ ನ್ಯಾಯಾಧೀಶರು ಮುಂದೂಡಿದರು.

Intro:ಕೋರ್ಟ್ ಆವರಣದಲ್ಲಿ ಪರಿಸರ ಕಾಳಜಿ ಘೋಷಣೆ ಕೂಗಿದ ನಕ್ಸಲ್ ನಾಯಕ

ಕೊಡಗು: ಕೊಡಗಿನಲ್ಲಿ ನಕ್ಸಲ್ ಚಟುವಟಿಕೆ ಹಿನ್ನಲೆ ಮಡಿಕೇರಿ ನ್ಯಾಯಾಲಯಕ್ಕೆ ಹಾಜರಾಗಿದ್ದ ನಕ್ಸಲ್ ನಾಯಕ ರೂಪೇಶ್ ಕೋರ್ಟ್ ಆವರಣದಲ್ಲೇ ಜಿಲ್ಲೆಯ ಪ್ರಾಕೃತಿಕ ವಿಕೋಪ ಬಗ್ಗೆ ಘೋಷಣೆ ಕೂಗುವ ಮೂಲಕ ಪರಿಸರ ಕಾಳಜಿ ವ್ಯಕ್ತಪಡಿಸಿದ್ದಾನೆ‌.

ವಿಚಾರಣೆಗೆ ನ್ಯಾಯಾಲಯಕ್ಕೆ ಕರೆ ತರುವ ಸಂದರ್ಭದಲ್ಲಿ ಆತ ನಕ್ಸಲ್‌ವಾದಿ ಜಿಂದಾಬಾದ್, ನ್ಯಾಚುರಲ್ ಕೆಲಾಮಿಟಿ ಆರ್ ಮ್ಯಾನ್ ಮೇಡ್ ಹಾಗೂ ಫೈಟ್ ಫರ್ ಪ್ರೊಟೆಕ್ಟ್ ದ ವೆಸ್ಟನ್ ಘಾಟ್ಸ್, ಮಾವೋಯಿಸ್ಟ್‌ಗಳ್ ದೇಶ ಭಕ್ತರಂ ಎಂದು ಘೋಷಣೆ ಕೂಗಿದ್ದಾನೆ.ಇನ್ನೂ ನಕ್ಸಲ್ ಚಟುವಟಿಕೆ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 31ಕ್ಕೆ ಮುಂದೂಡಿ ನ್ಯಾಯಾಧೀಶರು ಆದೇಶ ಹೊರಡಿಸಿದರು.

- ಕೆ.ಸಿ.ಮಣಿಕಂಠ,ಈಟಿವಿ ಭಾರತ, ಕೊಡಗು.Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.