ಕೊಡಗು: ಕೊಡಗಿನ ಏಕೈಕ ಅಂತಾರಾಷ್ಟ್ರೀಯ ಮಹಿಳಾ ಹಾಕಿ ಅಂಪೈರ್ ಆಗಿದ್ದ ಹಾಗೂ ಅತ್ಯುತ್ತಮ ಹಾಕಿಪಟು ಅನುಪಮ ಅವರು ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ.
![ಅಂತಾರಾಷ್ಟ್ರೀಯ ಹಾಕಿ ಅಂಪೈರ್ ಕೊರೊನಾಗೆ ಬಲಿ](https://etvbharatimages.akamaized.net/etvbharat/prod-images/_19042021143022_1904f_1618822822_997.jpg)
ಕಳೆದ ಒಂದು ವಾರದಿಂದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು, ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದ್ದಾರೆ.
ಇವರು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ದಿ.ಪುಚ್ಚಿಮಂಡ ಶಿವಪ್ಪ ಅವರ ಪುತ್ರಿಯಾಗಿದ್ದಾರೆ. ಪಕ್ಕದ ನೆಲಜಿ ಗ್ರಾಮಕ್ಕೆ ವಿವಾಹವಾಗಿ ಬೆಂಗಳೂರನಲ್ಲಿ ವಾಸವಿದ್ದರು.