ETV Bharat / state

ವಿರಾಜಪೇಟೆಯಲ್ಲಿ ಮಂಗನ ಬೇಟೆಯಾಡಿದ ಮೂವರ ಬಂಧನ - Virajapete latest news

ಮಂಗನನ್ನು ಬೇಟೆಯಾಡಿದ ಮೂವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಕೋವಿ ಹಾಗೂ ಮಾಂಸವನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ..

Hunting of monkey
Hunting of monkey
author img

By

Published : Jul 5, 2020, 6:58 PM IST

ವಿರಾಜಪೇಟೆ/ಕೊಡಗು : ವಿರಾಜಪೇಟೆ ವಲಯದ ತೋರ, ಕೆದ ಮುಳ್ಳೂರು ಗ್ರಾಮದಲ್ಲಿ ಮಂಗನನ್ನು ಬೇಟೆಯಾಡಿದ ಮೂವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿ ಕೋವಿ ಹಾಗೂ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಜೀವನ್ ಕರುಂಬಯ್ಯ ಹಾಗೂ ಉಮೇಶ್ ಬಂಧಿತ ಆರೋಪಿಗಳು. ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಖಚಿತ ಸುಳಿವಿನ ಮೇರೆಗೆ ಅಧಿಕಾರಿಗಳು, ಉಮೇಶ್ ಎಂಬಾತನ ಲೈನ್ ಮನೆಯನ್ನು ಶೋಧಿಸಿದಾಗ ಅಂದಾಜು ಮೂರು ಕೆಜಿಗೂ ಅಧಿಕ ಮಂಗನ ಮಾಂಸ ಲಭಿಸಿದ್ದು, ಕೃತ್ಯಕ್ಕೆ ಬಳಸಿದ್ದ ಕೋವಿ ಹಾಗೂ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ರೋಹಿಣಿ ದಿಲೀಪ್‌ಕುಮಾರ್, ಡಿಆರ್‌ಎಫ್ಒ ಸಂಜಿತ್ ಸೋಮಯ್ಯ, ಅರಣ್ಯ ರಕ್ಷಕರಾದ ಪ್ರಶಾಂತ್‌ಕುಮಾರ್, ನಾಗರಾಜ್ ಹಾಗೂ ಸಿಬ್ಬಂದಿಯಾಗಿರುವ ಮಧು, ವಿಕಾಸ್ ಲತೇಶ್, ಪ್ರಕಾಶ್ ಪೊನ್ನಪ್ಪ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.