ETV Bharat / state

ಕೊಡಗು ಹನಿಟ್ರ್ಯಾಪ್​ ಪ್ರಕರಣ: ಆರು ಮಂದಿ ಅರೆಸ್ಟ್, ಕಿಂಗ್ ಪಿನ್​ಗಾಗಿ ಹುಡುಕಾಟ

ಹನಿಟ್ರ್ಯಾಪ್ ಜಾಲದ ಆರು ಮಂದಿಯನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು ಪ್ರಕರಣದ ಕಿಂಗ್ ಪಿನ್ ಕರೀಂ ಹಾಗೂ ಇನ್ನಿತರರ ಬಲೆಗೆ ಪೊಲೀಸರು ಜಾಲ ಬೀಸಿದ್ದಾರೆ.

author img

By

Published : Sep 27, 2019, 6:09 PM IST

Updated : Sep 27, 2019, 9:56 PM IST

ಕೊಡಗು ಹನಿಟ್ರ್ಯಾಪ್​ ಪ್ರಕರಣ: ಆರು ಮಂದಿ ಅರೆಸ್ಟ್

ಕೊಡಗು: ಲಕ್ಷಾಂತರ ರೂಪಾಯಿ ಹಣ ದೋಚಿದ್ದ ಹನಿಟ್ರ್ಯಾಪ್ ಗ್ಯಾಂಗ್​ವೊಂದರ ಆರು ಮಂದಿಯನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸ್ ಕಾರ್ಯಾಚರಣೆ ತಂಡ ಯಶಸ್ವಿಯಾಗಿದೆ.

ದುಬೈನಲ್ಲಿ ನೆಲೆಸಿದ್ದ ಎಮ್ಮೆಮಾಡು ನಿವಾಸಿ ಗಫೂರ್ ಎಂಬಾತನೇ ಜಾಲದ ಮೋಸಕ್ಕೆ ಒಳಗಾದವರು. ಪ್ರಕರಣದಲ್ಲಿ ಶಾಮೀಲಾಗಿದ್ದ ಎಮ್ಮೆಮಾಡುವಿನ ಅಜರುದ್ದೀನ್ (24), ಅಬುಬಕರ್ ಸಿದ್ದಿಕ್ (33), ಹಸೇನಾರ್ (27), ಇರ್ಷಾದ್ (27), ಇರ್ಷಾದ್ ಅಲಿ (27) ಮತ್ತು ಸಮೀರ್ (28) ಬಂಧನಕ್ಕೊಳಗಾದವರು. ಇನ್ನು ಪ್ರಕರಣ ಸಂಬಂಧ ಮಡಿಕೇರಿ ಮಹಿಳಾ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿನಿಯನ್ನು ಕೂಡ ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಆಗಸ್ಟ್ 16 ರಂದು ಈ ಘಟನೆ ನಡೆದಿದೆ. ದೂರುದಾರ ಗಫೂರ್ ದುಬೈನಿಂದ ಎಮ್ಮೆಮಾಡುವಿಗೆ ಮನೆ ಕಟ್ಟುವ ಉದ್ದೇಶದಿಂದ ಆಗಮಿಸಿದ್ದರು. ಮನೆ ನಿರ್ಮಾಣಕ್ಕೆಂದು ಲಕ್ಷಾಂತರ ರೂಪಾಯಿ ಹಣವನ್ನು ತಂದಿದ್ದ ಇವರ ಮೇಲೆ ಅದೇ ಗ್ರಾಮದ ಕರೀಂ ಮತ್ತು ಗ್ಯಾಂಗ್ ಕಣ್ಣಿಟ್ಟು ಸಂಚು ರೂಪಿಸಿದ್ದರಂತೆ. ಮೈಸೂರಿಗೆ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಗೆಂದು ಗಪೂರ್​ ಅವರನ್ನು ಕರೆದೊಯ್ದು ಹೋಂ ಸ್ಟೇಯೊಂದರಲ್ಲಿ ರೂಂ ಬುಕ್ ಮಾಡಿ ಸಂಚು ರೂಪಿಸಿದ್ದರು ಎನ್ನಲಾಗಿದೆ.

ನಂತರ ಗಫೂರ್​ಗೆ ಅಮಲು ಪದಾರ್ಥ ನೀಡಿ ಯುವತಿಯ ಜೊತೆಗಿನ ಅಶ್ಲೀಲ ಫೋಟೋಗಳನ್ನು ತೆಗೆದಿದ್ದಲ್ಲದೇ ದೈಹಿಕ ಹಲ್ಲೆ ನಡೆಸಿ ಬೆದರಿಸಿದ್ದರಂತೆ. 60 ಸಾವಿರ ರೂ. ಹಣ ಹಾಗೂ 50 ಸಾವಿರ ದುಬೈನ ದಿರಾಮ್ ಕರೆನ್ಸಿ ದೋಚಿ, 50 ಲಕ್ಷ ಹಣ ನೀಡು ಇಲ್ಲದಿದ್ದರೆ ಫೋಟೋ, ವಿಡಿಯೋವನ್ನು ಮಾಧ್ಯಮದಲ್ಲಿ ಪ್ರಸಾರ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ತಿಳಿದುಬಂದಿದೆ. ನಂತರ ಗಫೂರ್ ಮನೆಯಿಂದ 3.80 ಲಕ್ಷ ಹಣ ತರಿಸಿಕೊಂಡು ಆರೋಪಿಗಳಿಗೆ ಕೊಟ್ಟಿದ್ದರಂತೆ. ಬಳಿಕ ಈ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಗೆ ಗಫೂರ್ ದೂರು ನೀಡಿದ್ದರು.

ಪೊಲೀಸರ ಮೇಲೆ ಫೈರಿಂಗ್ :
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕರೀಂ ಮತ್ತು ಗ್ಯಾಂಗ್​ನ ಹುಡುಕಾಟಕ್ಕಾಗಿ ಸೆ.26ರಂದು ಎಮ್ಮೆಮಾಡುವಿನ ಮನೆಗೆ ತೆರಳಿದರು. ಈ ವೇಳೆ ಪೊಲೀಸರ ಮೇಲೆ ಕರೀಂ ಗುಂಡಿನ ದಾಳಿ ನಡೆಸಿ ತನ್ನ ಇಬ್ಬರು ಪತ್ನಿಯರೊಂದಿಗೆ ಪರಾರಿಯಾಗಿದ್ದಾನೆ. ಆದ್ರೆ ಅದೇ ಗ್ಯಾಂಗ್​ನ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

120(ಬಿ), 328, 384, 395, 145 ಸೆಕ್ಷನ್ ನಡಿ ಪ್ರಕರಣ ದಾಖಲಿಸಿಕೊಂಡಿದ್ದು ತಲೆಮರೆಸಿಕೊಂಡ ಜಾಲದ ಕಿಂಗ್ ಪಿನ್ ಕರೀಂ ಸೇರಿದಂತೆ ನಾಲ್ವರ ಬಂಧನಕ್ಕೆ ಪೊಲೀಸ್ ಇಲಾಖೆ ಬಲೆ ಬೀಸಿದ್ದು, ಕಾರ್ಯಾಚರಣೆ ಬಿರುಸುಗೊಂಡಿದೆ‌.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ ಪನ್ನೇಕರ್ ಅವರ ಮಾರ್ಗದರ್ಶನದಲ್ಲಿ ಅಪರಾಧ ಪತ್ತೆ ದಳದ ನಿರೀಕ್ಷಕ ಎಂ.ಮಹೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಹಾಯಕ ಉಪನಿರೀಕ್ಷಕ ಹಮೀದ್, ಸಿಬ್ಬಂದಿ ಯೋಗೇಶ್, ನಿರಂಜನ್, ವೆಂಕಟೇಶ್, ಅನಿಲ್ ಕುಮಾರ್, ಕೆ.ಆರ್ ವಸಂತ, ಸುಮತಿ, ಮಹೇಶ್, ರಾಜೇಶದ ಮತ್ತು ಗಿರೀಶ್ ಇದ್ದರು.

ಪ್ರಕರಣದ ಕಿಂಗ್ ಪಿನ್ ಕರೀಂ ಈ ಹಿಂದೆ ಹಲವು ಪ್ರಕರಣಗಳಲ್ಲಿ ಆರೋಪಿತ ಎಂದು ಎಸ್​ಪಿ ಸುಮನ್ ಡಿ ಪನ್ನೇಕರ್ ತಿಳಿಸಿದ್ದಾರೆ.

Intro:ಹನಿಟ್ರ್ಯಾಪ್-ಅಂತರರಾಜ್ಯ ಕಳ್ಳನ ಬಂಧಿಸಿದ ಕೊಡಗು ಪೊಲೀಸರು

ಕೊಡಗು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಅಂತರರಾಜ್ಯ ಮಾಂಸ‌ ದಂಧೆ ಹಾಗೂ ಹನಿಟ್ರ್ಯಾಪ್ ಕಿಂಗ್ ಪಿನ್ ಕರೀಂ ಬಂಧಿಸುವಲ್ಲಿ‌ ಪೊಲೀಸರು ಯಶಸ್ವಿಯಾಗಿದ್ದಾರೆ. ‌

ಕಳೆದ‌ ತಿಂಗಳು ಸ್ನೇಹಿತನನ್ನೆ ಹನಿ ಟ್ರಾಪ್ ಬಲೆಗೆ ಕೆಡವಿದ್ದ ಕರಿಂ
ಆತನ ಸ್ನೇಹಿತ ಗಪೋರ್‌ನಿಂದಲೇ 3 ಲಕ್ಷ ರೂ ಗಳನ್ನು ವಸೂಲಿ ಮಾಡಿದ್ದನು.‌ಈ ಸಂಬಂಧ ಕರೀಂ‌ ವಿರುದ್ಧ ಗಫೂರ್ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿತ್ತು.‌

ಘಟನೆ ವಿವರ: ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ ಡಿ.ಪೆನ್ನೇಕರ್ ಅವರ ಸೂಚನೆಯಂತೆ ಡಿಸಿಐಬಿ ವಿಭಾಗದ ಅಧೀಕ್ಷಕರು ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಆರೋಪಿಯ ಪತ್ತೆಗೆ ಒಂದು ತಂಡವನ್ನು ರಚಿಸಲಾಗಿತ್ತು.‌ ಕರೀಂ ಮನೆಯಲ್ಲಿ ಇರುವುದನ್ನು ಖಚಿತಪಡಿಸಿಕೊಂಡ ಎಎಸ್ಐ ಹಮೀದ್ ನೇತೃತ್ವದ ತಂಡ ಆರೋಪಿಯ ಮನೆ ಬಾಗಿಲು ತಟ್ಟಿ ತನಿಖೆಗೆ ಸಹಕರಿಸುವಂತೆ ಸೂಚಿಸಿದ್ದರು. ಇದಕ್ಕೆ ಕುಪಿತಗೊಂಡ ಕರೀಂ ಹಾಗೂ ಇಬ್ಬರು ಹೆಂಡತಿಯರು ಮನಸ್ಸೋ ಇಚ್ಚೆ ಸಿಬ್ಬಂದಿಗಳನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದರು. ಅಲ್ಲದೆ ಕರೀಂ ಕಿಟಕಿಯಿಂದ ಸಿಬ್ಬಂದಿಗೆ ಗುಂಡು ಹಾರಿಸಿ ಬಂದೂಕು ಸಮೇತ ಕಾಲ್ಕಿತ್ತಿದ್ದನು. ಹಾರಿಸಿದ ಗುಂಡು ಕಾಂಪೌಂಡ್‌ಗೆ ತಗುಲಿ ಕೂದಲೆಳೆ ಅಂತರದಲ್ಲಿ ಎಎಸ್ಐ ಹಮೀದ್ ಪಾರಾಗಿದ್ದರು.ತನಿಖೆಗೆ ಸಹಕರಿಸದೆ ಪೊಲೀಸರ ಮೇಲೆಯೇ ಗುಂಡು ಹಾರಿಸಿದ ಹಿನ್ನಲೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಆರೋಪಿ ಕರೀಂ ಹಾಗೂ ಇಬ್ಬರು ಹೆಂಡತಿಯರ ವಿರುದ್ಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.Body:0Conclusion:0
Last Updated : Sep 27, 2019, 9:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.