ETV Bharat / state

ಬೈಯುತ್ತಾ, ಭಿಕ್ಷೆ ಬೇಡುತ್ತಾ, ನೃತ್ಯ ಮಾಡಿ ಹರಕೆ ತೀರಿಸುವ ಭಕ್ತರು.. ಜೇನು ಕುರುಬರಿಂದ ವಿಶೇಷ ಆಚರಣೆ - ಸಣ್ಣವಂಡತಕ್ಕರು ಹಾಗೂ ದೇವತಕ್ಕರು

ಕೊಡಗು ಜಿಲ್ಲೆಯ ಗೋಣಿಕೊಪ್ಪದ ತಿತಿಮತಿ ಬಳಿಯ ದೇವರಪೂರದಲ್ಲಿ ಕುಂಡೆ ಹಬ್ಬದ ಸಂಭ್ರಮ ನಡೆಯುತ್ತದೆ. ಈ ವೇಳೆ ಇಲ್ಲಿನ ಮೂಲ ನಿವಾಸಿಗಳಾದ ಜೇನುಕುರುಬರು ದೇವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ನೃತ್ಯ ಮಾಡಿ ಹರಕೆ ತೀರಿಸುತ್ತಾರೆ.

ದೇವರಪೂರದಲ್ಲಿ ಕುಂಡೆ ಹಬ್ಬದ ಸಂಭ್ರಮ
ದೇವರಪೂರದಲ್ಲಿ ಕುಂಡೆ ಹಬ್ಬದ ಸಂಭ್ರಮ
author img

By

Published : May 26, 2023, 4:19 PM IST

ದೇವರಪೂರದಲ್ಲಿ ಕುಂಡೆ ಹಬ್ಬದ ಸಂಭ್ರಮ

ಕೊಡಗು: ದೇವರಿಗೆ ಭಕ್ತಿಯಿಂದ ಬೇಡಿಕೊಂಡ್ರೆ ವರ ಕೊಡುತ್ತಾರೆ ಎಂಬುದು ಪ್ರತೀತಿ. ಆದರೆ ದೇವರಿಗೆ ಕೆಟ್ಟ ಕೆಟ್ಟದಾಗಿ ಬೈಗುಳ ಸುರಿಮಳೆ ಸುರಿಸೋದು ಇಲ್ಲಿನ ಆಚರಣೆ. ಹುಡುಗಿಯರ ಉಡುಪು ತೊಟ್ಟ ಹುಡುಗರ ದಂಡು ದೇವರಿಗೆ ಮತ್ತು ಅವಾಚ್ಯ ಶಬ್ದಗಳ ಸುರಿಮಳೆ ಸುರಿಸುತ್ತ ರೋಡಿನಲ್ಲಿ ನೃತ್ಯಮಾಡುತ್ತ ಬಿಕ್ಷೆಬೇಡಿ ದೇವರ ಪೂಜೆ ಮಾಡುವ ವಿಶಿಷ್ಟ ಕುಂಡೆ ಹಬ್ಬವನ್ನು ಕೊಡಗಿನಲ್ಲಿ ಆಚರಣೆ ಮಾಡಲಾಗುತ್ತಿದೆ. ಭಕ್ತರು ತಮ್ಮ ಹರಕೆಗಳನ್ನು ತೀರಿಸಲು ಈ ತರ ಹಬ್ಬವನ್ನು ಆಚರಣೆ ಮಾಡುತ್ತಾರೆ.

ಕೊಡಗು ಜಿಲ್ಲೆಯ ಗೋಣಿಕೊಪ್ಪದ ತಿತಿಮತಿ ಬಳಿಯ ದೇವರಪೂರದಲ್ಲಿ ಭದ್ರಕಾಳಿ ಕುಂಡೆ ಹಬ್ಬದ ಸಂಭ್ರಮ ನಡೆಯುತ್ತದೆ. ಈ ಕುಂಡೆ ಹಬ್ಬವನ್ನು ಇಲ್ಲಿನ ಮೂಲ ನಿವಾಸಿಗಳಾದ ಜೇನು ಕುರುಬರ ಜನಾಂಗದವರು ವರ್ಷಕ್ಕೊಮ್ಮೆ ಈ ಹಬ್ಬವನ್ನು ಆಚರಿಸುತ್ತಾರೆ.

ಅವಾಚ್ಯ ಶಬ್ದಗಳಿಂದ ಬೈಯ್ಯುತ್ತ ನೃತ್ಯ: ಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ಕುಂಡೆ ಹಬ್ಬವನ್ನು ಸಾವಿರಾರು ಭಕ್ತರು ಸಂಪ್ರದಾಯದಂತೆ ನಾನಾ ವೇಷ ಭೂಷಣಗಳನ್ನು ಧರಿಸಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತ ನೃತ್ಯ ಮಾಡುತ್ತಾರೆ. ನಂತರ ಭಕ್ತಿಭಾವದಿಂದ ದೇವರಲ್ಲಿ ಕ್ಷಮೆ ಕೇಳುತ್ತಾರೆ.

ಅನಾದಿಕಾಲದಿಂದಲೂ ಆಚರಣೆ ಮಾಡುತ್ತಿರುವ ಈ ಪದ್ಧತಿಯನ್ನು ಇಂದೂ ಅಷ್ಟೇ ಶ್ರದ್ಧೆ ಭಕ್ತಿಯಿಂದ ಮುಂದುವರಿಸಿಕೊಂಡು ಬರಲಾಗುತ್ತಿದೆ. ಈ ಹಬ್ಬವನ್ನು 2 ದಿನಗಳ ಕಾಲ ಆಚರಣೆ ಮಾಡುತ್ತಾರೆ. ಎಲ್ಲ ಆದಿವಾಸಿಗಳು ಊರುಗಳಲ್ಲಿ, ರೋಡಿನಲ್ಲಿ ಹೋಗುವ ವಾಹನಗಳನ್ನು ತಡೆದು ಹಣ ಕೇಳುತ್ತಾರೆ. ಕೊಡದಿದ್ದರೆ ಜನರಿಗೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾರೆ. ಅಂಗಡಿ ಮುಂಗಟ್ಟುಗಳಲ್ಲಿ ಜನರ ಹತ್ತಿರ ಬಿಕ್ಷೆ ಬೇಡುತ್ತಾರೆ. ಎರಡು ದಿನಗಳು ಸಿಕ್ಕ ಸಿಕ್ಕ ಜನರಿಗೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತ ಕುಂಡೆ ಹಾಡುಗಳನ್ನು ಹಾಡುತ್ತ ಸಂಭ್ರಮಿಸುತ್ತಾರೆ.

ದೇವಸ್ಥಾನದ ಸುತ್ತ ವಿವಿಧ ವೇಷಗಳಲ್ಲಿ ನೃತ್ಯ: ನಂತರ ಎರಡನೇ ದಿನ ಬಿಕ್ಷೆ ಬೇಡಿದ ಹಣವನ್ನು ದೇವರಪೂರದಲ್ಲಿರುವ ಭದ್ರಕಾಳಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಾರೆ. ನಾನಾಕಡೆಯಿಂದ ಬಂದಿರುವ ಎಲ್ಲ ಆದಿವಾಸಿಗಳು ಮಧ್ಯಾಹ್ನದ ವೇಳೆ ದೇವಸ್ಥಾನದಲ್ಲಿ ಸೇರುತ್ತಾರೆ. ಚಿಕ್ಕ ಮಕ್ಕಳು ವಯಸ್ಕರು ಎಲ್ಲರೂ ಸೇರಿ ದೇವಸ್ಥಾನದ ಸುತ್ತ ವಿವಿಧ ವೇಷಗಳಲ್ಲಿ ನೃತ್ಯಮಾಡಿ ಸಂಭ್ರಮಿಸುತ್ತಾರೆ.

ಎಲ್ಲರೂ ಒಟ್ಟಿಗೆ ಸೇರಿ ನೃತ್ಯಮಾಡುವುದು ಇಲ್ಲಿನ ಪದ್ದತಿ: ವೇಷಧಾರಿಗಳು ಕುಣಿಯುತ್ತಾ ಸಂಭ್ರಮಿಸುತ್ತಾ ದೇವರಿಗೆ ಕೆಟ್ಟ ಕೆಟ್ಟದಾಗಿ ಬೈದುಕೊಂಡು ಹರಕೆ ತೀರಿಸುವುದು ಇಲ್ಲಿನ ಪದ್ಧತಿಯಾಗಿದೆ. ಇದು ಈ ದೇವರಿಗೆ ಇಷ್ಟವಾದಂತಹ ಒಂದು ಪದ್ಧತಿಯಾಗಿದೆ. ದೇವರಿಗೆ ಹರಕೆ ಹೊತ್ತುಕೊಂಡ್ರೆ ಎಲ್ಲವೂ ಒಳ್ಳೆಯದಾಗುತ್ತೆ ಅನ್ನೋ ನಂಬಿಕೆ ಈ ಆದಿವಾಸಿ ಜನರಿಗಿದೆ. ಸುತ್ತಮುತ್ತಲಿನ ಗ್ರಾಮಸ್ಥರಿಗೆ ಈ ದೇವರು ಕೇಳಿದ ವರಗಳನ್ನು ನೀಡುತ್ತಾನೆ, ಇಷ್ಠಾರ್ಥಗಳನ್ನು ನೆರವೇರಿಸುತ್ತಾನೆ ಎಂಬುವುದು ಭಕ್ತಾಧಿಗಳ ನಂಬಿಕೆಯಾಗಿದೆ. ಮಕ್ಕಳು ಯುವಕರು, ಯುವತಿಯರು, ಎಲ್ಲರೂ ಒಟ್ಟಿಗೆ ಸೇರಿ ನೃತ್ಯಮಾಡುವುದು ಇಲ್ಲಿನ ಪದ್ದತಿಯಾಗಿದೆ.

ಮನೆಯಲ್ಲಿ ಬಳಸುವ ಡಬ್ಬ, ಪಾತ್ರೆಗಳು, ವಾಟರ್​ ಕ್ಯಾನ್‍ಗಳು, ದೋಣೆ ಕಾಡು, ಸೋರೆಕಾಯಿ ಬುರುಡೆ, ಪ್ಲಾಸ್ಟಿಕ್​​ ಬಿಂದಿಗೆ ಇತ್ಯಾದಿಗಳೊಂದಿಗೆ ಸಂಗೀತ ಹಾಡುತ್ತ ಮ್ಯೂಸಿಕ್​ ಬಾರಿಸುತ್ತ ಹೆಂಗಸರು ಧರಿಸುವ ಸೀರೆ, ಚೂಡಿದಾರ್ ಟೀ ಶರ್ಟ್, ಜೀನ್ಸ್, ಮಿನಿ ಮಿಡ್ಡಿಗಳನ್ನು ಧರಿಸಿ ಆಕರ್ಷಕವಾಗಿ ಅಲಂಕರಿಸಿ ನೃತ್ಯಮಾಡುತ್ತ ಹಣ ಪಡೆಯುತ್ತಿದ್ದರು.

ಹರಕೆ ಕಟ್ಟಿಕೊಳ್ಳುವ ಮೂಲ ನಿವಾಸಿಗಳಾದ ಜೇನು ಕುರುಬರು: ಈ ಬಗ್ಗೆ ಭಕ್ತ ವಿನು ಎಂಬುವವರು ಮಾತನಾಡಿದ್ದು, ಈ ಹಬ್ಬ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇಲ್ಲಿನ ಮೂಲ ನಿವಾಸಿಗಳಾದ ಜೇನು ಕುರುಬರು ಹರಕೆ ಕಟ್ಟಿಕೊಂಡಿರುತ್ತಾರೆ. ಹೀಗಾಗಿ ಈ ಹಬ್ಬವನ್ನು ಸಾಮಾನ್ಯವಾಗಿ ಮೇ ತಿಂಗಳ ಮೂರನೇ ಬುಧವಾರ ಅಥವಾ ಗುರುವಾರದಂದು ನಡೆಯುತ್ತದೆ. ಈ ಹಬ್ಬವನ್ನು ಸಣ್ಣವಂಡತಕ್ಕರು ಹಾಗೂ ದೇವತಕ್ಕರು ಹಾಗೂ ಊರಿನವರು, ಕಳಿಚಂಡ ಫ್ಯಾಮಿಲಿ, ಮನೆಪಂಡ ಫ್ಯಾಮಿಲಿ, ಕಾಡಿಯಮೇಡ ಫ್ಯಾಮಿಲಿಯವರು ಸೇರಿ ಆಚರಿಸುತ್ತಾರೆ ಎಂದರು.

ಇದನ್ನೂ ಓದಿ: ಕುಂಡೆ ಹಬ್ಬದಲ್ಲಿ ಬೈಗುಳದೊಂದಿಗೆ ಕುಣಿದು ಕುಪ್ಪಳಿಸಿದ ಗಿರಿಜನರು: ಬೈಗುಳವೇ ಇಲ್ಲಿನ ವಿಶೇಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.