ಕೊಡಗು: ಪ್ರಕೃತಿ ವಿಕೋಪ, ಲಾಕ್ಡೌನ್ನಿಂದ ಗ್ರಾಮೀಣ ಕೀಡಾಕೂಟಗಳು ಸ್ಥಗಿತಗೊಂಡಿದ್ದವು. ಆದರೆ, ಈ ಭಾರಿ ಆಯೋಜಿಸಿದ್ದ ಕೆಸರು ಗದ್ದೆ ಕ್ರೀಡಾಕೂಟವನ್ನು ಜಿಲ್ಲೆಯಲ್ಲಿ ಸಡಗರ, ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಆರಂಭವಾಗಿವೆ. ಈ ನಡುವೆ ಮಡಿಕೇರಿ ಸಮೀಪದ ಸತ್ಯ ಎಂಬುವವರ ಗದ್ದೆಯಲ್ಲಿ ಕೆಸರು ಗದ್ದೆ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು. ಕೆಸರುಗದ್ದೆಯಲ್ಲಿ ಹಗ್ಗ - ಜಗ್ಗಾಟ, ಥ್ರೋ ಬಾಲ್, ಕಾಲಿಗೆ ಹಗ್ಗ ಕಟ್ಟಿಕೊಂಡು ಓಡುವ ಸ್ಪರ್ಧೆ, ಕೆಸರು ಗದ್ದೆಯಲ್ಲಿ ಓಟದ ಸ್ವರ್ಧೆ ಸೇರಿದಂತೆ ವಿವಿಧ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. ಪುರುಷರ ಹಗ್ಗ - ಜಗ್ಗಾಟ ಸಖತ್ ಥ್ರಿಲ್ ನೀಡಿದ್ರೆ,ಪುರುಷರಿಗಿಂತ ನಾವೇನು ಕಡಿಮೆ ಇಲ್ಲ ಎಂಬತ್ತೆ ಮಹಿಳಾ ಕ್ರೀಡಾಪಟುಗಳು ಸಾಥ್ ನೀಡಿದರು.
ಅನೇಕ ವರ್ಷಗಳಿಂದ ಯಾವುದೇ ಗ್ರಾಮೀಣ ಕ್ರೀಡಾಕೂಟಗಳು ನಡೆದಿರಲಿಲ್ಲ. ಇದರಿಂದ ನಮಗೂ ಬೇಜಾರಾಗಿತ್ತು. ಇದೀಗ ಜಿಲ್ಲೆಯಲ್ಲಿ ಮೊದಲ ಕೇಸರು ಗದ್ದೆ ಕ್ರೀಡಾಕೂಟ ಆಯೋಜನೆಗೊಂಡಿದ್ದು ಸಖತ್ ಖುಷಿ ಕೊಟ್ಟಿದೆ. ನಾನು ಗದ್ದೆಗೆ ಮೊದಲ ಬಾರಿಗೆ ಇಳಿದು ಆಟವಾಡಿದೆ. ಹಗ್ಗ - ಜಗ್ಗಾಟ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ನಮಗೆ ತುಂಬಾ ಖುಷಿ ಕೊಟ್ಟಿದೆ. ಈ ರೀತಿಯ ಕ್ರೀಡಾಕೂಟಗಳು ಮತ್ತಷ್ಟು ಆಯೋಜನೆಗೊಳ್ಳಬೇಕು ಎಂದು ಕ್ರೀಡಾಪಟ್ಟು ಸವಿತಾ ತಮ್ಮ ಅನುಭವ ಹಂಚಿಕೊಂಡರು.
ಓದಿ: ಅವರು ಏನೇನು ಮಾತನಾಡಿದ್ದಾರೆ ಅನ್ನೋದನ್ನ ಕಳುಹಿಸಿ ಕೊಡಲಾ...ಕಾಂಗ್ರೆಸ್ಗೆ CT ರವಿ ಟಾಂಗ್
ಮನೆಯಲ್ಲೇ ಇದ್ದು -ಇದ್ದು ಬೇಜಾರಾಗಿದ್ದ ಸಾಕಷ್ಟು ಮಂದಿ, ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಓಡುತ್ತಾ, ಹಾರುತ್ತಾ, ಕೆಸರಲ್ಲಿ ಒದ್ದಾಡುತ್ತಾ ಎಲ್ಲ ಒತ್ತಡವನ್ನು ಮರೆತು ಹಾಯಾಗಿ ಒಂದು ದಿನ ತುಂತುರು ಮಳೆಯ ನಡುವೆ ಕೆಸರು ಗದ್ದೆಯಲ್ಲಿ ಎಂಜಾಯ್ ಮಾಡಿದ್ರು.