ETV Bharat / state

ಕಳ್ಳರನ್ನು ಸದೆಬಡಿದ ಕೊಡಗು ಪೊಲೀಸರು.. ವರ್ಷಗಳ ಬಳಿಕ ಮಾಲೀಕರ ಕೈ ಸೇರಿದ ಚಿನ್ನಾಭರಣ - kodagu theft cases

ಕೊಡಗು ಜಿಲ್ಲೆಯ ಸೋಮವಾರಪೇಟೆ, ಗೋಣಿಕೊಪ್ಪಲು, ವೀರಾಜಪೇಟೆ, ಮಡಿಕೇರಿ ಸೇರಿದಂತೆ ವಿವಿಧೆಡೆ ನಡೆದಿದ್ದ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಕೊಡಗು ಪೊಲೀಸರು, ಚಿನ್ನಾಭರಣಗಳನ್ನು ವಶಕ್ಕೆ ಪಡೆದು ಸ್ವತ್ತುಗಳನ್ನು ಮಾಲೀಕರಿಗೆ ತಲುಪಿಸಿದ್ದಾರೆ.

kodagu police department clears theft cases
ಕಳ್ಳತನ ಪ್ರಕರಣಗಳನ್ನು ಭೇದಿಸಿದ ಕೊಡಗು ಪೊಲೀಸರು
author img

By

Published : Nov 2, 2021, 6:44 AM IST

Updated : Nov 2, 2021, 7:39 AM IST

ಮಡಿಕೇರಿ: ಚಿನ್ನಾಭರಣ ಸೇರಿದಂತೆ ಕೆಲ ವಸ್ತುಗಳನ್ನು ಕಳೆದುಕೊಂಡು ಕಂಗಾಲಾಗಿದ್ದ ಮಡಿಕೇರಿ ಮಂದಿಯ ವಸ್ತುಗಳು ಇದೀಗ ಅವರ ಕೈ ಸೇರಿವೆ. ಸುಮಾರು ಒಂದು ವರ್ಷದ ನಂತರ ಕಳವು ಆಗಿದ್ದ ಚಿನ್ನಾಭರಣಗಳು ಮಾಲೀಕರ ಕೈ ಸೇರಿವೆ. ಕೊಡಗು ಪೊಲೀಸರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು, ವಾಹನಗಳನ್ನು ವಾರಸುದಾರರಿಗೆ ಹಸ್ತಾಂತರ ಮಾಡಿದ್ದಾರೆ.

ಮಡಿಕೇರಿಯಲ್ಲಿರುವ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸೋಮವಾರ ಪುರಾತನ ವಿಗ್ರಹಗಳು, ವಾಹನಗಳು, ಚಿನ್ನಾಭರಣಗಳನ್ನು ಮಾಲೀಕರಿಗೆ ತಲುಪಿಸುವ ಕೆಲಸವಾಗಿದೆ. ವರ್ಷದ ಹಿಂದೆ ಕೊಡಗು ಜಿಲ್ಲೆಯ ಸೋಮವಾರಪೇಟೆ, ಗೋಣಿಕೊಪ್ಪಲು, ವೀರಾಜಪೇಟೆ, ಮಡಿಕೇರಿ ಸೇರಿದಂತೆ ವಿವಿಧೆಡೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳು, ಬೆಲೆ ಬಾಳುವ ವಿಗ್ರಹಗಳು, ವಾಹನಗಳು ಕಳ್ಳತನವಾಗಿದ್ದವು. ಎಲ್ಲ ಪ್ರಕರಣಗಳನ್ನು ಭೇದಿಸಿರುವ ಕೊಡಗು ಪೊಲೀಸರು ಕಳ್ಳತನವಾಗಿದ್ದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದರು.

ಕಳ್ಳತನ ಪ್ರಕರಣಗಳನ್ನು ಭೇದಿಸಿದ ಕೊಡಗು ಪೊಲೀಸರು

ನಿನ್ನೆ ಆ ಎಲ್ಲ ವಸ್ತುಗಳನ್ನು ಸಂಬಂಧಪಟ್ಟ ಮಾಲೀಕರಿಗೆ ಹಸ್ತಾಂತರ ಮಾಡಿದ್ದಾರೆ. ಒಂದೊಂದು ಪ್ರಕರಣಗಳು ಬಹಳಾನೇ ಚಾಲೆಂಜಿಂಗ್​​ ಆಗಿದ್ದವು. ಆದರೆ ನಮ್ಮ ಸಿಬ್ಬಂದಿ ಎಲ್ಲ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಕೊಡಗು ಎಸ್ಪಿ ಕ್ಷಮಾ ಮಿಶ್ರ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯೋತ್ಸವ ಸಡಗರ: ವಿದ್ಯುತ್​ ದೀಪಾಲಂಕಾರದಿಂದ ಕಂಗೊಳಸಿದ ಶಕ್ತಿಸೌಧ

31,67,000 ರೂ. ಬೆಲೆಬಾಳುವ ಚಿನ್ನಾಭರಣ,1,19,500 ನಗದು, 3 ದ್ವಿಚಕ್ರ ವಾಹನ, 1 ಕಾರು ಸೇರಿದಂತೆ ಒಟ್ಟು 42,46,500 ರೂ. ಮೌಲ್ಯದ ವಸ್ತುಗಳನ್ನು ಹಸ್ತಾಂತರ ಮಾಡಲಾಗಿದೆ. ಇದರಲ್ಲಿ ಸುಮಾರು 16 ಲಕ್ಷ ಮೌಲ್ಯದ ಹಳೆಯ ವಿಗ್ರಹಗಳು ಸೇರಿವೆ. ಒಂದು ವರ್ಷದ ಅವಧಿಯಲ್ಲಿ ಕಳವಾಗಿದ್ದ ನಮ್ಮ ವಸ್ತುಗಳನ್ನು ಪೊಲೀಸರು ಕೊಡಿಸಿರುವ ಕಾರಣ ಅವರ ಕೆಲಸಕ್ಕೆ, ಸಹಕಾರಕ್ಕೆ ಮಾಲೀಕರು ಕೃತಜ್ಞತೆ ಸಲ್ಲಿಸಿದ್ದಾರೆ.

Last Updated : Nov 2, 2021, 7:39 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.