ಕೊಡಗು: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಚುರುಕುಗೊಂಡಿದ್ದು, ಕಳೆದೆರಡು ದಿನಗಳಿಂದ ಸಿಡಿಲು-ಗುಡುಗು ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ.
ಬೆಳಗ್ಗೆಯಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ಮಧ್ಯಾಹ್ನದ ನಂತರ ವರುಣನ ಅಬ್ಬರ ಶುರುವಾಗುತ್ತದೆ. ಈಗಾಗಲೇ ಒಂದೆಡೆ ಕೊರೊನಾರ್ಭಟಕ್ಕೆ ತತ್ತರಿಸಿರುವ ಜನ, ಈಗ ವಿಪರೀತವಾಗಿ ಸುರಿಯುತ್ತಿರುವ ಮಳೆಗೆ ಕಂಗಾಲಾಗಿದ್ದಾರೆ.
ಕಳೆದ ವರ್ಷ ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಜನ ತತ್ತರಿಸಿದ್ದರು. ಈ ವರ್ಷವೂ ಮಳೆ ಮತ್ತೊಮ್ಮೆ ಅವಾಂತರ ಸೃಷ್ಟಿಸುತ್ತಾ ಎಂಬ ಭಯ ಜನರನ್ನು ಕಾಡುತ್ತಿದೆ.
ಓದಿ: ಬಿಎಸ್ವೈಗೆ ಡಬಲ್ ರಿಲೀಫ್ ನೀಡಿದ ಉಪ ಚುನಾವಣಾ ಫಲಿತಾಂಶ: ಸಿಎಂ ಕುರ್ಚಿ ಸುಭದ್ರ