ಕೊಡಗು : ಲಾಕ್‌ಡೌನ್ ಹಿನ್ನೆಲೆಯಲ್ಲಿ ನೇವಲ್ ಲೆಫ್ಟಿನಲ್ ಆಫೀಸರ್ ವಿರಾಜಪೇಟೆ ಪಟ್ಟಣದ ತಮ್ಮ ಮನೆಯಲ್ಲೇ ಸರಳ ವಿವಾಹವಾಗಿದ್ದಾರೆ.
ಸಂಪ್ರದಾಯದಂತೆ ಮನೆಯಲ್ಲೇ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹ ನಡೆದಿದ್ದು, ಕಾರವಾರದಲ್ಲಿ ಲೆಫ್ಟಿನಲ್ ಆಫೀಸರ್ ಆಗಿರುವ ಕಾಟಕೇರಿಯ ಕುಂಚೆಟ್ಟಿರ ಉತ್ತಪ್ಪ ಅವರ ಪುತ್ರ ಜಯಂತ್, ಪ್ರಜ್ಞಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಜಯಂತ್ ಕೋಕೇರಿ ಗ್ರಾಮದ ಕುಂಬಂಡ ರತ್ನ ಪೊಣ್ಣಯ್ಯ ಪುತ್ರಿ ಪ್ರಜ್ಞಾ ಅವರನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ವರಿಸಿದ್ದಾರೆ. ನಾಪೋಕ್ಲು ಕೊಡವ ಸಮಾಜದಲ್ಲಿ ನಡೆಯಬೇಕಿದ್ದ ಮದುವೆಗೆ ಸುಮಾರು 2 ಸಾವಿರ ಆಮಂತ್ರಣ ಪತ್ರಿಕೆಗಳನ್ನು ಹಂಚಲಾಗಿತ್ತು.