ETV Bharat / state

ಲಾಕ್​​​​​ಡೌನ್ ಎಫೆಕ್ಟ್, ಕೊಡಗು ಪ್ರವಾಸೋದ್ಯಮಕ್ಕೆ 300 ಕೋಟಿ ರೂ.  ನಷ್ಟ..!

ಕೊರೊನಾ ಮಹಾಮಾರಿಯನ್ನ ನಿಯಂತ್ರಿಸಲು ದೇಶವೇ ಲಾಕ್‍ಡೌನ್ ಆಗಿದೆ. ಆದರೆ, ಪ್ರವಾಸೋದ್ಯಮವನ್ನೇ ನಂಬಿ ನಡೆಯುತ್ತಿದ್ದ ಹೋಟೆಲ್​​​​​, ರೆಸಾರ್ಟ್ ಮತ್ತು ಹೋಂ -ಸ್ಟೇ ಉದ್ಯಮ ಸಂಪೂರ್ಣ ನಲುಗಿ ಹೋಗಿದೆ.

louck down effect kodagu turisiom loss of crores
ಲಾಕ್ ಡೌನ್ ಎಫೆಕ್ಟ್, ಕೊಡಗು ಪ್ರವಾಸೋದ್ಯಮಕ್ಕೆ 300 ಕೋಟಿ ನಷ್ಟ..!
author img

By

Published : May 15, 2020, 6:32 PM IST

ಕೊಡಗು: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ದೇಶವೇ ಲಾಕ್‍ಡೌನ್ ಆಗಿದೆ. ಆದರೆ, ಪ್ರವಾಸೋದ್ಯಮವನ್ನೇ ನಂಬಿ ನಡೆಯುತ್ತಿದ್ದ ಹೋಟೆಲ್​​​, ರೆಸಾರ್ಟ್ ಮತ್ತು ಹೋಂ -ಸ್ಟೇ ಉದ್ಯಮ ಸಂಪೂರ್ಣ ನಲುಗಿದೆ.

ಅದರಲ್ಲೂ ಭಾರತದ ಸ್ಕಾಟ್‌ಲ್ಯಾಂಡ್, ದಕ್ಷಿಣ ಭಾರತದ ಕಾಶ್ಮೀರ ಎಂದೆಲ್ಲ ಕರೆಸಿಕೊಳ್ಳುತ್ತಿದ್ದ ಕೊಡಗು ಸಂಪೂರ್ಣ ಪ್ರವಾಸೋದ್ಯಮವನ್ನೇ ನಂಬಿ ನಡೆಯುತ್ತಿದ್ದ ಜಿಲ್ಲೆ. ಆದರೆ, ಲಾಕ್‍ಡೌನ್ ಪರಿಣಾಮವಾಗಿ ಪ್ರವಾಸೋದ್ಯಮ, ಹೋಟೆಲ್​​​​ ರೆಸಾರ್ಟ್ ರೆಸ್ಟೋರೆಂಟ್ ಗಳು ಬಂದ್ ಆಗಿವೆ. ಕೊಡಗು ಜಿಲ್ಲೆಯಲ್ಲಿ ಬರೋಬ್ಬರಿ 300 ಕೋಟಿ ರೂಪಾಯಿಗೂ ಹೆಚ್ಚುನಷ್ಟವಾಗಿದೆ.

ಅಲ್ಲದೇ ಇದನ್ನೇ ನಂಬಿದ್ದ 30 ಸಾವಿರಕ್ಕೂ ಹೆಚ್ಚು ಕುಟುಂಬಗಳು ಅತಂತ್ರ ಸ್ಥಿತಿ ತಲುಪಿ ತೀವ್ರ ಸಂಕಷ್ಟ ಎದುರಿಸುತ್ತಿವೆ. ಹೋಟೆಲ್​​​ ಮತ್ತು ಹೋಂ ಸ್ಟೇಗಳನ್ನು ಪುನಃ ಪ್ರಾರಂಭಿಸುವುದಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ಆದರೆ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ದುಡಿಮೆಗಿಂತ ಜನರ ಆರೋಗ್ಯ ಮುಖ್ಯ. ಹೀಗಾಗಿ ಸದ್ಯಕ್ಕೆ ಯಾವುದೇ ಕಾರಣಕ್ಕೂ ಹೋಟೆಲ್​​​​, ರೆಸಾರ್ಟ್ ಮತ್ತು ಹೋಂ ಸ್ಟೇಗಳನ್ನು ತೆರೆಯಲು ಬಿಡುವುದಿಲ್ಲ. ಅದಕ್ಕೆ ಮಾಲೀಕರು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.