ETV Bharat / state

ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ವರ್ಣರಂಜಿತ ತೆರೆ - ETV Bharat kannada News

ಕೊಡಗಿನಲ್ಲಿ 9 ದಿನಗಳ ಕಾಲ ನಡೆದ ಕೌಟುಂಬಿಕ ಹಾಕಿ ಉತ್ಸವದಲ್ಲಿ ಕುಪ್ಪಂಡ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿತು.

Kuppanda team champion
ಕುಪ್ಪಂಡ ತಂಡ ಚಾಂಪಿಯನ್​
author img

By

Published : Apr 10, 2023, 8:26 PM IST

ಕೊಡವ ಕೌಟುಂಬಿಕ ಹಾಕಿ ಉತ್ಸವ

ಕೊಡಗು : ಪ್ರತಿ ವರ್ಷ ನಡೆಯುವ ಕೊಡವ ಕುಟುಂಬಗಳ ನಡುವಿನ ಹಾಕಿ ಉತ್ಸವಕ್ಕೆ ಇಂದು ಅದ್ದೂರಿ ತೆರೆ ಬಿತ್ತು. ಕೊನೆಯ ದಿನವಾದ ಇಂದು ಕುಪ್ಪಂಡ ತಂಡ ತನ್ನ ಎದುರಾಳಿ ಕುಲೇಟಿರ ತಂಡವನ್ನು ಮಣಿಸಿ ಚಾಂಪಿಯನ್ ಆಯಿತು. ಈ ಮೂಲಕ ಒಂಬತ್ತು ದಿನಗಳಿಂದ ಗೆಲುವು ಯಾರಿಗೆ ಎಂಬ ಪ್ರೇಕ್ಷಕರ ಕುತೂಹಲ ತಣಿದಿದೆ. ಕೊಡಗಿನ ಸಾಂಪ್ರದಾಯಿಕ ಉಡುಪು, ನೃತ್ಯಗಳು ಪಂದ್ಯಾಟಕ್ಕೆ ಮೆರುಗು ನೀಡಿದವು.

ನಾಪೋಕ್ಲುವಿನ ಜನರಲ್​ ತಿಮ್ಮಯ್ಯ ಮೈದಾನದಲ್ಲಿ ನಡೆದ 23ನೇ ವರ್ಷದ ಹಾಕಿ ಉತ್ಸವದಲ್ಲಿ 336 ಕುಟುಂಬಗಳು ಭಾಗವಹಿಸಿದ್ದವು. ವಿಜೇತ ಕುಟುಂಬಗಳಿಗೆ ಪ್ರಥಮ ಬಹುಮಾನ ₹3 ಲಕ್ಷ, ದ್ವಿತೀಯ ₹2 ಲಕ್ಷ, ತೃತೀಯ ₹1 ಲಕ್ಷ, ನಾಲ್ಕು ಮತ್ತು ಐದನೇ ಬಹುಮಾನ ತಲಾ ₹50 ಸಾವಿರ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು. ಭೂ ಕುಸಿತ ಹಾಗು ಕೋವಿಡ್‌ನಿಂದಾಗಿ 2018ರ ಬಳಿಕ ಪಂದ್ಯಾವಳಿ ನಡೆದಿರಲಿಲ್ಲ. ನಾಲ್ಕು ವರ್ಷಗಳ ನಂತರ ನಡೆದ ಹಾಕಿ ಉತ್ಸವಕ್ಕೆ ಬೆಂಗಳೂರು, ಮಂಗಳೂರು ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ಕ್ರೀಡಾಪಟುಗಳು ಬಂದಿದ್ದು ಪ್ರೇಕ್ಷಕರು ಉತ್ಸಾಹದಿಂದ ಭಾಗವಹಿಸಿದ್ದರು.

ಕೌಟುಂಬಿಕ ಹಾಕಿ ಉತ್ಸವ ಶುರುವಾಗಿದ್ದೇಗೆ?: ಕೊಡವ ಸಮುದಾಯದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆ ಗಮನದಲ್ಲಿಟ್ಟುಕೊಂಡು, ಕೊಡಗಿನ ಕುಟುಂಬಗಳನ್ನು ಒಟ್ಟುಗೂಡಿಸುವ ಸಲುವಾಗಿ ಹಾಲಿ ಅಧ್ಯಕ್ಷ ಬೋಪಣ್ಣ ಅವರ ತಂದೆ ಪಾಂಡಂಡ ಕುಟ್ಟಪ್ಪ ಅವರು 1997ರಲ್ಲಿ ಮೊದಲ ಕೊಡವ ಹಾಕಿ ಪಂದ್ಯಾವಳಿಯನ್ನು ಕರಡ ಗ್ರಾಮದಲ್ಲಿ ಆಯೋಜಿಸಿದ್ದರು. ಇದನ್ನು ಪಾಂಡಂಡ ಹಾಕಿ ಕಪ್ ಎಂದು ಕರೆಯಲಾಗುತ್ತಿತ್ತು. ಪಂದ್ಯಾವಳಿಗಾಗಿ 2 ಲಕ್ಷ ರೂ.ಗಳ ನಿಧಿಯನ್ನು ಸಮುದಾಯದಿಂದ ಸಂಗ್ರಹಿಸಲಾಗಿತ್ತು. ಒಟ್ಟು 60 ಕುಟುಂಬಗಳು ಕ್ರೀಡೆಯನ್ನು ಆರಂಭಿಸಿದ್ದು, ಹೆಣ್ಣು ಮಕ್ಕಳಿಗೂ ಸಮಾನ ಅವಕಾಶ ನೀಡಲಾಗುತ್ತಿತ್ತು.

ಅಲ್ಲಿಂದ 1997ರಿಂದ 2018ರವರೆಗೆ ಸತತ 22 ವರ್ಷಗಳ ಕಾಲ ಹಾಕಿಯನ್ನು ಆಯೋಜಿಸಲಾಗಿದೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿಯೂ ಇದು ಸ್ಥಾನ ಪಡೆದುಕೊಂಡಿದೆ. ಹಾಕಿ ಕ್ರೀಡೆಯನ್ನು ಪ್ರೋತ್ಸಾಹಿಸುವುದಷ್ಟೇ ಈ ಉತ್ಸವದ ಉದ್ದೇಶವಲ್ಲ. ಮುಖ್ಯವಾಗಿ, ಕೊಡವರ ಕುಟುಂಬಗಳ ನಡುವೆ ಬಾಂಧವ್ಯ ಬೆಸೆಯುವುದು ಇದರ ಹಿಂದಿನ ಉದ್ದೇಶ. ಜಗತ್ತು ಬೆಳೆದಂತೆ ಕೊಡವರ ಹಲವು ಕುಟುಂಬಗಳು ವಿವಿಧೆಡೆ ಚದುರಿಹೋದವು. ಇವುಗಳ ನಡುವೆ ಸಂಪರ್ಕ, ಸಮನ್ವಯತೆ ತರುವುದು ಹಾಗೂ ಒಗ್ಗಟ್ಟು ಮೂಡಿಸುವುದು ಇಲ್ಲಿನ ಉದ್ದೇಶವಾಗಿದೆ.

ಜೀವನ ಸಂಗಾತಿ ಹುಡುಕುವ ವೇದಿಕೆ: ಉತ್ಸವಗಳ ಮತ್ತೊಂದು ಮಹತ್ವಪೂರ್ಣ ಪ್ರಯೋಜನವೆಂದರೆ ವೈವಾಹಿಕ ಸಂಬಂಧ. ವಿವಿಧ ರಂಗಗಳಲ್ಲಿ ಸಾಧನೆ ಮಾಡುತ್ತ ಕೊಡವರ ಕುಟುಂಬಗಳು ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ವಲಸೆ ಹೋಗಿವೆ. ಹಾಕಿ ಉತ್ಸವವನ್ನು ವೀಕ್ಷಿಸುವ ನೆಪದಲ್ಲಿ ಈ ಕುಟುಂಬಗಳು ಮರಳಿ ಕೊಡಗಿಗೆ ಬರುತ್ತವೆ. ಹೀಗೆ ಬರುವಾಗ ಕುಟುಂಬದ ಯಜಮಾನ ತನ್ನ ಜೊತೆ ಇಡೀ ಕುಟುಂಬದ ಎಲ್ಲ ಸದಸ್ಯರನ್ನು ಕರೆದುಕೊಂಡು ಬರುತ್ತಾರೆ. ಮದುವೆ ವಯಸ್ಸಿಗೆ ಬಂದಂತಹ ಈ ಕುಟುಂಬಗಳ ಯುವಕ, ಯುವತಿಯರಿಗೆ ತಮ್ಮ ಜೀವನ ಸಂಗಾತಿಯನ್ನು ಹುಡುಕಿಕೊಳ್ಳಲು ಸಹ ಇದು ವೇದಿಕೆಯಾಗುತ್ತದೆ.

ಇದನ್ನೂ ಓದಿ : ನಾಳೆಯಿಂದ ಕೊಡವ ಕೌಟುಂಬಿಕ ಹಾಕಿ ಉತ್ಸವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.