ETV Bharat / state

ವಿದ್ಯಾರ್ಥಿಗಳಿಗೆ ಇವಿಎಂ ಬಗ್ಗೆ ಮಾಹಿತಿ...  ಇತರೆ ಶಾಲೆಗಳಿಗಿಂದ ಭಿನ್ನ! - undefined

ಮಂಜಿನ ನಗರಿಯ ಕಾನಬೈಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಚುನಾವಣೆಯ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ವಿದ್ಯಾರ್ಥಿಗಳನ್ನೇ ಚುನಾವಣೆಗೆ ನಿಲ್ಲಿಸಿ ಅದರ ಬಗ್ಗೆ ಅರಿವನ್ನು ಮೂಡಿಸಿದ್ದಾರೆ.

ಸರ್ಕಾರಿ ಶಾಲೆ
author img

By

Published : Jul 13, 2019, 5:29 AM IST

ಕೊಡಗು: ಸುಂದರ ಪ್ರಕೃತಿ ನಡುವೆ ಮಕ್ಕಳಿಗೆ ಭವ್ಯ ಭಾರತದ ಭವಿಷ್ಯ ರೂಪಿಸುವ ಜವಾಬ್ದಾರಿಯನ್ನು ಶಾಲೆಯ ಶಿಕ್ಷಕರು ಪ್ರಾತ್ಯಕ್ಷಿಕೆ ಮೂಲಕ ಸ್ವ ಅನುಭವಕ್ಕೆ ತರುತ್ತಿದ್ದಾರೆ.

ಶಾಲೆ ಎಂದ್ರೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಭೋದಿಸುವ ಪಠ್ಯ ಪ್ರವಚನಕ್ಕೂ ಹೊರತಾದದ್ದು ಎಂದು ನಂಬಿರುವ ಅವರು ಪೆನ್ನನ್ನು ಹಿಡಿಯುವ ಮಕ್ಕಳ ಕೈಯಲ್ಲಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿವ ಅಭ್ಯರ್ಥಿಗಳ ಹಣೆ ಬರಹ ಬರೆಯುವ ಹೊಣೆಗಾರಿಕೆ ಕೊಟ್ಟಿದ್ದಾರೆ.

ಕಾನಬೈಲ್ ಸರ್ಕಾರಿ ಪ್ರೌಢಶಾಲೆ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕಾನಬೈಲ್ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ನವೀನ್ ಹಾಗೂ ಮುಖ್ಯ ಶಿಕ್ಷಕ ಮಂಜೇಶ್ ಶಾಲೆಯ ಸಂಸತ್ತಿನ‌ ಚುನಾವಣೆಯಲ್ಲಿ ಇವಿಎಂ ಮಷಿನ್ ಮಾದರಿ ಮೊಬೈಲ್ ಆ್ಯಪ್ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಚುನಾವಣೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.‌ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಂಡ ಇವಿಎಂ ಆಪ್ ನಲ್ಲಿ ಮಕ್ಕಳ ಖಾತೆಯ ಹೆಸರು ಮತ್ತು ಫೋಟೋ ಹಾಕಿ ಶಿಕ್ಷಕರ ಮೊಬೈಲ್ ಬಳಸಿ ಚುನಾವಣೆ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಆಯ್ಕೆಯ ಮಹತ್ವ ಹಾಗೂ ಚುನಾವಣೆ ಬಗ್ಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ. ‌

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುತ್ತಾ ಅವರ ಭೌದ್ಧಿಕ,ಸೃಜನ ಶೀಲತೆ, ಸಹಬಾಳ್ವೆ, ವಿನಯ, ವಿವೇಕ, ತರ್ಕ, ಧೈರ್ಯ ಮೊದಲಾದ ಗುಣಗಳನ್ನು ಪೋಷಿಸುವ ಹಾಗೂ ಚೇತೋಹಾರಿ ಕನಸುಗಳನ್ನು ಹುಟ್ಟುಹಾಕಲು ನಿರಂತರ ಪ್ರೇರೇಪಣೆ ಎನ್ನುವ ಶಾಲೆಯ ಧ್ಯೇಯ ವಾಕ್ಯದೊಂದಿಗೆ ಇದೀಗ ಮಕ್ಕಳಲ್ಲಿ ಇವಿಎಂ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಚುನಾವಣೆಯ ವಾಸ್ತವ ಅನುಭವವನ್ನು ವಿದ್ಯಾರ್ಥಿಗಳಿಗೆ ಕೊಡುವ ಪ್ರಾಮಾಣಿಕ ಪ್ರಯತ್ನವನ್ನು ನಾವೆಲ್ಲರೂ ಮಾಡುತ್ತಿದ್ದೇವೆ ಎಂದು ಸಂತಸ ಹಂಚಿಕೊಳ್ಳುತ್ತಾರೆ ಶಾಲೆಯ‌ ಮುಖ್ಯ ಶಿಕ್ಷಕರಾದ ಮಂಜೇಶ್.

ಹದಿನೆಂಟು ವರ್ಷದ ಬಳಿಕ ನಮಗೆ ಮತದಾನದ ಅವಕಾಶ ಸಿಗುತ್ತದೆ. ಇದೀಗ ನಮ್ಮ ಶಾಲೆಯ ಶಿಕ್ಷಕರು ನಮಗಾಗಿ ಹೊಸದೊಂದು ಆ್ಯಪ್ ಮೂಲಕ ಚುನಾವಣೆ ಹಾಗೂ ಇವಿಎಂ ಮತ ಯಂತ್ರದ ಬಗ್ಗೆ ಪ್ರಾಯೋಗಿಕ ಅನುಭವ ಕೊಡುತ್ತಿರುವುದು ಸಂತೋಷವಾಗಿದೆ ಎನ್ನುತ್ತಾರೆ ಶಾಲೆಯ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತ ವಿದ್ಯಾರ್ಥಿ ಪ್ರತಾಪ ಶರ್ಮ.

Intro:ವಿದ್ಯಾರ್ಥಿಗಳಿಗೆ ಇವಿಎಂ ಮತ ಯಂತ್ರಗಳ ಮಾಹಿತಿ: ಈ ಸರ್ಕಾರಿ ಶಾಲೆ ಇತರೇ ಶಾಲೆಗಳಿಗೂ ಮಾದರಿ 

ಕೊಡಗು: ಸುಂದರ ಪ್ರತಿಕೃತಿ ನಡುವೆ ಮಕ್ಕಳಿಗೆ ಭವ್ಯ ಭಾರತದ ಭವಿಷ್ಯ ರೂಪಿಸುವ ಜವಾಬ್ದಾರಿಯನ್ನು ಶಾಲೆಯ ಶಿಕ್ಷಕರು ಪ್ರಾತ್ಯಕ್ಷಿಕೆ ಮೂಲಕ ಸ್ವ ಅನುಭವಕ್ಕೆ ತರುತ್ತಿದ್ದಾರೆ. ಶಾಲೆ ಎಂದರೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಭೋದಿಸುವ ಪಠ್ಯ ಪ್ರವಚನಕ್ಕೂ ಹೊರತಾದದ್ದು ಎಂದು ನಂಬಿರುವ ಅವರು ಪೆನ್ನನ್ನು ಹಿಡಿಯುವ ಮಕ್ಕಳ ಕೈಯಲ್ಲಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿವ ಅಭ್ಯರ್ಥಿಗಳ ಹಣೆ ಬರಹ ಬರೆಯುವ ಹೊಣೆಗಾರಿಕೆ ಕೊಟ್ಟಿದ್ದಾರೆ..!!

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕಾನಬೈಲ್ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ  ನವೀನ್ ಹಾಗೂ ಮುಖ್ಯ ಶಿಕ್ಷಕ ಮಂಜೇಶ್ ಶಾಲೆಯ ಸಂಸತ್ತಿನ‌ ಚುನಾವಣೆಯಲ್ಲಿ ಇವಿಎಂ ಮಷಿನ್ ಮಾದರಿ ಮೊಬೈಲ್ ಆ್ಯಪ್ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಚುನಾವಣೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.‌ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಂಡ ಇವಿಎಂ ಆಪ್ ನಲ್ಲಿ ಮಕ್ಕಳ ಖಾತೆಯ ಹೆಸರು ಮತ್ತು ಫೋಟೋ ಹಾಕಿ ಶಿಕ್ಷಕರ ಮೊಬೈಲ್ ಬಳಸಿ ಚುನಾವಣೆ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಆಯ್ಕೆಯ ಮಹತ್ವ ಹಾಗೂ ಚುನಾವಣೆ  ಬಗ್ಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ. ‌

'ಎಲ್ಲಾ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುತ್ತಾ ಅವರ ಭೌದ್ಧಿಕ,ಸೃಜನ ಶೀಲತೆ, ಸಹಬಾಳ್ವೆ, ವಿನಯ, ವಿವೇಕ, ತರ್ಕ, ಧೈರ್ಯ ಮೊದಲಾದ ಗುಣಗಳನ್ನು ಷೋಷಿಸುವ ಹಾಗೂ ಚೇತೋಹಾರಿ ಕನಸುಗಳನ್ನು ಹುಟ್ಟುಹಾಕಲು ನಿರಂತರ ಪ್ರೇರೇಪಣೆ' ಎನ್ನುವ ಶಾಲೆಯ ಧ್ಯೇಯ ವಾಕ್ಯದೊಂದಿಗೆ ಇದೀಗ ಮಕ್ಕಳಲ್ಲಿ ಇವಿಎಂ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.ಚುನಾವಣೆ ವಾಸ್ತವ ಅನುಭವವನ್ನು ವಿದ್ಯಾರ್ಥಿಗಳಿಗೆ ಕೊಡುವ ಪ್ರಾಮಾಣಿಕ ಪ್ರಯತ್ನವನ್ನು ನಾವೆಲ್ಲರೂ ಮಾಡುತ್ತಿದ್ದೇವೆ ಎಂದು ಸಂತಸ ಹಂಚಿಕೊಳ್ಳುತ್ತಾರೆ ಶಾಲೆಯ‌ ಮುಖ್ಯ ಶಿಕ್ಷಕರಾದ ಮಂಜೇಶ್.

ಬೈಟ್- ಮಂಜೇಶ್, ಮುಖ್ಯ ಶಿಕ್ಷಕ 

ಶಾಲೆಯಲ್ಲಿ ನಡೆಯುತ್ತಿರುವ 2019-20 ನೇ ಸಾಲಿನ ಶಾಲಾ ಸಂಸತ್ ಚುನಾವಣೆಯಲ್ಲಿ ವಯಸ್ಸಿಗೂ ಮೀರಿದ ಜವಾಬ್ದಾರಿ ಅರಿವು ಮೂಡಿಸುವ ಪ್ರಯತ್ನವನ್ನು ಶಾಲೆಯ ಶಿಕ್ಷಕ ವೃಂದ ಮಾಡುತ್ತಿದ್ದೆ.‌ವಿದ್ಯಾರ್ಥಿಗಳನ್ನೇ ಪ್ರಧಾನ ಮಂತ್ರಿ, ಉಪ ಪ್ರಧಾನಿ, ಹಣಕಾಸು ಮಂತ್ರಿ, ಕ್ರೀಡಾ ಮಂತ್ರಿ, ಗೃಹ ಮಂತ್ರಿ, ಸಾಂಸ್ಕೃತಿಕ ಮಂತ್ರಿ, ವಾರ್ತಾ ಮಂತ್ರಿ, ತೋಟಗಾರಿಕೆ ಮಂತ್ರಿ, ಸ್ವಚ್ಛತಾ ಮಂತ್ರಿ, ಆಹಾರ ಮಂತ್ರಿ, ಆರೋಗ್ಯ ಮಂತ್ರಿ, ಪ್ರವಾಸ ಮಂತ್ರಿ, ಶಿಸ್ತು ಪಾಲನಾ ಮಂತ್ರಿ ಜೊತೆಗೆ ವಿರೋಧ ಪಕ್ಷ ನಾಯಕ ಕೂಡ ಆಯ್ಕೆಯಾಗಿ ಸುಭ್ರದ್ರ ಸರ್ಕಾರ ಪ್ರೌಢಶಾಲೆಯಲ್ಲಿ ನಡೆಸುವ ವಿನೂತನ ಪ್ರಯತ್ನ ಮಾಡುತ್ತಾ ಯಾವುದೇ ಖಾಸಗಿ ಶಾಲೆಗಳ‌ ನಡುವೆ ಈ ಸರ್ಕಾರಿ ಶಾಲೆಯೂ ಕಮ್ಮಿ ಇಲ್ಲವೆಂಬ ಸಂದೇಶ ನೀಡುತ್ತಾ ಇತರರಿಗೂ ಮಾದರಿ ಆಗಿದ್ದಾರೆ.‌

ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಸಿ ಚುನಾವಣಾ ಕಣದಲ್ಲಿದ್ದರು.ಉಳಿದಂತೆ ಎಲ್ಲಾ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ತೋರಿಸಿ ಮತ ಚಲಾವಣೆ ಮಾಡಿದರು.ಇಂತಹ ವಿಭಿನ್ನ ಪ್ರಯತ್ನ ಮೂಲಕ ಮಕ್ಕಳಿಗೆ ಚುನಾವಣೆ ಹಾಗೂ ಇವಿಎಂ ಬಳಕೆ ಬಗ್ಗೆ ಶಾಲೆಯ ಶಿಕ್ಷಕರು ಮಕ್ಕಳಲ್ಲಿ ಜಾಗೃತಿ ಮೂಡಿಸಿರುವ ಶಿಕ್ಷಕರು ರಾಜ್ಯ ರಾಜಕಾರಣ ಅಲ್ಲೋಲ ಕಲ್ಲೋಲ ಆಗುತ್ತಿರುವ ಸನ್ನಿವೇಶದಲ್ಲಿ ಚುನಾವಣೆ ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿ ಬಗ್ಗೆ ತಿಳಿ ಹೇಳುತ್ತಿದ್ದಾರೆ. 

ಹದಿನೆಂಟು ವರ್ಷದ ಬಳಿಕ ನಮಗೆ ಮತದಾನದ ಅವಕಾಶ ಸಿಗುತ್ತದೆ. ಇದೀಗ ನಮ್ಮ ಶಾಲೆಯ ಶಿಕ್ಷಕರು ನಮಗಾಗಿ ಹೊಸದೊಂದು ಆ್ಯಪ್ ಮೂಲಕ ಚುನಾವಣೆ ಹಾಗೂ ಇವಿಎಂ ಮತ ಯಂತ್ರದ ಬಗ್ಗೆ ಪ್ರಾಯೋಗಿಕ ಅನುಭವ ಕೊಡುತ್ತಿರುವುದು ಸಂತೋಷವಾಗಿದೆ ಎನ್ನುತ್ತಾರೆ ಶಾಲೆಯ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತ ವಿದ್ಯಾರ್ಥಿ ಪ್ರತಾಪ ಶರ್ಮ. 

ಬೈಟ್-2 ಪ್ರತಾಪ ಶರ್ಮ, ಶಾಲೆಯ ವಿದ್ಯಾರ್ಥಿ.  

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.‌

Body:0

Conclusion:0

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.