ETV Bharat / state

ಫಲಿಸಿತು ಬಾಲಕಿಯ ಪ್ರಾರ್ಥನೆ: ಕೈಸೇರಿತು ಕೋವಿಡ್​​​ನಿಂದ ಮೃತಪಟ್ಟ ತಾಯಿಯ ಮೊಬೈಲ್​ - ಕಳೆದು ಹೋದ ಮೊಬೈಲ್ ಫೋನ್ ಪತ್ತೆ

ಕೋವಿಡ್​​​​ ಸಂದರ್ಭದಲ್ಲಿ ತಾಯಿಯನ್ನು ಕಳೆದುಕೊಂಡಿದ್ದ ಬಾಲಕಿಯೋರ್ವಳು, ತನ್ನ ತಾಯಿಯ ಮೊಬೈಲ್ ಕಳೆದು ಹೋಗಿದೆ, ಹುಡುಕಿ ಕೊಡುವಂತೆ ಪೊಲೀಸರು ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಳು. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ ಹಲವರು ಹೊಸ ಮೊಬೈಲ್ ನೀಡಲು ಮುಂದಾಗಿದ್ದರು. ಆದರೆ ಆ ಮೊಬೈಲ್​ನಲ್ಲಿ ತಾಯಿಯ ನೆನಪಿದೆ, ಹಾಗಾಗಿ ಅದೇ ಮೊಬೈಲ್​​ ಹುಡುಕಿ ಕೊಡುವಂತೆ ಮನವಿ ಮಾಡಿದ್ದಳು.

mobile-phone-of-late-mother-found-after-several-months
ಕೈಸೇರಿತು ತಿಂಗಳುಗಳ ಹಿಂದೆ ಕಳೆದು ಹೋಗಿದ್ದ ತಾಯಿಯ ಮೊಬೈಲ್​
author img

By

Published : Aug 20, 2021, 10:23 AM IST

Updated : Aug 20, 2021, 1:18 PM IST

ಮಡಿಕೇರಿ (ಕೊಡಗು): ಕೋವಿಡ್​​ನಿಂದಾಗಿ ಮೃತಪಟ್ಟ ಮಹಿಳೆಯೊಬ್ಬರ ಪುತ್ರಿ, ತನ್ನ ಅಮ್ಮನ ಮೊಬೈಲ್ ಹುಡುಕಿಕೊಡಿ ಎಂದು ತಿಂಗಳ ಹಿಂದೆ ಜಿಲ್ಲಾಧಿಕಾರಿ ಹಾಗೂ ಪೊಲೀಸರಿಗೆ ಪತ್ರದ ಮುಖೇನ ಮನವಿ ಮಾಡಿದ್ದಳು.

ಅದರಲ್ಲಿ ನನ್ನ ತಾಯಿಯ ಕೊನೆಯ ನೆನಪುಗಳಿವೆ, ಆದರೆ ತಾಯಿ ಮೃತಪಟ್ಟಾಗ ಮೊಬೈಲ್​ ಕಳುವಾಗಿತ್ತು ಎಂದು ಬಾಲಕಿ ತಿಳಿಸಿದ್ದಳು. ಇದೀಗ ಈ ಬಾಲಕಿಯ ಪ್ರಾರ್ಥನೆ ಫಲಿಸಿದೆ. ಕಳೆದು ಹೋಗಿದ್ದ ಮೊಬೈಲ್ ಪತ್ತೆಯಾಗಿದೆ.

ಕೈಸೇರಿತು ಕೋವಿಡ್​​​ನಿಂದ ಮೃತಪಟ್ಟ ತಾಯಿಯ ಮೊಬೈಲ್​

ಮೊಬೈಲ್ ಹುಡುಕಲು ಮಡಿಕೇರಿ ನಗರದ ಪೊಲೀಸರು ಹರಸಾಹಸವನ್ನೇ ಮಾಡಬೇಕಾಗಿತ್ತು. ಒಬ್ಬ ವ್ಯಕ್ತಿಯ ಬಂಧನವೂ ಆಗಿತ್ತು. ಆದ್ರೆ ಇದ್ಯಾವುದೂ ಪ್ರಯೋಜನಕ್ಕೆ ಬಂದಿರಲಿಲ್ಲ. ಇದೀಗ ಆಸ್ಪತ್ರೆಯ ಸ್ಟೋರ್ ರೂಮ್ ಸ್ವಚ್ಛಗೊಳಿಸುವಾಗ ಬಾಲಕಿಯ ತಾಯಿಯ ಮೊಬೈಲ್ ಪತ್ತೆಯಾಗಿದ್ದು, ಸಿಬ್ಬಂದಿ ಪೊಲೀಸ್​ ಠಾಣೆಗೆ ಒಪ್ಪಿಸಿದ್ದರು. ನಂತರ ಬಾಲಕಿಯನ್ನು ಠಾಣೆಗೆ ಕರೆಸಿ, ಮೊಬೈಲ್ ಹಸ್ತಾಂತರಿಸಿದ್ದಾರೆ. ಅಮ್ಮನ ಮೊಬೈಲ್ ಕೈಸೇರಿದ ಖುಷಿಯಲ್ಲಿರುವ ಬಾಲಕಿ ಪೊಲೀಸರಿಗೆ ಧನ್ಯವಾದ ಅರ್ಪಿಸಿದಳು.

ಇದನ್ನೂ ಓದಿ: ಅಮ್ಮನ ನೆನಪು ಮೊಬೈಲ್​​​​​ನ​​​ಲ್ಲಿದೆ ದಯವಿಟ್ಟು ಹುಡುಕಿಕೊಡಿ.. ಜಿಲ್ಲಾಧಿಕಾರಿಗೆ ಪತ್ರ ಬರೆದ ಪುತ್ರಿ

Last Updated : Aug 20, 2021, 1:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.