ಕೊಡಗು: ಮಡಿಕೇರಿಯ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ, ಪಿಪಿಇ ಕಿಟ್ ಧರಿಸಿದ್ದ ಅವರು ಸೋಂಕಿತರಿಗೆ ಮನೋಸ್ಥೈರ್ಯ ತುಂಬಿದ್ದು, ಡ್ರೈ ಫ್ರೂಟ್ಸ್ ವಿತರಿಸಿದರು.
ಮಡಿಕೇರಿಯ ಸಂತ ಮೈಕಲರ ಶಾಲೆಯ ಕೋವಿಡ್ ವ್ಯಾಕ್ಸಿನೇಷನ್ ಸೆಂಟರ್‌ಗೆ ಭೇಟಿ ನೀಡಿ ವ್ಯಾಕ್ಸಿನೇಷನ್‌ಗೆ ಬರುತ್ತಿರುವ ನಾಗರಿಕರು ಹಾಗೂ ಅಲ್ಲಿನ ವೈದ್ಯಕೀಯ ಸಿಬ್ಬಂದಿ ಜೊತೆ ಚರ್ಚೆ ನಡೆಸಿದರು.
ನಂತರ ಮಡಿಕೇರಿ ನಗರದ ಅರಣ್ಯ ಭವನದ ಸಮೀಪದ ರುದ್ರಭೂಮಿಗೂ ಭೇಟಿ ನೀಡಿ ಕೋವಿಡ್‌ನಿಂದ ಮೃತಪಟ್ಟವರ ದೇಹಗಳನ್ನು ದಹನ ಮಾಡಲು ಇರುವ ವ್ಯವಸ್ಥೆಗಳನ್ನು ಪರಿಶೀಲಿಸಿ ಅಂತ್ಯಕ್ರಿಯೆಯಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಸಂಬಂಧಪಟ್ಟವರಿಗೆ ತಿಳಿಸಿದರು.