ಕೊಡಗು: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಗರದ ಚಾಮುಂಡೇಶ್ವರಿ ನಗರ ಬಡಾವಣೆಯ ಮನೆಯೊಂದರ ಕೆಳಗೆ ಗುಡ್ಡ ಕುಸಿದಿದ್ದು ನಿವಾಸಿಗಳಲ್ಲಿ ಆತಂಕ ಎದುರಾಗಿದೆ.
ಚಾಮುಂಡೇಶ್ವರಿ ನಗರದ ನಿವಾಸಿಯಾದ ಶ್ಯಾಮ್ ಎಂಬುವರ ಮನೆ ಕೆಳಗೆ ಭಾರಿ ಗಾತ್ರದ ಗುಡ್ಡ ಕುಸಿಯುತ್ತಿದೆ. ಮನೆಯವರು ಮನೆ ಹಿಂದೆ ಆಕಸ್ಮಿಕವಾಗಿ ಹೋದಂತಹ ಸಂದರ್ಭದಲ್ಲಿ ಗುಡ್ಡ ಕುಸಿದ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಮನೆಯವರು ಜಿಲ್ಲಾಡಳಿತದ ಸಹಾಯವಾಣಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಹೇಳಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಸಿದ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಂತಿಮಾ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಹಾಗೂ ಗುಡ್ಡದ ಕೆಳಗೆ ಇರುವ ಇಬ್ಬರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತಿಳಿಸಿದರು.
ಮೂರು ದಿನಗಳಿಂದ ಸತತವಾಗಿ ಮಳೆ ಆಗುತ್ತಿರುವುದರಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಗುಡ್ಡ ಕುಸಿಯುತ್ತಿದೆ. ನಿನ್ನೆಯಷ್ಟೇ ಉಪವಿಭಾಗಾಧಿಕಾರಿ ಅವರು ಸ್ಥಳಕ್ಕೆ ಬಂದು ಹೋಗಿದ್ದರು. ಸಮಸ್ಯೆಗಳನ್ನು ಹೇಳಿಕೊಂಡಿದ್ದೆವು. ಮನೆಯಲ್ಲಿ ಒಟ್ಟು 8 ಜನರಿದ್ದು ಇವಾಗ ಬರೆ ಕುಸಿಯುತ್ತಿದೆ. ಈ ರಾತ್ರಿಯಲ್ಲಿ ನಾವು ಎಲ್ಲಿಗೆ ಹೋಗುವುದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೆಯೇ ನೀವು ಕೂಡಲೇ ಸ್ಥಳ ಖಾಲಿ ಮಾಡಬೇಕು ಅಧಿಕಾರಿಗಳು ಕಿವಿಮಾತು ಹೇಳಿ ಮನವೊಲಿಸಿದ್ದಾರೆ.