ಭಾಗಮಂಡಲ (ಕೊಡಗು): ಸಚಿವ ವಿ.ಸೋಮಣ್ಣ ಕುಟುಂಬ ಸಮೇತರಾಗಿ ಭಾಗಮಂಡಲಕ್ಕೆ ಭೇಟಿ ನೀಡಿ ಭಗಂಡೇಶ್ವರನ ದರ್ಶನ ಪಡೆದರು.
ಪತ್ನಿ ಶೈಲಜಾ ಅವರೊಂದಿಗೆ ಭಾಗಮಂಡಲಕ್ಕೆ ಭೇಟಿ ನೀಡಿ, ಭಂಗಡೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ. ನಂತರ ಸೋಮಣ್ಣ ಕುಟುಂಬ ತಲಕಾವೇರಿಗೆ ಭೇಟಿ ನೀಡಿ ತಲಕಾವೇರಿಯ ದರ್ಶನ ಪಡೆದಿದ್ದಾರೆ. ಉಸ್ತುವಾರಿ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಕುಟುಂಬ ಸಮೇತರಾಗಿ ಭಾಗಮಂಡಲ ಹಾಗೂ ತಲಕಾವೇರಿಗೆ ಭೇಟಿ ನೀಡಿದ್ದಾರೆ.
ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದಂತಹ ಸಂದರ್ಭದಲ್ಲಿ ಹಲವು ದಿನಗಳು ಜಿಲ್ಲೆಯಲ್ಲೇ ಮೊಕ್ಕಾಂ ಹೂಡಿದ್ದ ಸಚಿವ ಸೋಮಣ್ಣ ಸಾಕಷ್ಟು ಬಾರಿ ಭಗಂಡೇಶ್ವರ ಹಾಗೂ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ್ದರು.